Breaking News
Home / Uncategorized / ಶೆಟ್ಟೆವ್ವಾ ತಾಯಿ ಜಾತ್ರೆಯ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು.

ಶೆಟ್ಟೆವ್ವಾ ತಾಯಿ ಜಾತ್ರೆಯ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು.

Share The News

ಶೆಟ್ಟೆವ್ವಾ ತಾಯಿ ಜಾತ್ರೆಯ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು.

ಗೋಕಾಕದ ಹೊರವಲಯದ ಲೋಳಸೂರ ತೊಟದ ಹತ್ತಿರ ಇರುವ ಶೆಟ್ಟೆವ್ವಾ ತಾಯಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ಮೂರ್ತಿ ಪ್ರತಿಷ್ಟಾಪನೆ ನೇರವೆರಿತು

150 ವರ್ಷಗಳ ಇತಿಹಾಸವುಳ್ಳ ಈ ದೇವಿಯ ಪೂಜೆಯನ್ನು ಗೋಕಾಕದ ಮೇಸ್ತ್ರಿ ಕುಟುಂಬಸ್ಥರು ಮಾಡುತ್ತಾ ಬಂದಿದ್ದಾರೆ,ಈ ದೇವಿಗೆ ಕೇವಲ ಗೋಕಾಕ ಅಷ್ಟೆ ಅಲ್ಲ ಸುತ್ತಮುತ್ತಲಿನ ಗ್ರಾಮದಲ್ಲಿ ಮಕ್ಕಳು ಹುಟ್ಟಿದರೆ ಈ ದೇವಿಗೆ ಬಂದು ಮುಡಿ ಕೊಟ್ಟು ಅದರಲ್ಲಿಯೂ ವಿಶೇಷ ಎನೆಂದರೆ ಹೆಣ್ಣು ಹುಟ್ಟಿದರೆ ಹೋಳಿಗೆ ಊಟ ಗಂಡು ಮಗು ಹುಟ್ಟಿದರೆ ಬ್ಯಾಟಿ ಊಟ ಮಾಡಿಸೊದು ಇಲ್ಲಿನ ವಾಡಿಕೆ ಇದೆ,

150 ವರ್ಷದಿಂದಲೂ ಈ ದೇವಿಯ ಜಾತ್ರೆ ಮಾಡದೆ ಹಾಗೆಯೆ ಭಕ್ತರು ಬಂದು ತಮ್ಮ ಹರಕೆ ತಿರಿಸಿ ಹೋಗುತಿದ್ದರು. ಪ್ರತಿ ವರ್ಷವೂ ಈ ದೇವಿಯ ಮಹಾತ್ಮೆ ಪ್ರಸಿದ್ದಿ ಪಡೆಯುತ್ತಿರುವದನ್ನು ನೋಡಿದ ಮೇಸ್ತ್ರಿ ಕುಟುಂಬ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದೆ ವರ್ಷ ಪ್ರಪ್ರಥಮ ಬಾರಿಗೆ ಶೆಟ್ಟೆವ್ವಾ ದೇವಿ ಜಾತ್ರೆ ಮಾಡಲು ತಿರ್ಮಾನಿಸಿ ಅದ್ದೂರಿಯಾಗಿ ಜಾತ್ರೆ ನೇರವೆರಸಿದರು,

ಈ ಜಾತ್ರೆಗೆ ಬಂದಂತಹ ಸಾವಿರಾರು ಭಕ್ತರಿಗೆ ಮೇಸ್ತ್ರೀ ಕುಟುಂಬಸ್ಥರು ಮಹಾಪ್ರಸಾದದ ವ್ಯವಸ್ಥೆ ಮಾಡಿದ್ದರು,ಅದಲ್ಲದೆ ಬಕ್ತರೆಲ್ಲರೂ ಒಬ್ಬರಿಗೊಬ್ಬರು ಬಂಡಾರ ಎರಚಿ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಶೋಕ ಮೇಸ್ತ್ರಿ, ಬಸವರಾಜ ಮೇಸ್ತ್ರಿ, ಬರಮಪ್ಪ ಮೇಸ್ತ್ರಿ,ಶೆಟ್ಟೆಪ್ಪಾ ಮೇಸ್ತ್ರಿ, ಕಾಡಪ್ಪಾ ಮೇಸ್ತ್ರಿ, ವಿನೋದ ಮೇಸ್ತ್ರಿ,ಬಬ್ರುವಾಹನ ಮೇಸ್ತ್ರಿ,ಬಾಳಪ್ಪ ಮೇಸ್ತ್ರಿ ಹಾಗೂ ಇನ್ನೂಳಿದ ಮುಖಂಡರು ಈ ಜಾತ್ರೆಯಲ್ಲಿ ಉಪಸ್ಥಿತರಿದ್ದರು.


Share The News

About Fast9 News

Check Also

ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ*

Share The News ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ *ಮೂಡಲಗಿ :* …

Leave a Reply

Your email address will not be published. Required fields are marked *

error: Content is protected !!