Breaking News
Home / Uncategorized / ಗ್ರಾಮ ಪಂಚಾಯತ್ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿದರೆ ಸದಸ್ಯತ್ವ ರದ್ದು..!

ಗ್ರಾಮ ಪಂಚಾಯತ್ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿದರೆ ಸದಸ್ಯತ್ವ ರದ್ದು..!

Share The News

ಬೆಂಗಳೂರು,ಡಿ.9- ಇನ್ನು ಮುಂದೆ ಗ್ರಾಮ ಪಂಚಾಯತ್ ಸದಸ್ಯರನ್ನು ಚುನಾವಣೆ ನಡೆಸದೆ, ಹರಾಜು ಹಾಕಿ ಅವಿರೋಧವಾಗಿ ಆಯ್ಕೆ ಮಾಡಿದರೆ ಅಂತಹವರ ಸದಸ್ಯತ್ವ ಅನರ್ಹಗೊಳ್ಳಲಿದೆ. ರಾಜ್ಯದ ನಾನಾ ಕಡೆ ಕುರಿ, ಕೋಳಿಗಳನ್ನು ಸಂತೆಯಲ್ಲಿ ಹಾರಾಜು ಹಾಕಿದಂತೆ ಗ್ರಾಮ ಪಂಚಾಯತ್ ಸದಸ್ಯರನ್ನೂ ಲಕ್ಷ ಲಕ್ಷಗಳ ಹೆಸರಿನಲ್ಲಿ ಬಹಿರಂಗವಾಗಿಯೇ ಹರಾಜು ಹಾಕುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಸದಸ್ಯರನ್ನೇ ಹರಾಜು ಹಾಕುವ ಪ್ರವೃತ್ತಿಗೆ ಕಡಿವಾಣ ಹಾಕಲು ತೀರ್ಮಾನಿಸಿದೆ.

ಈಗಿರುವ ಕಾನೂನಿಗೆ ತಿದ್ದುಪಡಿ ಮಾಡಿ, ಹಣ ಕೊಟ್ಟು ಹರಾಜಿನಲ್ಲಿ ಆಯ್ಕೆಯಾಗಿರುವುದು ಸಾಬೀತಾದರೆ, ಅಂತಹ ಸದಸ್ಯರ ಸದಸ್ಯತ್ವವನ್ನೇ ಅನರ್ಹಗೊಳಿಸುವ, ಹಾಗೂ ದಂಡ ಮತ್ತು ಶಿಕ್ಷೆ ವಿಸುವ ನಿಯಮವನ್ನು ಜಾರಿಗೊಳಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಈ ಅನಿಷ್ಟ ಪದ್ದತಿಯನ್ನು ಕೊನೆಗಾಣಿಸಲೇಬೇಕೆಂಬ ದೃಡ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ರಾಜ್ಯದಲ್ಲಿ ಗ್ರಾಮಪಂಚಾಯ್ತಿ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಕಲಬುರಗಿ, ಬೀದರ್, ಮಂಡ್ಯ, ಯಾದಗಿರಿ, ಬೆಳಗಾವಿ ಸೇರಿದಂತೆ ಅನೇಕ ಕಡೆ ಗ್ರಾಮಪಂಚಾಯತಿ ಚುನಾವಣೆ ನಡೆಸದೆ ಬಹಿರಂಗವಾಗಿ ಸದಸ್ಯರನ್ನೇ ಹರಾಜು ಹಾಕಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಗ್ರಾಮಗಳ ಅಭಿವೃದ್ದಿ, ದೇವಸ್ಥಾನ ಅಭಿವೃದ್ಧಿ ಹೆಸರಿನಲ್ಲಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಒಬ್ಬೊಬ್ಬ ಸದಸ್ಯರಿಗೆ 8ರಿಂದ 10 ಲಕ್ಷದವರೆಗೂ ಹರಾಜು ಹಾಕಲಾಗುತ್ತಿತ್ತು. ಬಹುತೇಕ ಕಡೆ ಇದು ಮತ್ತೆ ಮರುಕಳುಹಿಸಬಹುದೆಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದನ್ನು ಕೊನೆಗಾಣಿಸಲು ಮುಂದಾಗಿದೆ.

ಇನ್ನು ಮುಂದೆ ಯಾವ ಪಂಚಾಯ್ತಿಗಳಲ್ಲಿ ಸದಸ್ಯರನ್ನು ಹರಾಜು ಹಾಕುತ್ತಾರೋ ಅಂತಹ ಕಡೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಗ್ರಾಮಪಂಚಾಯ್ತಿಗೆ ಆಡಳಿತಾಕಾರಿ ನೇಮಕ ಮಾಡಲು ಚಿಂತಿಸಿದೆ. ಪಿಡಿಒಗಳೇ ಆಡಳಿತಾಕಾರಿಗಳಾಗಿ ನೇಮಕವಾಗಲಿದ್ದು, ಇಡೀ ಆಡಳಿತ ವ್ಯವಸ್ಥೆ ಅವರ ಕೈಯಲ್ಲಿರುತ್ತದೆ.

About fast9admin

Check Also

ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ*

Share The News ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ *ಮೂಡಲಗಿ :* …

Leave a Reply

Your email address will not be published. Required fields are marked *

error: Content is protected !!