Breaking News
Home / ರಾಜಕೀಯ / ವಿದ್ಯಾರ್ಥಿಗಳು ಪ್ರೌಢಶಾಲೆಯ ಶಿಕ್ಷಣದಿಂದ ವಂಚಿತರಾಗಬಾರದು : ಕೆ,ಎಮ್,ಎಫ್,ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ

ವಿದ್ಯಾರ್ಥಿಗಳು ಪ್ರೌಢಶಾಲೆಯ ಶಿಕ್ಷಣದಿಂದ ವಂಚಿತರಾಗಬಾರದು : ಕೆ,ಎಮ್,ಎಫ್,ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ

Share The News

ವಿದ್ಯಾರ್ಥಿಗಳು ಪ್ರೌಢಶಾಲೆಯ ಶಿಕ್ಷಣದಿಂದ ವಂಚಿತರಾಗಬಾರದು : ಕೆ,ಎಮ್,ಎಫ್,ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ

ಮೂಡಲಗಿ : ಏಳನೇ ತರಗತಿ ನಂತರ ವಿದ್ಯಾರ್ಥಿಗಳು ಪ್ರೌಢಶಾಲೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಮೂಡಲಗಿ ಶೈಕ್ಷಣಿಕ ವಲಯಕ್ಕೆ ಅತೀ ಹೆಚ್ಚಿನ ಪ್ರೌಢ ಶಾಲೆಗಳನ್ನು ಮಂಜೂರು ಮಾಡಿಸಲಾಗಿದೆ, ಇದರಿಂದ ಗ್ರಾಮೀಣ ಪ್ರದೇಶದಲ್ಲಿನ ಅದರಲ್ಲೂ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮುಂದಿನ ದಿನಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಹಕಾರಿಯಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅವರು ಭಾನುವಾರ ಸಂಜೆ ಸಮೀಪದ ಮುನ್ಯಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಆರ್.ಐ.ಡಿ.ಎಫ್-೨೫ ನಬಾರ್ಡ ಯೋಜನೆಯಡಿ ೨೨ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಉನ್ನತಿಕರಣಗೊಂಡ ಪ್ರೌಢ ಶಾಲೆಯ ಎರಡು ಹೊಸ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ಕಲಿತಿರುವ ಮೂಡಲಗಿ ವಲಯದಲ್ಲಿನ ವಿದ್ಯಾರ್ಥಿಗಳು ಇಂದು ವಿವಿಧ ಸರಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ನಮ್ಮ ಶೈಕ್ಷಣಿಕ ವಲಯದ ಉತ್ತಮ ಸಾಧನೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿನ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಪ್ರೌಢ ಶಾಲಾ ವಿದ್ಯಾಭ್ಯಾಸ ನಂತರ ಶಿಕ್ಷಣವನ್ನು ಮುಂದುವರಿಸಬೇಕು, ಇದರಿಂದ ನಿಜವಾದ ಹಳ್ಳಿಯ ಪ್ರತಿಭೆಗಳು ಬೆಳಕಿಗೆ ಬರುತ್ತವೆ, ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತಾಗಬೇಕು, ಈ ದಿಸೆಯಲ್ಲಿ ಕಳೆದ ೧೫ ವರ್ಷಗಳಿಂದ ಶಿಕ್ಷಣಕ್ಕೆ ಪ್ರಥಮ ಪ್ರಾಶತ್ಯ ನೀಡಲಾಗುತ್ತಿದೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತ್ತಿಕರಣಗೊಳಿಸಲು ೨೦೧೮-೧೯ರಲ್ಲಿ ೧೫೬ ಪ್ರೌಢಶಾಲೆಗಳಿಗಾಗಿ ರಾಜ್ಯ ಸರಕಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಶಿಫಾರಸ್ಸು ಮಾಡಿತ್ತು, ಅದರಲ್ಲಿ ರಾಜ್ಯಕ್ಕೆ ೨೬ ಹೊಸ ಪ್ರೌಢ ಶಾಲೆಗಳು ಮಂಜೂರಾಗಿದ್ದು, ಅದರಲ್ಲಿ ಮೂಡಲಗಿ ವಲಯಕ್ಕೆ ಮೂರು ಪ್ರೌಢ ಶಾಲೆಗಳ ಉನ್ನತ್ತಿಕರಣಕ್ಕೆ ಮಂಜುರಾಗಿವೆ, ಅದರಲ್ಲಿ ಮುನ್ಯಾಳ, ಹಡಿಗಿನಾಳ ಮತ್ತು ಅರಳಿಮಟ್ಟಿ ಪ್ರೌಢ ಶಾಲೆಗಳು ಸೇರಿವೆ ಎಂದು ಹೇಳಿದರು. ಒಟ್ಟು ಮೂಡಲಗಿ ವಲಯದಲ್ಲಿ ೩೪ ಸರಕಾರಿ ಪ್ರೌಢ ಶಾಲೆಗಳು ಈಗಾಗಲೇ ಪ್ರಾರಂಭವಾದಂತಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು

ಮುನ್ಯಾಳ-ರಂಗಾಪೂರದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಹನಮಂತ ತೇರದಾಳ, ಆನಂದರಾವ್ ನಾಯ್ಕ, ಬಿ.ವಾಯ್.ನಾಯ್ಕ, ಗೋವಿಂದಪ್ಪ ಒಂಟಗೋಡಿ, ಸಚಿದಾನಂದ ಕುಲಕರ್ಣಿ, ಸಂಗಪ್ಪ ಸೂರನ್ನವರ, ಮಲ್ಲಪ್ಪ ಮದಿಹಳ್ಳಿ, ಮಡ್ಡೇಪ್ಪ ವಡೇರ, ಮಾರುತಿ ಹಂದಿಗುಂದ ಜಡೆಪ್ಪ ನಾಯ್ಕ, ಅಪ್ಪಾಸಾಹೇಬ ಹ.ನಾಯ್ಕ, ಮಲ್ಲಯ್ಯ ಹಿರೇಮಠ, ಮಹಾದೇವ ಗೋಡಿಗೌಡರ, ಬಸಯ್ಯಾ ಹಿರೇಮಠ, ಮಹಾದೇವ ಮೇಲಗಡೆ, ವೆಂಕಪ್ಪ ಒಂಟಗೋಡಿ, ಯೋಹಾನ ಮಾರಾಪೂರ, ಮಹಾದೇವ ಮಾಸನ್ನವರ, ಮತ್ತು ಗ್ರಾ.ಪಂ ಸದಸ್ಯರು, ಸಿ.ಆರ್.ಪಿ ಶ್ರೀಶೈಲ್ ಪಾಟೀಲ, ಪ್ರೌಢ ಶಾಲೆಯ ಮುಖ್ಯೋಪಾಧ್ಯ ಸಿ.ಆರ್.ಪೂಜೇರಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ಎ.ಪಿರಜಾದೆ ಮತ್ತಿತರಿದ್ದರು.


Share The News

About Fast9 News

Check Also

*ಮುಂದಿನ ಗುರಿ ಬೆಳಗಾವಿ ಗ್ರಾಮೀಣ ; ಗೆಲುವಿನ ಪಣ ತೊಟ್ಟ ಸಚಿವ ರಮೇಶ ಜಾರಕಿಹೊಳಿ*

Share The News*ಮುಂದಿನ ಗುರಿ ಬೆಳಗಾವಿ ಗ್ರಾಮೀಣ ; ಗೆಲುವಿನ ಪಣ ತೊಟ್ಟ ಸಚಿವ ರಮೇಶ ಜಾರಕಿಹೊಳಿ* ಬೆಳಗಾವಿ ಲೋಕಸಭಾ …

Leave a Reply

Your email address will not be published. Required fields are marked *

error: Content is protected !!