Breaking News
Home / Uncategorized / ವೈದ್ಯರು ಕೂಡ ಜೀವ ಉಳಿಸುವ ಸೈನಿಕರಿದ್ದಂತೆ : ಸಂಜು ಖನಗಾಂವಿ

ವೈದ್ಯರು ಕೂಡ ಜೀವ ಉಳಿಸುವ ಸೈನಿಕರಿದ್ದಂತೆ : ಸಂಜು ಖನಗಾಂವಿ

Share The News

ವೈದ್ಯರು ಕೂಡ ಜೀವ ಉಳಿಸುವ ಸೈನಿಕರಿದ್ದಂತೆ : ಸಂಜು ಖನಗಾಂವಿ

ಗೋಕಾಕ ತಾಲೂಕಿನ ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ತಮ್ಮ ಜನಸೇವಕ ಸಂಜೀವ ಖನಗಾಂವಿ ಇವರು ತಮ್ಮ ಜೀವ ಪಣಕ್ಕಿಟ್ಟು ಜನಸೇವೆ ಮಾಡಿದ
ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ, ಸಿಬ್ಬಂದಿಗಳಿಗೆ ಮತ್ತು ಪತ್ರಕರ್ತರಿಗೆ ಶಾಲು ಹೊದಿಸಿ ಕೇಕ್ ಕಟ್ ಮಾಡಿ,ಸಿಹಿ ನೀಡುವುದರ ಮೂಲಕ ಗೌರವಿಸಲಾಯಿತು.

ಇನ್ನು ಗೌರವ ಸ್ವಕರಿಸಿ ಮಾತನಾಡಿದ ಸ್ಥಳಿಯ ವೈದ್ಯರದ ಜ್ಯೋತಿ ಅಂಗಡಿಯವರು ನಮ್ಮನ್ನು ಗೌರವಿಸಿದ್ದು ನಮ್ಮೆಲ್ಲರ ಸೇವೆಗೆ ಆತ್ಮ ಸ್ಥೈರ್ಯ ತುಂಬಿದಂತಾಗಿದೆ,ಆದರೆ
ವೈದ್ಯರು ದೇವರಲ್ಲ ಚಿಕಿತ್ಸೆಗೆ ಒಳಗಾದವರ ಜೀವ ಕಾಪಾಡುವ ದೇವರ ಸ್ವರೂಪಿಗಳಷ್ಟೆ ಆದರೆ ಇವತ್ತು ತಮ್ಮ ಜೀವದ ಹಂಗನ್ನು ಮರೆತು ಕೊರೊನಾ ಸಮಯದಲ್ಲಿ ಹಲವಾರು ಜೀವ ಉಳಿಸಿದ ವೈದ್ಯರ ಮೇಲೆ ಹಲ್ಲೆಯಾಗಿವೆ ಅದು ನಿಲ್ಲಬೇಕಾಗಿದೆ.ವೈದ್ಯರು ಜೀವ ಉಳಿಸಲು ಕೊನೆಯ ಪ್ರಯತ್ನದ ವರೆಗೂ ಹೊರಾಡುತ್ತಾರೆ ಎಂದರು .

ಅದಲ್ಲದೆ ಅಬಿನಂದನೆ ಸಲ್ಲಿಸಿ ಮಾತನಾಡಿದ ಸಂಜಯ ಖನಗಾಂವಿ ಇವರು ದೇಶ ಕಾಯುವದಕ್ಕೆ ಸೈನಿಕ, ಅಣ್ಣ ನೀಡುವ ರೈತನಂತೆ, ಕೊರೊನಾ ಸಮಯದಲ್ಲಿ ಜೀವ ಉಳಿಸಿದ ವೈದ್ಯರು ಕೂಡ ದೇಶಕ್ಕಾಗಿ ಹೊರಾಡುವ ಸೈನಿಕರಂತೆ ಎಂದರು,ಅವರಂತೆ ನಮ್ಮ ಮಕ್ಕಳನ್ನು ಜನಸೇವೆಗಾಗಿ ವೈದ್ಯರನ್ನಾಗಿ ಮಾಡುತ್ತೇನೆಂದು ತಮ್ಮ ಆಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರೀತಿ ಖನಗಾಂವಿ,ಚಂದ್ರು ಉಡುಪಿ,ಸತ್ತೆಪ್ಪ ದಪ್ಪಾದೂಳಿ,ಶ್ರೀದರ ದಾದನ್ನವರ,ದರೆಪ್ಪಾ ಪಾಟೀಲ,ಉಮೇಶ ಇನಾಮದಾರ,ಅಣ್ಣಪ್ಪಾ ಬೆಳವಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಂಬಗಿ, ಸುಗಂದಿ ಬದಾಮಿ,ತಬಸುಮ್ ಮುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Share The News

About Fast9 News

Check Also

ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ*

Share The News ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ *ಮೂಡಲಗಿ :* …

Leave a Reply

Your email address will not be published. Required fields are marked *

error: Content is protected !!