*ಕಳೆದ ರಾತ್ರಿ ಸಕ್ಕರೆ ಕಾರ್ಖಾನೆಯಿಂದ ರೈತರ ಜಮೀನುಗಳಿಗೆ ಕಲುಷಿತ ನೀರು ಹರಿಬಿಟ್ಟ ಪರಿಣಾಮ ಸಾವಿರಾರು ಮೀನುಗಳು ಸಾವಿಗೀಡಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ*
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬುರ್ಲಟ್ಟಿ ರೇಣುಕಾ ಸಕ್ಕರೆ ಕಾರ್ಖಾನೆ ಕಲುಷಿತ ನೀರು ರೈತರ ಜಮೀನುಗಳಿಗೆ ಹರಿದು ಬಾವಿಯ ನೀರು ಕಲುಷಿತವಾಗಿ ಸಾವಿರಾರು ಮೀನುಗಳು ಸಾವಿಗೀಡಾಗಿವೆ ಎಂದು ಬುರ್ಲಟ್ಟಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಸಕ್ಕರೆ ಕಾರ್ಖಾನೆ ಕಲುಷಿತ ನೀರಿನಿಂದ ಸಾವಿರಾರು ಮೀನುಗಳು ಸಾವುಕಳೆದ ರಾತ್ರಿ ಸಕ್ಕರೆ ಕಾರ್ಖಾನೆಯಿಂದ ರೈತರ ಜಮೀನುಗಳಿಗೆ ಕಲುಷಿತ ನೀರು ಹರಿಬಿಟ್ಟು ಪರಿಣಾಮ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ರೇಣುಕಾ ಸಕ್ಕರೆ ಕಾರ್ಖಾನೆ ಎದುರು ಗ್ರಾಮದ ಕೆಲವು ರೈತರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ರೈತ ರಾಜು ಅಪ್ಪಾಸಾಬ ಸಾಳುಂಕೆ, ಹಾಗೂ ಗುರುಪ್ಪ ಟಕ್ಕಳಕಿ, ಮತ್ತು ಭೀಮಪ್ಪ ಕಲ್ಲಪ್ಪ ಸಾಳುಂಕೆ ಮಾತನಾಡಿ,
ನಿನ್ನೆ ರಾತ್ರಿ ಈ ಕಲುಷಿತ ನೀರು ನಮ್ಮ ಜಮೀನುಗಳಿಗೆ ಹರಿಸಿದ ಪರಿಣಾಮ ವಿಷಪೂರಿತ ವಾತಾವರಣ ನಿರ್ಮಾಣವಾಗಿದೆ, ಅಥಣಿ ತಹಶೀಲ್ದಾರ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕೋಡಿ ಅಧಿಕಾರಿಗಳಿಗೆ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಿದರು ಯಾವುದಕ್ಕೂ ಸ್ಪಂದನೆ ನೀಡುತ್ತಿಲ್ಲ ಎಂದರು.ಹಾಗೂ ಕೃಷಿ ಜಮೀನುಗಳ ಬಾವಿಯಲ್ಲಿ ಸಾವಿರಾರು ಮೀನುಗಳು ಸಾವಿಗೀಡಾಗಿವೆ,
ಈ ನೀರಿನಿಂದ ಜಾನುವಾರು ಸಾವು ಸಂಭವಿಸಿದೆ, ಶುದ್ಧವಾದ ನೀರು ಹೋಗಿ ಕಪ್ಪು ಬಣ್ಣಕ್ಕೆ ತಿರುಗಿ ಕುಡಿಯುವ ಹಾಗೂ ದಿನನಿತ್ಯ ನೀರು ಬಳಕೆ ಮಾಡೋದಕ್ಕೆ ಬರುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.