
ಗೋಕಾಕ: ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ವಿರೋಧಿಸಿ ಮತ್ತು ಕನ್ನಡಪರ ಸಂಘಟನೆಗಳು ಒಕ್ಕೂಟ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ
ಗೋಕಾಕದ ಬಸವೇಶ್ವರ ವೃತ್ತದಲ್ಲಿ ತಾಲೂಕಾ ಕನ್ನಡಪರ ಸಂಘಟನೆಯ ಒಕ್ಕೂಟದಿಂದ ಪ್ರತಿಬಟನೆ ಮಾಡಲಾಯಿತು.
ಈ ಪ್ರತಿಬಟನೆಯಲ್ಲಿ ಕನ್ನಡಪರ ಸಂಘಟನೆಯ ಮುಖಂಡರಾದ ಕಿರಣ ಡಮಾಮಗರ, ಸಂತೋಷ ಖಂಡ್ರಿ, ಮಲಿಕ್ ತಳವಾರ.ಯಲ್ಲಪ್ಪ ಗೌಡರ, ಅರುಣ ರಂಗಸುಭೆ, ಅಜೀಜ ಮೊಕಾಶಿ, ಅಮಿತ ಗುಡವಾಲೆ, ಮುಬಾರಕ ಬಾಳೆಕುಂದ್ರಿ, ಕಲ್ಲಯ್ಯಾ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೆ ಸಮಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬೀಗಿ ಬಂದೊಬಸ್ತ ಮಾಡಲಾಗಿತ್ತು.
Fast9 Latest Kannada News