Breaking News
Home / Uncategorized / ಕುರುಬ ಸಮುದಾಯದವರಿಗೆ DCM ಮತ್ತು ಸಚಿವ ಸ್ಥಾನ ನಿಡಲು ರಾಮು ಕೊಣಿ ಒತ್ತಾಯ.

ಕುರುಬ ಸಮುದಾಯದವರಿಗೆ DCM ಮತ್ತು ಸಚಿವ ಸ್ಥಾನ ನಿಡಲು ರಾಮು ಕೊಣಿ ಒತ್ತಾಯ.

Share The News

ಕುರುಬ ಸಮುದಾಯದವರಿಗೆ DCM ಮತ್ತು ಸಚಿವ ಸ್ಥಾನ ನಿಡಲು ರಾಮು ಕೊಣಿ ಒತ್ತಾಯ.

ಗೋಕಾಕ:-ರಾಜ್ಯ ರಾಜಕಾರಣ ಕೇಂದ್ರಿತವಾಗಿರುವುದು ಜಾತಿಯಲ್ಲಿಯೇ, ಜಾತಿ ಇಲ್ಲದೇ ರಾಜಕೀಯ ಮಾಡಲು ಸಾಧ್ಯವಿಲ್ಲ ಹಾಗಾಗಿ ಹಿಂದುಳಿದ ವರ್ಗಗಳ ಪರ ಧ್ವನಿ ಎತ್ತದೆ ಅನ್ಯಮಾರ್ಗವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ಸಂಗೊಳ್ಳಿ ರಾಯಣ್ಣ ಸ್ಮಾರಕ ಪ್ರಾಧಿಕಾರ ಹೋರಾಟ ರಚನಾ ಸಮಿತಿ, ಗೋಕಾಕ ತಾಲೂಕಾ ಉಪಾಧ್ಯಕ್ಷ ರಾಮು ಕೋಣಿ ತಿಳಿಸಿದರು.

ಹೌದು ರಾಜ್ಯ ಬಿಜೆಪಿಯಲ್ಲಿರುವ ಹಿಂದುಳಿದ ವರ್ಗಗಳ ಏಕೈಕ ನಾಯಕ ಈಶ್ವರಪ್ಪ ಅವರೊಂದಿಗೆ ಕುರುಬ ಸಮುದಾಯ ಇದ್ದು, ಹಿಂದುಳಿದ ಸಮುದಾಯಕ್ಕೆ ಮನ್ನಣೆ ನೀಡುವ ನಿಟ್ಟಿನಲ್ಲಿ ಮಾಜಿ ಸಿಎಂ ಬಿಎಸ್‌ವೈ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ನಡ್ಡ ಅವರಿಗೆ ಮನವಿ ಮಾಡುತ್ತೆನೆ.

ರಾಜ್ಯದ ದೊಡ್ಡ ಸಮುದಾಯದ ನಾಯಕರಾಗಿರುವ ಕೆ.ಎಸ್.ಈಶ್ವರಪ್ಪ ಅವರು, ಪಕ್ಷ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಬಿಜೆಪಿ ಪಕ್ಷದ ಹಿಂದುಳಿದ ವರ್ಗದ ನಾಯಕನಿಗೆ ಮುಖ್ಯಮಂತ್ರಿ ಅನ್ನು ಮಾಡಲಿಲ್ಲ, ಕನಿಷ್ಠ ಉಪಮುಖ್ಯಮಂತ್ರಿಯಾಗಿ ಮಾಡಲಿ ಎಂದು ಕೆಳುತ್ತೆನೆ ದಯವಿಟ್ಟು ಹಿಂದುಳಿದ ವರ್ಗದ ಕೆ.ಎಸ್.ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು.

ಮತ್ತು ಇನ್ನೂ ಸಮುದಾಯದ ಹಿರಿಯ ನಾಯಕರಾದ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಅವರಿಗು ಹಾಗೂ ಎಂ ಟಿ ಬಿ ನಾಗರಾಜ್ ಅಣ್ಣ ಅವರಿಗು ಹಾಗೂ ಆ ಶಂಕರ್ ಅವರಿಗು ಮತ್ತು ಬೈರತಿ ಬಸವರಾಜ ಅವರಿಗು ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯ.

ಒಂದು ವೇಳೆ ಉಪಮುಖ್ಯಮಂತ್ರಿ ಹಾಗೂ ೩ ಜನರಿಗೆ ಸಚಿವ ಸ್ಥಾನ ಕೊಡದಿದ್ದರೆ ಮುಂದೆ ಯಾವ ರೀತಿ ಹೋರಾಟ ಮಾಡಬೇಕಾಗುತ್ತದೆ ಎಂದು ಅಹಿಂದ ಸಂಸ್ಥಾಪಕರಾದ ಕೆ. ಮುಕ್ಕುಡಪ್ಪ ಅಪ್ಪಾಜೀ ಅವರ ಜೊತೆ ಮಾತನಾಡಿ ನಿರ್ಧಾರ ತಗೆದುಕೊಳುತ್ತೆನೆ.
ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸಮುದಾಯದಿಂದ ಯಾವ ರೀತಿ ಪಾಠ ಕಲಿಸುತ್ತಾರೆ ಕಾದು ನೋಡಿ. ಎಂದು ತಮ್ಮ ಕಛೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಪ್ರಾಧಿಕಾರ ಹೋರಾಟ ರಚನಾ ಸಮಿತಿ,ಗೋಕಾಕ ತಾಲ್ಲೂಕಾ ಉಪಾಧ್ಯಕ್ಷ ರಾಮು ಕೋಣಿ ತಿಳಸಿದ್ದಾರೆ.


Share The News

About Fast9 News

Check Also

ಸುಳ್ಳು ವದಂತಿಗಳನ್ನ ನಂಬಬೇಡಿ : PSI ಕಿರಣ ಮೋಹಿತೆ

Share The Newsಸುಳ್ಳು ವದಂತಿಗಳನ್ನು ನಂಬಬೇಡಿ :PSI ಕಿರಣ ಮೋಹಿತೆ ಗೋಕಾಕ : ಇತ್ತೀಚಿನ ದಿನಗಳಲ್ಲಿ ಯುವಜನತೆ ವಾಹನಗಳನ್ನು ಚಲಾಯಿಸುವಾಗ …

Leave a Reply

Your email address will not be published. Required fields are marked *

error: Content is protected !!