Breaking News
Home / ರಾಜ್ಯ / ಬೆಳಗಾವಿ / ನಾವೇನು ದಿನಗೂಲಿ ನೌಕರರಲ್ಲ ನಮನ್ನು ಸರಕಾರಿ ನೌಕರರನ್ನಾಗಿ ಮಾಡಿ

ನಾವೇನು ದಿನಗೂಲಿ ನೌಕರರಲ್ಲ ನಮನ್ನು ಸರಕಾರಿ ನೌಕರರನ್ನಾಗಿ ಮಾಡಿ

Share The News

 

ಗೋಕಾಕ : ಎಲ್ಲರಂತೆ ನಾವು ಸಹ ಕಷ್ಟಪಟ್ಟು ದುಡಿಯುವ ಮೂಲಕ ಜನಸಾಮಾನ್ಯರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇದನ್ನು ಅರಿತು ರಾಜ್ಯ ಸರಕಾರ ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಸಾರಿಗೆ ನೌಕರರು ಗೋಕಾಕದಲ್ಲಿ ಬಸ್ಸುಗಳನ್ನು ಬಂದ್ ಮಾಡಿ ಆಗ್ರಹಿಸಿದರು.

ಸಾರಿಗೆ ಸಂಸ್ಥೆಗಳು ಉತ್ತಮ ಲಾಭದೊಂದಿಗೆ ಚಲಿಸುತ್ತಲಿದೆ. ಹೀಗಾಗಿ ಸಂಸ್ಥೆಗೆ ಯಾವುದೇ ನಷ್ಟ ಇಲ್ಲ ನಮಗೆ ಸಂಬಳ, ಇನ್ನಿತರ ಸೌಲಭ್ಯ ನೀಡಿದರೆ ಸರಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎನ್ನುವುದು ಸರಿಯಲ್ಲ.ಎಂದು ಪ್ರತಿಭಟನಾಕಾರರು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಸಮಾನ ವೇತನ ನೀಡಬೇಕು.

ನಾವೇನು ದಿನಗೂಲಿ ನೌಕರರಲ್ಲ, ನಮ್ಮಿಂದ ಹಗಲು ರಾತ್ರಿ ಕೆಲಸ ಮಾಡಿಸಿಕೊಂಡು ಮಲತಾಯಿ ದೊರಣೆ ಮಾಡುತಿದ್ದಾರೆ.
ಸರಿಯಾಗಿ ಸರಕಾರ ಅಗತ್ಯ ಸೌಲಭ್ಯ ನೀಡದೆ ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಸಾರಿಗೆ ನೌಕರರ ಪ್ರತಿಭಟನೆ ಬೆಂಬಲಿಸಿ ಮಾತನಾಡಿದ ಎಲ್,ಜಿ,ಪಾಟೀಲ ಇವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಹೋರಾಟ ನ್ಯಾಯಯುತವಾಗಿದೆ,ಅವರ ಬೇಡಿಕೆ ಈಡೆರಿಸದ ಕಾರಣ ಇವತ್ತು ಸಾರಿಗೆ ನೌಕರರು ಬೀದಿಗೆ ಬಂದಿರುವ ಪರಿಸ್ಥಿತಿ ಬಂದಿದೆ ,ಅದಕ್ಕಾಗಿ ರಾಜ್ಯ ಸರಕಾರ ಕೂಡಲೇ ಇವರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.

ಇದೆ ಸಂದರ್ಭದಲ್ಲಿ ಗೋಕಾಕ ಘಟಕ ವ್ಯವಸ್ಥಾಪಕರು ಬಸ್ಸಿನ ಸಂಚಾರ ಇಲ್ಲದ ಕಾರಣ ಪ್ರಯಾಣಿಕರಿಗೆ ಹಣ ಹಿಂದುರುಗಿಸದ ಕಾರಣ ಸ್ಥಳದಲ್ಲಿದ್ದ ನಿರ್ವಾಹಕರೊಬ್ಬರಿಗೆ ಎಲ್ಲ ಸಿಬ್ಬಂದಿಗಳು ಸೇರಿಕೊಂಡು ಹಣ ಸೇರಿಸಿ ಪ್ರಯಾಣಿಕರಿಗೆ ಹಿಂದುರುಗಿಸಿದ ಘಟನೆ ನಡೆಯಿತು.

ಬಸ್ಸುಗಳನ್ನು ಬಂದ್ ಮಾಡಿದ್ದರಿಂದ ಪರ ಊರಿಗೆ ಹೋಗಬೇಕಾಗಿದ್ದ ಸಾರ್ವಜನಿಕರು ಪರದಾಡುವಂತಾಯಿತು‌.


Share The News

About Fast9 News

Check Also

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

Share The News  ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು …

Leave a Reply

Your email address will not be published. Required fields are marked *

error: Content is protected !!