Breaking News
Home / ಗೋಕಾಕ / ರೈತ ವಿರೋದಿ ಕಾಯ್ದೆ ರದ್ದಾಗುವ ತನಕ ನಮ್ಮ ಹೊರಾಟ ನಿಲ್ಲದು : ಮಂಜು‌ ಪೂಜೇರಿ*

ರೈತ ವಿರೋದಿ ಕಾಯ್ದೆ ರದ್ದಾಗುವ ತನಕ ನಮ್ಮ ಹೊರಾಟ ನಿಲ್ಲದು : ಮಂಜು‌ ಪೂಜೇರಿ*

Share The News

*ರೈತ ವಿರೋದಿ ಕಾಯ್ದೆ ರದ್ದಾಗುವ ತನಕ ನಮ್ಮ ಹೊರಾಟ ನಿಲ್ಲದು : ಮಂಜು‌ ಪೂಜೇರಿ

*ನರ್ಸಿಂಗ ಪರೀಕ್ಷಾರ್ಥಿಗಳ ವಾಹನ ಬಿಟ್ಟು ಮಾನವಿಯತೆ ಮೆರೆದ ರೈತರು*

ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆ ರದ್ದತಿಗೆ ಅಗ್ರಹಿಸಿ ದೇಶವ್ಯಾಪಿ ಬಂದಗೆ ಕರೆ ನೀಡಿದ ಹಿನ್ನೆಲೆಯಲ್ಲಿ
ಹಾಗೂ ಗಡಿಯಲ್ಲಿ ಪ್ರತಿಬಟನೆ ನಡೆಸುತ್ತಿರುವ ರೈತರ ಬೇಡಿಕೆ ಇಡೆರದ ಕಾರಣ ಭಾರತ ಬಂದಗೆ ರೈತ ಸಂಘಟನೆಗಳು ಕರೆ ಕೊಟ್ಟಿತ್ತು,

ಅದರ ಬೆನ್ನಲ್ಲೆ ಗೋಕಾಕ ತಾಲೂಕಿನ ಘಟಪ್ರಭಾದ ಮೃತ್ಯುಂಜಯ ವೃತ್ತದಲ್ಲಿ ಕರ್ನಾಟಕ ರೈತ ಸಂಘದ ನೂರಾರು ಕಾರ್ಯಕರ್ತರು ಪಾದಯಾತ್ರೆ ಮಾಡು ಮೂಲಕ ಬಂದು ಪ್ರತಿಬಟನೆ ಮಾಡುತ್ತಾ ರೈತ ವಿರೋದಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಮಾನವ ಸರಪಳಿ ಮಾಡಿ ಸ್ಥಳದಲ್ಲೇ ಉಪಹಾರ ಸ್ವಿಕರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದಕ್ಷ ಚೂನಪ್ಪ ಪೂಜೇರಿ ಬಣದ ತಾಲೂಕಾ ಅದ್ಯಕ್ಷ ಮಂಜುನಾಥ ಪೂಜೇರಿ ಮಾತನಾಡಿ ಕೇಂದ್ರ ಸರ್ಕಾರ ಮಾಡಿದ ಕಾಯ್ದೆಗಳು ಚುನಾವಣೆಯಲ್ಲಿ ತಮಗೆ ಬಿಕ್ಷೆ ನೀಡುವ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಲಿಕ್ಕೆ ಹೊರತು ರೈತರಿಗಲ್ಲ ಮತ್ತು ಇವರು ತಂದ ಕಾಯಿದೆಗಳು ರೈತರ ಬಾಳಿಗೆ ಕೊಳ್ಳೆ ಇಡುವ ಕಾಯ್ದೆಗಳು ಎಂದು ಸರ್ಕಾರದ
ವಿರುದ್ದ ಕಿಡಿಕಾರಿದರು.

ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಸಂಚಾಲಕರಾದ ಚೂನಪ್ಪ ಪೂಜೇರಿ ಮಾತನಾಡಿ ರಾಜ್ಯದಲ್ಲಿ ಪ್ರತಿಬಟನೆ ಮಾಡಿದರೆ ರಾಜಕೀಯ ಬಣ್ಣ ಹಚ್ಚುತ್ತೀರಿ, ಈಗ ದಿಲ್ಲಿಯಲ್ಲಿ ಪ್ರತಿಬಟನೆ ಮಾಡುತ್ತಿರುವ ರೈತರಿಗೆ ದಲ್ಲಾಳಿಗಳೆಂದು ಹೇಳುತ್ತಿದ್ದಿರಿ, ನಾವು ಯಾರಿಗೂ ದುಡ್ಡು ಕೊಟ್ಟು ಕರೆದು ತಂದಿಲ್ಲ ರೈತರು ಯಾರ ದಲ್ಲಾಳಿಗಲ್ಲ.ತಾವು ಕೂಡ ರೈತರ ಮಕ್ಕಳಿದ್ದಿರಿ ರೈತರ ಬಗ್ಗೆ ಹೀಗೆ ಹೇಳಲಿಕ್ಕೆ ನಾಚಿಕೆಯಾಗಬೇಕೆಂದರು. ಅದಲ್ಲದೆ ತಾವು ಜಾರಿಮಾಡಿದ ಮೂರು ಕಾಯ್ದೆಗಳನ್ನು ರದ್ದು ಮಾಡುವ ತನಕ ನಾವು ಹೊರಾಡುತ್ತೇವೆ ಎಂದರು.

ಪ್ರತಿಬಟನೆ ಮಾಡುತಿದ್ದ ವೇಳೆಯಲ್ಲಿ ಟ್ರಾಪಿಕ್ ಆಗಿದ್ದರಿಂದ ನರ್ಸಿಂಗ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳಿಗೆ ರೈತ ಸಂಘಟನೆಯವರು ಅವರ ವಾಹನ ಬಿಟ್ಟು ಮಾನವಿಯತೆ ಮೆರೆದರು.

ಈ ಸಂದರ್ಭದಲ್ಲಿ ಪ್ರತಿಬಟನಾಕಾರರಿಂದ ಯಾವುದೆ ಅಹಿತಕರ ಘಟನೆ ನಡೆಯದಂತೆ ಬೀಗಿ ಪೋಲಿಸ್ ಬಂದೊಬಸ್ತ್ ಎರ್ಪಡಿಸಲಾಗಿತ್ತು. ಈ ಸಮಯದಲ್ಲಿ ನೂರಾರು ಹಸಿರು ಸೇನೆ ಮತ್ತು ರೈತ ಸಂಘದ ನೂರಾರು ರೈತರು ಪಾಲ್ಗೊಂಡಿದ್ದರು.


Share The News

About fast9admin

Check Also

ಮೂಡಲಗಿ ಸಿಪಿಐ ಮುರನಾಳ ಮೇಲೆ ಕ್ರಮಕೈಗೊಳ್ಳಲು ಎಸ್ಪಿ ಅವರಿಗೆ ಮನವಿ

Share The News  ಮೂಡಲಗಿ : ಗುರುವಾರ ಬೆಳ್ಳಿಗೆ ಪತ್ರಿಕೆ ವಿತರಿಸಿಸುವಾಗ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸ್ಥಳೀಯ ಸಿಪಿಐ ವೆಂಕಟೇಶ …

Leave a Reply

Your email address will not be published. Required fields are marked *

error: Content is protected !!