ಸಿಲಿಂಡರ್ ಲೀಕ ಆಗಿ ಭಾರಿ ಸ್ಫೋಟ,9 ತಿಂಗಳ ಹಸು ಗೂಸು ಸೇರಿದಂತೆ 7 ಜನರಿಗೆ ಗಂಭೀರ ಗಾಯ,,
ಗೋಕಾಕ :ರಾತ್ರಿ ವೇಳೆ ಭೀಕರ ಸಿಲಿಂಡರ್ ಸ್ಪೋಟವಾಗಿ 9 ತಿಂಗಳ ಹಸಗೂಸು ಸೇರಿ ಒಂದೇ ಕುಟುಂಬದ 7 ಜನರಿಗೆ ಗಂಭೀರ ಗಾಯವಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಘಟನೆ ಗೋಕಾಕ ತಾಲೂಕಿನ ಅಕ್ಕತಂಗೇರಹಾಳದಲ್ಲಿ ನಡೆದಿದೆ.
ರಾತ್ರಿ ಮಲಗಿರುವಾಗ ಸಿಲಿಂಡರ್ ಸೋರಿಕೆಯಾಗಿ ವಾಸನೆ ಕಂಡು ಬಂದಿದ್ದರಿಂದ ಮೊಬೈಲ್ ಟಾರ್ಚ್ ಆನ್ ಮಾಡಿ ನೋಡಲು ಹೋದಾಗ ಏಕಾಏಕಿ ಸಿಲಿಂಡರ್ ಸ್ಪೋಟವಾಗಿ ಸ್ಪೋಟದ ರಭಸಕ್ಕೆ ಮನೆಯ ಹಂಚುಗಳು ಹಾರಿಹೋಗಿ ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಯಾಗಿವೆ.
ರಾಜಶ್ರೀ ನಿರ್ವಾಣಿ (42).ಅಶೋಕ ನಿರ್ವಾಣಿ (45). ಸೋಮನಗೌಡ (44).ದೀಪಾ (42). ನವೀನ (14),ವಿದ್ಯಾ (13).ಬಸನಗೌಡ ನಿರ್ವಾಣಿ( 9 ತಿಂಗಳು) ಗಾಯಗೊಂಡವರಾಗಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇನ್ನುಳಿದವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತಿದ್ದಾರೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Fast9 Latest Kannada News