Breaking News
Home / ರಾಜ್ಯ / ಬೆಂಗಳೂರು ನಗರ / ಮಾಜಿ ಸಚಿವ ರಮೇಶ ಜಾರಕಿಹೋಳಿಯ ನಕಲಿ ಸಿಡಿ ಮಾಡಿದವರನ್ನು ವಶಕ್ಕೆ ಪಡೆದು ವಿಚಾರಿಸುತ್ತಿರುವ SIT ತಂಡ.

ಮಾಜಿ ಸಚಿವ ರಮೇಶ ಜಾರಕಿಹೋಳಿಯ ನಕಲಿ ಸಿಡಿ ಮಾಡಿದವರನ್ನು ವಶಕ್ಕೆ ಪಡೆದು ವಿಚಾರಿಸುತ್ತಿರುವ SIT ತಂಡ.

Share The News

ಮಾಜಿ ಸಚಿವ ರಮೇಶ ಜಾರಕಿಹೋಳಿಯ ನಕಲಿ ಸಿಡಿ ಮಾಡಿದವರನ್ನು ವಶಕ್ಕೆ ಪಡೆದು ವಿಚಾರಿಸುತ್ತಿರುವ SIT ತಂಡ.

ರಮೇಶ್ ಜಾರಕಿಹೊಳಿ ನಕಲಿ ಸಿಡಿ ವೀಡಿಯೋ ಬಹಿರಂಗ ಪ್ರಕರಣದಲ್ಲಿ ಬಂಧಿತರಾಗಿರುವ ಐವರ ಬಗ್ಗೆ ಇಲ್ಲಿದೆ ಹೆಚ್ಚಿನ‌ ಮಾಹಿತಿ.
ಮೊದಲು ಹೆಸರು ಗೊತ್ತಾಗದ ಓರ್ವನನ್ನು ವಶಕ್ಕೆ ಪಡೆದ SIT ತನಿಖಾ ತಂಡ ಶುಕ್ರವಾರ ಬೆಳಗ್ಗೆಯಿಂದ ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಿತು.
ನಂತರ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ಮತ್ತೊಬ್ಬ ಯುವಕನನ್ನು SIT ವಶಕ್ಕೆ ಪಡೆದು ಬೆಂಗಳೂರಿನಲ್ಲಿ ವಿಚಾರಣೆಗೆ ಕರೆತಂದಿದೆ.
ಇದೇ ವೇಳೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹ್ಯಾಕಿಂಗ್ ಎಕ್ಸ್ ಪರ್ಟ್ ಎನ್ನಲಾದ ಯುವಕನನ್ನು SIT ವಶಕ್ಕೆ ಪಡೆದು ಸಿಐಡಿ ಕಚೇರಿಗೆ ವಿಚಾರಣೆಗೆ ಕರೆತಂದಿತು.
ಮತ್ತೊಂದೆಡೆ ಅತ್ಯಂತ ಮಹತ್ವದ ಬೇಟೆಯಾಗಿ ರಾಮನಗರದಲ್ಲಿ ಸರಕಾರಿ ಉದ್ಯೋಗಿಯಾಗಿದ್ದ ಓರ್ವ ಯುವತಿಯನ್ನು SIT ತನಿಖಾ ತಂಡ ವಶಕ್ಕೆ ಪಡೆದಿದೆ. ‌ರಾಮನಗರದ ಈ ಯುವತಿ ಸಿಡಿಯಲ್ಲಿದ್ದ ಯುವತಿಯೊಂದಿಗೆ ಬೆಂಗಳೂರಿನಲ್ಲಿ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ. ಅಲ್ಲದೆ ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದ ಮತ್ತೊಬ್ಬ ಯುವಕನನ್ನು SIT ವಶಕ್ಕೆ ಪಡೆದಿದೆ.
ರಾಮನಗರದ ಸರಕಾರಿ ಉದ್ಯೋಗಿಯಾಗಿರುವ ಯುವತಿ ಬೆಂಗಳೂರಿನ ವಿಜಯನಗರದ ಯುವಕನ ಸ್ನೇಹಿತೆ ಎಂದು ಗೊತ್ತಾಗಿದೆ.
ಆದ್ದರಿಂದ ರಾಮನಗರದ ಸರಕಾರಿ ಉದ್ಯೋಗಿ ಯುವತಿ ಮತ್ತು ವಿಜಯನಗರದ ಯುವಕನ SIT ವಿಚಾರಣೆಯಿಂದ ಬಹುತೇಕ ಸಿಡಿಯಲ್ಲಿರುವ ಯುವತಿಯು ಶೀಘ್ರವೇ SIT ಪೊಲೀಸರ ಬಲೆಗೆ ಬೀಳುತ್ತಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Share The News

About Fast9 News

Check Also

ಸರ್ಕಾರಿ ಶಿಕ್ಷಕರ ನೇಮಕಾತಿಗೆ ತಿದ್ದುಪಡಿ ತಂದ ರಾಜ್ಯ ಬಿಜೆಪಿ ಸರ್ಕಾರ!

Share The Newsಸರ್ಕಾರಿ ಶಿಕ್ಷಕರ ನೇಮಕಾತಿಗೆ ತಿದ್ದುಪಡಿ ತಂದ ರಾಜ್ಯ ಬಿಜೆಪಿ ಸರ್ಕಾರ! ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ …

Leave a Reply

Your email address will not be published. Required fields are marked *

error: Content is protected !!