Breaking News

ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟ ಗೂಢಾಚಾರಿಗಳ ವಿಶೇಷ ಕಾರ್ಯಕ್ರಮ “ಏಜೆಂಟ್​​ 001” ಇಂದಿನಿಂದ ನ್ಯೂಸ್​ಫಸ್ಟ್​ನಲ್ಲಿ

Spread the love

ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟ ಗೂಢಾಚಾರಿಗಳ ವಿಶೇಷ ಕಾರ್ಯಕ್ರಮ “ಏಜೆಂಟ್​​ 001” ಇಂದಿನಿಂದ ನ್ಯೂಸ್​ಫಸ್ಟ್​ನಲ್ಲಿ

ಇವತ್ತು ನಾವು ನೀವು ಸುರಕ್ಷಿತವಾಗಿ ಇದ್ದೀವಿ ಅಂದ್ರೆ ನಮಗೋಸ್ಕರ ಮತ್ಯಾರೋ ತಮ್ಮ ಪ್ರಾಣವನ್ನ ಒತ್ತೆಯಿಟ್ಟು ಹೋರಾಡ್ತಿದ್ದಾರೆ. ಗಡಿಯಲ್ಲಿ ನಿಂತು ಸಾವಿನ ಜೊತೆ ಸರಸ ಆಡ್ತಿದ್ದಾರೆ. ಸಮವಸ್ತ್ರದಲ್ಲಿ ಹೋರಾಡ್ತಿರೋ ಯೋಧರು ಒಂದು ಕಡೆಯಾದ್ರೆ, ತಾವು ಯಾರು ಅನ್ನೋದನ್ನ ಜಗತ್ತಿಗೂ ಹೇಳದೇ ತಮ್ಮ ಕುಟುಂಬದವರಿಗೂ ಗೊತ್ತಿಲ್ಲದೇ ಹೋರಾಡ್ತಿರೋರು ಮತ್ತೊಂದು ಕಡೆ. ಹುಟ್ಟ ಊರು ಬಿಟ್ಟು ಬೇಱವುದೋ ದೇಶದಲ್ಲಿ ಗೂಡಚಾರಿಗಳಾಗಿ ಕೆಲಸ ಮಾಡ್ತಾ ದೇಶ ಸೇವೆ ಮಾಡ್ತಿದ್ದಾರೆ. ಪ್ರತಿಕ್ಷಣವೂ ಚಾಲೆಂಜ್​ ಆಗಿರುವಂತಹ ಸನ್ನಿವೇಶದಲ್ಲೇ ಬದುಕಿದ ಸೀಕ್ರೆಟ್​ ಏಜೆಂಟ್​​ಗಳ ಕುರಿತ ವಿಶೇಷ ಸೀರೀಸ್​ ಇವತ್ತಿನಿಂದ ನ್ಯೂಸ್​ಫಸ್ಟ್​​ನಲ್ಲಿ ಪ್ರಸಾರವಾಗಲಿದೆ. ಏಜೆಂಟ್​​ 001 ಹೆಸರಿನ ಈ ಕಾರ್ಯಕ್ರಮ ಪ್ರತಿ ಶನಿವಾರ ಸಂಜೆ 7 ಗಂಟೆಗೆ ಹಾಗೂ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಇಷ್ಟವಾಗುವಂತಹ ಕಾರ್ಯಕ್ರಮ ಇದಾಗಿದೆ.
ಹಲವು ಪುಸ್ತಕಗಳು ಹಾಗೂ ದಾಖಲೆಗಳನ್ನು ಅಧ್ಯಯನ ಮಾಡಿ ನಿಖರ ಮಾಹಿತಿ ಸಂಗ್ರಹಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಅತ್ಯುತ್ತಮ ಗುಣಮಟ್ಟದಿಂದ ಕಾರ್ಯಕ್ರಮ ನಿರ್ಮಾಣ ಮಾಡಲಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಇಷ್ಟವಾಗುವಂತಹ ವಿಷಯಗಳನ್ನು ಇದು ಒಳಗೊಂಡಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ವಿಷಯಗಳನ್ನ ತಿಳಿಸಿಕೊಡುವ ನಿಟ್ಟಿನಲ್ಲಿ ಇದನ್ನ ರೂಪಿಸಲಾಗಿದೆ.
ಇದಕ್ಕೂ ಮೊದಲು ಚುನಾವಣಾ ಸಂದರ್ಭದಲ್ಲಿ ದಿ ಲೀಡರ್​ ಎಂಬ ವಿಶೇಷ ಕಾರ್ಯಕ್ರಮ ನ್ಯೂಸ್​ಫಸ್ಟ್​​ನಲ್ಲಿ ಪ್ರಸಾರವಾಗಿತ್ತು. ದೇಶ ಕಟ್ಟಿದ್ದ ಪ್ರಧಾನಮಂತ್ರಿಗಳು ಅವರು ಎದುರಿಸಿದ ಸವಾಲುಗಳು ಅವರು ಮಾಡಿದ ಸಾಧನೆ ಕುರಿತ ಲೀಡರ್​ ಕಾರ್ಯಕ್ರಮಕ್ಕೆ ರಾಜ್ಯದ ಜನರಿಂದ ಅಭೂತಪೂರ್ವ ಯಶಸ್ಸು ದೊರೆತಿತ್ತು. ನ್ಯೂಸ್​ಫಸ್ಟ್​​ನ ಎಂಡಿ ಹಾಗೂ ಸಿಇಒ ಆಗಿರುವ ಎಸ್.ರವಿಕುಮಾರ್​ ​ ಅವರು ಲೀಡರ್​ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು. ಸದ್ಯ ಏಜೆಂಟ್​ 001 ಕಾರ್ಯಕ್ರಮವನ್ನ ಸಹ ಅವರೇ ನಿರೂಪಣೆ ಮಾಡುತ್ತಿದ್ದಾರೆ. ​


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *