ಅಂತರರಾಜ್ಯ ಕಳ್ಳರ ಬಂದನ 23ಮೋಟಾರ ಬೈಕಗಳು ವಶಕ್ಕೆ.ಸಾರ್ವಜನಿಕರಿಂದ ಪೋಲಿಸರಿಗೆ ಶ್ಲ್ಯಾಘನೆ
ಅಂಕಲಗಿ: ದುಬಾರಿ ದ್ವಿಚಕ್ರ ವಾಹನಗಳನ್ನು ಕದಿಯುತಿದ್ದ ಕುಖ್ಯಾತ ಅಂತರರಾಜ್ಯ ಇಬ್ಬರು ಬೈಕ್ ಕಳ್ಳರನ್ನು ಗೋಕಾಕ ತಾಲೂಕಿನ ಅಂಕಲಗಿ ಪೋಲಿಸರು ಕಾರ್ಯಾಚರಣೆ ನಡೆಸಿ ಬಂದಿಸಿದ್ದಾರೆ.
ದಿನಾಂಕ:23/08/2023 ರಂದು ಕುಂದರಗಿ ಗ್ರಾಮದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ
ಎದುರಿಗೆ ಇರುವ ಪಾಶ್ಚಾಪುರ ಅಂಕಲಗಿ ರಸ್ತೆಯ ಬದಿಗೆ ನಿಲ್ಲಿಸಿದ ಮೋಟಾರ ಸೈಕಲ್ ಕಳ್ಳತನವಾದ ಬಗ್ಗೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಪತ್ತೆಗಾಗಿ ಬೆಳಗಾವಿ ಜಿಲ್ಲಾ ಎಸ್,ಪಿ,ಯವರು ಪ್ರಕರಣದ ಪತ್ತೆಗಾಗಿ ಗೋಕಾಕ ವೃತ್ತದ ಸಿಪಿಆಯ್ ಗೋಪಾಲ ರಾಠೋಡ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಸದರಿ ತನಿಖಾ ತಂಡವು ಹೆಚ್ಚುವರಿ ಬೆಳಗಾವಿ ಎಸ್. ಪಿ. ಎಮ್. ವೇಣುಗೋಪಾಲ ಗೋಕಾಕ ಉಪವಿಭಾಗದ ಡಿಎಸ್‌ಪಿ .ಡಿ.ಎಚ್.ಮುಲ್ಲಾರವರ ಮಾರ್ಗದರ್ಶನದಲ್ಲಿ ಸದರಿ ಪ್ರಕರಣದ ತನಿಖೆ ಕೈಗೊಂಡಿದ್ದರು.ದಿನಾಂಕ:24/೦8/2023 ರಂದು ಎರಡು ಜನ ಆರೋಪಿತರನ್ನು ಬಂದಿಸಿ ಕೊಲ್ಹಾಪುರ, ನಿಪ್ಪಾಣಿ, ಸಂಕೇಶ್ವರ ಹಾಗೂ ವಿವಿದೆಡೆ ಕಳ್ಳತನವಾಗಿದ್ದ ಅಂದಾಜು 8.25 ಲಕ್ಷ ರೂ, ಮೌಲ್ಯದ ಒಟ್ಟು 23 ಮೋಟಾರ ಸೈಕಲ್‌ಗಳನ್ನು ವಶಕ್ಕೆಪಡೆದುಕೊಂಡು ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಇನ್ನು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕಾಕ ವೃತ್ತದ ಸಿಪಿಐ ಗೋಪಾಲ ರಾಠೋಡ ಅಂಕಲಗಿ ಠಾಣೆಯ ಪಿಎಸ್ ಐ ಎಚ್. ಡಿ.ಯರಝರ್ವಿ ಗೋಕಾಕ ಶಹರ ಪೋಲಿಸ್ ಠಾಣೆಯ ಪಿಎಸ್ಐ ಎಮ್. ಡಿ. ಘೋರಿ ಗೋಕಾಕ ಗ್ರಾಮೀಣ ಪಿಎಸ್ಐ ಕಿರಣ ಮೋಹಿತೆ ಮತ್ತು ಸಿಬ್ಬಂದಿಗಳಾದ ಬಿ. ವಿ. ನೇರ್ಲಿ, ವಿಠ್ಠಲ ನಾಯಕ,ಡಿ.ಜಿ.ಕೊಣ್ಣೂರ. ಎಸ್. ವಿ.ಕಸ್ತೂರಿ,ಎಮ್. ಬಿ. ತಳವಾರ.ಎಸ್. ಎಚ್. ದೇವರ,ಎಸ್. ಬಿ. ಚಿಪ್ಪಲಕಟ್ಟಿ, ಎಸ್.
ಬಿ. ಯಲ್ಲಪ್ಪಗೌಡ್ರ. ಪಿ. ಕೆ. ಹೆಬ್ಬಾಳ, ಎಮ್. ಎಮ್. ಹಾಲೊಳ್ಳಿ. ಎ. ಆರ್. ಮಾಳಗಿ ಇವರ
ಕಾರ್ಯವನ್ನು ಬೆಳಗಾವಿ ಜಿಲ್ಲಾ ಎಸ್. ಪಿ.ಅವರು ಮುಕ್ತ ಕಂಠದಿಂದ ಶ್ಲಾಘಿಸಿರುತ್ತಾರೆ.ಜೊತೆಯಲ್ಲಿ ಇದೇ ರೀತಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸೂಚಿಸಿದರು.