Breaking News
Home / Uncategorized / ದುಪಧಾಳ ಭೀಮ‌ ಆರ್ಮಿಯಿಂದ ಪ್ರಪ್ರಥಮ ಕೊರೆಗಾಂವ ವಿಜಯೋತ್ಸವ

ದುಪಧಾಳ ಭೀಮ‌ ಆರ್ಮಿಯಿಂದ ಪ್ರಪ್ರಥಮ ಕೊರೆಗಾಂವ ವಿಜಯೋತ್ಸವ

Share The News

ದುಪಧಾಳ ಭೀಮ‌ ಆರ್ಮಿಯಿಂದ ಪ್ರಪ್ರಥಮ ಕೊರೆಗಾಂವ ವಿಜಯೋತ್ಸವ

ಗೋಕಾಕ :ಆದುನಿಕ‌ ಯುಗದಲ್ಲಿ ಮೊಬೈಲ ಜೊತೆ ಹೊಸ ವ್ಯವಸ್ಥೆಗಳು ಬಂದರು ಸಹ ನಮ್ಮ‌ಜನ ಇತಿಹಾಸ ಗೊತ್ತಿಲ್ಲದೆ ಆದುನಿಕ ಯುಗದಲ್ಲಿ ಅನಾಚಾರದ ಬದುಕನ್ನುಬದುಕುತಿದ್ದಾರೆ.ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಭೀಮಾ ಕೊರೆಗಾಂವ ವಿಜಯೋತ್ಸವದ ಕಾರ್ಯಕ್ರಮ ದಲ್ಲಿ ಬಾಬಾ ಸಾಹೇಬ ಅಂಬೇಡ್ಕರ ಹಾಗೂ ಟಿಪ್ಪು ಸುಲ್ತಾನ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ
ಸ್ಥಳಿಯ ಭೀಮ‌ ಆರ್ಮಿಯ ಮುಖಂಡ ಸಂತೋಷ ದೊಡಮನಿಯವರು
ಕೊರೆಗಾಂವ ಯುದ್ದ ನಮ್ಮ, ಅಸ್ಮಿಯತೆಯ,ಪರಾಕ್ರಮದ,ಮೇಲಿನ ನಾವು ಗೆದ್ದಿರುವಂತಹ ಯುದ್ದ ಅದನ್ನು ಆಚರಿಸಲು ಪ್ರತಿ ವರ್ಷ ಬಾಬಾ ಸಾಹೇಬರು ಪುಣೆಯಿಂದ ಬಂದು ಕೊರೆಗಾಂವದಲ್ಲಿ ಬೀಮಾ ಕೊರೆಗಾಂವ ವಿಜಯೋತ್ಸವ ಆಚರಿಸುತಿದ್ದರು ಅದರೆ ಅವರು ಈಗ ಇಲ್ಲದಿದ್ದರೆ ಎನಾಯಿತು ಅವರ ವಂಶಸ್ಥರಾದ ನಾವುಗಳು ಕೇವಲ ಕೊರೆಗಾಂವದಲ್ಲಿ ಮಾತ್ರವಲ್ಲದೆ ಪ್ರತಿ ಹಳ್ಳಿ ಹಳ್ಳಿಯಲ್ಲೂ ಕೊರೆಗಾಂವ ವಿಜಯೋತ್ಸವ ಅಚರಿಸುತ್ತೇವೆ.ಕೇವಲ 500 ಜನ ಸೇರಿ 28 ಸಾವಿರ ವಿರೋದಿಗಳ ಹುಟ್ಟಡಗಿಸಿದ ನಾವುಗಳು ನಾಳೆ ನಾವೆಲ್ಲರೂ ಒಂದಾದರೆ ದೇಶ ಆಳುವವರು ನಾವು ಎಂದು ನುಡಿದರು.

ಈ ಸಂದರ್ಭದಲ್ಲಿ ಮಾನವ ಬಂದುತ್ವ ವೇದಿಕೆಯ ಮುಖಂಡ ರಾಮಕೃಷ್ಣ ಮಾತನಾಡಿ ನಮ್ಮ ದೇಶ ಜಾತ್ಯಾತೀತ ರಾಷ್ಟ್ರ ನಾವೆಲ್ಲಾ ಭಾರತಿಯರೆಂದು ಬಾಬಾ ಸಾಹೇಬರ ವಿದಾನ ಪೀಠಿಕೆಯಲ್ಲಿ ಅಂಬೇಡ್ಕರ್ ಅವರು ಬರೆದಿದ್ದಾರೆ ಅವರ ಮಾರ್ಗದರ್ಶನದಂತೆ ನಡೆದು ಅವರ ವಿಚಾರಗಳನ್ನು ನಮ್ಮ ಸಮುದಾಯವಷ್ಟೆ ಅಲ್ಲದೆ ಬೇರೆ ಸಮುದಾಯದವರಿಗೂ ತಿಳಿಸಬೇಕಾಗಿದೆ ಎಂದರು. ಅದಲ್ಲದೆ ಗೋಕಾಕ ದಲಿತ ಮುಖಂಡ ಲೋಹಿತ ಗೌಡ ಮಾತನಾಡಿ ನಮ್ಮ ಯುವ ಪಿಳಿಗೆ ಹಾಗೂ ನಮ್ಮ ಸಮುದಾಯದವರು ಮೊಬೈಲ, ದಾರಾವಾಹಿಗಳ ಮೊರೆ ಹೋಗಿ ಇತಿಹಾಸ ಮರೆಯುತಿದ್ದಾರೆ.ಆದರೆ ದುಪದಾಳ ಗ್ರಾಮದ ಯುವಕರು ಕೊರೆಗಾಂವ ವಿಜಯೋತ್ಸವ ಆಚರಿಸುವ ಮೂಲಕ ಇತಿಹಾಸವನ್ನು ನೆನಪಿಸುತಿದ್ದಾರೆ ಅವರಿಗೆ ನಾವೆಲ್ಲರೂ ಚಿರರುಣಿಯಾಗಿರಬೇಕೆಂದು ಹೇಳಿದರು, ಕೊರೆಗಾಂವ ಯುದ್ದ ಯಾವುದೋ ಕಾಗಕ್ಕನ,ಗುಬ್ಬಕ್ಕನ ಕಥೆಯಲ್ಲಿ ಇದು ನಮ್ಮ ಶೌರ್ಯವನ್ನು ತೋರಿಸುವ ರೊಮಾಂಚನದ ಕಥೆ ಎಂದರು.

ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡರಾದ ಹನಮಂತ ಗಾಡಿವಡ್ಡರ, ಜಗದಾಳ, ಸಿ,ಆರ್,ಪಿ,ರಮೇಶ ಕೊಲಕಾರ, ದಲಿತ ಮುಖಂಡ ಸತೀಶ ಹರಿಜನ, ಸುನೀಲ ಹಾಗೂ ಇನ್ನೂಳಿದ ದಲಿತ ಮತ್ತು ಮುಸ್ಲಿಂ ಮುಖಂಡರು ಉಪಸ್ಥಿರಿದ್ದು ವೇದಿಕೆ ಮೇಲೆ ಆಸಿನರಾದ ಎಲ್ಲ ಗಣ್ಯನರಿಗೆ ಭೀಮ‌ ಆರ್ಮಿಯ ಸದಸ್ಯರಿಂದ ಸತ್ಕರಿಸಿ ಸನ್ಮಾನಿಸಲಾಯಿತು


Share The News

About fast9admin

Check Also

ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ**

Share The Newsದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ *ಗೋಕಾಕ :* ಬಿಜೆಪಿಯು ಅತ್ಯಂತ ಪ್ರಬಲ …

Leave a Reply

Your email address will not be published. Required fields are marked *

error: Content is protected !!