Breaking News
Home / Uncategorized / ಸೇವಾ-ಸಮರ್ಪಣ ಕಾರ್ಯಕ್ರಮದ ಅಂಗವಾಗಿ ಜಲಮೂಲಗಳ ಸ್ವಚ್ಛತೆ-ಭೀಮಶಿ ಭರಮಣ್ಣವರ

ಸೇವಾ-ಸಮರ್ಪಣ ಕಾರ್ಯಕ್ರಮದ ಅಂಗವಾಗಿ ಜಲಮೂಲಗಳ ಸ್ವಚ್ಛತೆ-ಭೀಮಶಿ ಭರಮಣ್ಣವರ

Share The News

ಸೇವಾ-ಸಮರ್ಪಣ ಕಾರ್ಯಕ್ರಮದ ಅಂಗವಾಗಿ ಜಲಮೂಲಗಳ ಸ್ವಚ್ಛತೆ-ಭೀಮಶಿ ಭರಮಣ್ಣವರ

ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರ ೭೧ನೇ ಜನ್ಮ ದಿನದ ನಿಮಿತ್ಯ ಬಿಜೆಪಿಯಿಂದ ಹಮ್ಮಿಕೊಳ್ಳಲಾದ ಸೇವಾ-ಸಮರ್ಪಣ ಕಾರ್ಯಕ್ರಮದ ಅಂಗವಾಗಿ ಘಟಪ್ರಭಾ ನದಿ ಲೋಳಸೂರ ಸೇತುವೆಯ ಬಳಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಆದ್ಯತೆ ನೀಡಿದ್ದಲ್ಲಿ ಮುಂದಿನ ಪಿಳೀಗೆಗೆ ಸಂರಕ್ಷಿತ ಪರಿಸರವನ್ನು ಕೊಡುಗೆಯಾಗಿ ನೀಡಬಹುದು ಎಂದರು

ಪ್ರಧಾನಿ ಮೋದಿಯವರ ಜನ್ಮ ದಿನದ ಅಂಗವಾಗಿ ನಮ್ಮ ಗ್ರಾಮ ಹಾಗೂ ಪಟ್ಟಣಗಳ ಜಲ ಮೂಲಗಳನ್ನು ಸ್ವಚ್ಛಗೊಳಿಸಿ, ಆರೋಗ್ಯಯುವ ಸಮಾಜವನ್ನು ನಿರ್ಮಾಣ ಮಾಡಲು ಬಿಜೆಪಿ ಕಾರ್ಯಕರ್ತರು ಮಾದರಿ ಕಾರ್ಯವನ್ನು ಮಾಡುತ್ತಿದ್ದಾರೆಂದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಉಪಾಧ್ಯಕ್ಷ ಪುಂಡಲೀಕ ವಣ್ಣೂರ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಶಾಸಕರ ಸಹಾಯಕ ಸುರೇಶ ಸನದಿ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ್ ಕುತ್ಬುದ್ದಿನ ಗೋಕಾಕ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೆಯರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲಾರ, ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷö್ಮಣ ಖಡಕಭಾಂವಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಮಲ್ಲಿಕಜಾನ ತಳವಾರ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಹಿರೇಮಠ, ನಗರಸಭೆ ಸದಸ್ಯ ಹನಮಂತ ಕಾಳಮ್ಮನಗುಡಿ, ಪ್ರಕಾಶ ಮುರಾರಿ, ಮುಖಂಡರಾದ ಶಶಿಧರ ದೇಮಶೆಟ್ಟಿ, ದುರ್ಗಪ್ಪ ಶಾಸ್ತಿçಗೊಲ್ಲರ, ವಿಶ್ವನಾಥ ಬಿಳ್ಳೂರ, ಯಲ್ಲಪ್ಪ ಹಳ್ಳೂರ ಸೇರಿದಂತೆ ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು, ನಗರಸಭೆ ಸದಸ್ಯರು ಇದ್ದರು.


Share The News

About Fast9 News

Check Also

ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ**

Share The Newsದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ *ಗೋಕಾಕ :* ಬಿಜೆಪಿಯು ಅತ್ಯಂತ ಪ್ರಬಲ …

Leave a Reply

Your email address will not be published. Required fields are marked *

error: Content is protected !!