ಸಮಾಜ ಬಾಂಧವರು ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಬ್ಬ ಆಚರಿಸಿ: DSP ದೂದಪೀರ ಮುಲ್ಲಾ
ಗೋಕಾಕ: ಇದೇ ಜೂ.29 ರಂದು ಆಚರಿಸಲ್ಪಡುವ ಬಕ್ರೀದ್ ಹಬ್ಬವನ್ನು ಸಮಾಜ ಬಾಂಧವರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಿ ಯಶಸ್ವಿಗೊಳಿಸಿ ಎಂದು DSP ದೂದಪೀರ ಮುಲ್ಲಾ ಅವರು ಸ್ಥಳೀಯ ಅಂಕಲಗಿ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡ ಬಕ್ರೀದ ಹಬ್ಬದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಿ,ಪಿ,ಆಯ್, ಗೋಪಾಲ ರಾಥೋಡ ಮಾತನಾಡಿ ಇಲ್ಲಿಯತನಕ ಎಲ್ಲ ಸಮುದಾಯದವರು ಸೇರಿಕೊಂಡು ಜಾತಿ ಬೇಧ ಭಾವ ಮಾಡದೇ ಹಬ್ಬವನ್ನು ಆಚರಿಸಿಕೊಂಡು ಬಂದಿರುತ್ತಿರೋ ಅದೇ ರೀತಿ ಮುಂಬರುವ ದಿನಗಳಲ್ಲಿಯೂ ಕೂಡಾ ಹಬ್ಬವನ್ನು ಆಚರಿಸಿ, ಇದಕ್ಕೆ ಬೇಕಾಗುವ ಪೊಲೀಸ್ ಭದ್ರತೆಯನ್ನು ನೀಡಲು ಇಲಾಖೆ ನಿಮ್ಮೊಂದಿಗೆ ಇದೆ ಎಂದರು.
ಈ ಶಾಂತಿಸಭೆಯಲ್ಲಿ ಸ್ಥಳಿಯ ಠಾಣೆಯ ಪಿ,ಎಸ್,ಐ, ಹೊನ್ನಪ್ಪ ಯರಜರ್ವಿಯವರು ಮಾತನಾಡಿ ತ್ಯಾಗ, ಬಲಿದಾನ,ದಾನ ಧರ್ಮದ ಬಕ್ರೀದ ಹಬ್ಬವಾಗಿದ್ದು ಈ ಸಮಯದಲ್ಲಿ ಒಟ್ಟಾಗಿ ಸೇರಿ ಶಾಂತ ರೀತಿಯಿಂದ ಹಬ್ಬ ಆಚರಿಸಬೇಕು,ಯಾವುದೆ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲಿಸರಿಗೆ ಮಾಹಿತಿ ನೀಡಬೇಕು ಎಂದರು. ಪಟ್ಟಣದಲ್ಲಿ ಜರುಗುವ ಯಾವುದೇ ಹಬ್ಬವನ್ನು ಹಿಂದೂ ಮುಸ್ಲಿಂ ಸಮಾಜದವರು ಸೌಹಾರ್ಧತೆಯಿಂದ ಆಚರಿಸಿಕೊಂಡು ಬಂದಿದ್ದಿರಿ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದ ಮುಖಂಡರು ನಿಗಾವಹಿಸಿ ಹಬ್ಬವನ್ನು ಶೃದ್ದೆಯಿಂದ ಆಚರಿಸಿರಿ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರುಗಳಾದ ಮುನ್ನಾ ದೇಸಾಯಿ,ದಸ್ತಗೀರ ದೇಸಾಯಿ,ಜಾವೀದ ಹವಾಲ್ದಾರ,ಎಮ್,ಜಿ,ದೇಸಾಯಿ,ಎನ್,ಎಸ್,ದೇಸಾಯಿ,ಇಸ್ಮಾಯಿಲ್ ದೇಸಾಯಿ,ನೂರಕಾನ ದೇಸಾಯಿ,ಇಸ್ಮಾಯಿಲ್ ದೇಸಾಯಿ,ಮೈನುದ್ದಿನ ಯರಗಟ್ಟಿ ಸೇರಿದಂತೆ ಇನ್ನೂಳಿದಮುಖಂಡರು ಸೇರಿದಂತೆ ಮೊದಲಾದವರು,ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.