Breaking News
Home / Uncategorized / ಶಾಸಕ ರಮೇಶ ಜಾರಹೋಳಿ ನೇತೃತ್ವದಲ್ಲಿ ಪಂ,ದಿನದಯಾಳ ಉಪಾದ್ಯಯ ಜನ್ಮ ದಿನಾಚರಣೆ

ಶಾಸಕ ರಮೇಶ ಜಾರಹೋಳಿ ನೇತೃತ್ವದಲ್ಲಿ ಪಂ,ದಿನದಯಾಳ ಉಪಾದ್ಯಯ ಜನ್ಮ ದಿನಾಚರಣೆ

Share The News

ಶಾಸಕ ರಮೇಶ ಜಾರಹೋಳಿ ನೇತೃತ್ವದಲ್ಲಿ ಪಂ,ದಿನದಯಾಳ ಉಪಾದ್ಯಯ ಜನ್ಮ ದಿನಾಚರಣೆ

ಗೋಕಾಕದಲ್ಲಿರುವ ಶಾಸಕರ ಬಿಜೆಪಿ ಗೃಹ ಕಚೇರಿಯಲ್ಲಿ ಭಾರತಿಯ ಜನತಾ ಪಾರ್ಟಿ ಗೋಕಾಕ ವಿಧಾನಸಭಾ ಕ್ಷೇತ್ರದ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ಪಂಡಿತ ದಿನದಯಾಳ ಉಪಾಧ್ಯಾಯರವರ 105 ನೆ ಜನ್ಮ ದಿನವನ್ನು ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ‌ ಆಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸಂಘಟನೆಗಾಗಿ ತನುಮನದಿಂದ ಹಗಲಿರುಳು ದುಡಿದು ಬೆಜೆಪಿ ಪಕ್ಷ ಬೆಳೆಸಿ,ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ನಗರ ಮತ್ತು ಗ್ರಾಮೀಣ ಮಂಡಲದ ಬಿಜೆಪಿ ಮಾಜಿ ಅದ್ಯಕ್ಷರಿಗೆ ಶಾಸಕರಾದ ರಮೇಶ ಜಾರಕಿಹೋಳಿಯವರು ನೆನಪಿನ ಕಾಣಿಕೆ ನೀಡಿ ಸತ್ಕರಿಸಿ ಸನ್ಮಾನಿಸಿದರು.

ಇದೆ ಸಮಯದಲ್ಲಿ ಗೋಕಾಕ ನಗರ ಮಹಿಳಾ ಮೊರ್ಚಾ ಅದ್ಯಕ್ಷರಾದ ರಾಜಶ್ರೀ ವಡೆಯರ ಇವರ ನೇತೃತ್ವದಲ್ಲಿ ನಗರ ಮತ್ತು ಮಹಿಳಾ ಮೊರ್ಚಾ ಸದಸ್ಯರುಗಳು 2 ಸಾವಿರ ಅಂಚೆ ಪತ್ರಗಳಲ್ಲಿ ರವಾನಿಸುವ ಮೂಲಕ ಪ್ರದಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ,ನಗರ ಮಂಡಲದ ಬಿಜೆಪಿ ಅದ್ಯಕ್ಷರಾದ ಬೀಮಶಿ ಭರಮನ್ನವರ, ಗ್ರಾಮೀಣ ಮಂಡಲದ ಅದ್ಯಕ್ಷರಾದ ರಾಜೇಂದ್ರ ಗೌಡಪ್ಪಗೋಳ,ಬಸವರಾಜ ಹೀರೆಮಠ, ನಗರ ಸಭೆಯ ಅದ್ಯಕ್ಷರು,ಉಪಾದಕ್ಷರು ಬಿಜೆಪಿ ಮಹಿಳಾ ಮೊರ್ಚಾದ ಸದಸ್ಯರುಗಳು ಮತ್ತು ನಗರ ಗ್ರಾಮೀಣ ವಿವಿದ ಮೊರ್ಚಾ ಸದಸ್ಯರುಗಳು ಉಪಸ್ಥಿತರಿದ್ದರು.


Share The News

About Fast9 News

Check Also

ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ*

Share The News ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ *ಮೂಡಲಗಿ :* …

Leave a Reply

Your email address will not be published. Required fields are marked *

error: Content is protected !!