ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿದ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.
ಬೆಂಗಳೂರು: ರಾಜ್ಯದ ಎಲ್ಲಾ ವರ್ಗಗಳ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಶುಚಿ-ರುಚಿಯಾದ ಹಾಲು ಮತ್ತು ಹಾಲಿನ ಉತ್ಪನಗಳನ್ನು ನಂದಿನಿ ಬ್ರಾಂಡ್ ಅಡಿಯಲ್ಲಿ ಕಳೆದ 4ದಶಕಗಳಿಂದ ನೀಡುತ್ತಾ ಬಂದಿರುವ ಕೆಎಮ್ಎಫ್, ಹೊಸ ವರ್ಷದ ನಿಮಿತ್ಯ ಇಂದಿನಿoದ ಜ. 7ರವರೆಗೆ ರಾಜ್ಯದಾದ್ಯಂತ ನಂದಿನಿ ಸಿಹಿ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದು ಕೆಎಮ್ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಗುರುವಾರದಂದು ಇಲ್ಲಿಯ ಕೆಎಮ್ಎಫ್ ಪ್ರಧಾನ ಕಛೇರಿಯಲ್ಲಿ ನಂದಿನಿ ಸಿಹಿ ಉತ್ಸವ ಮತ್ತು ನಂದಿನಿ ಚೀಸ್ ಫೇಸ್ಟ್ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಗ್ರಾಹಕರ ಆಯ್ಕೆಯ ನೆಚ್ಚಿನ ಬ್ರಾಂಡ್ ಆಗಿದ್ದು, ಗ್ರಾಹಕರನ್ನು ಆಕರ್ಷಿಸುವಲ್ಲಿ ಕೆಎಮ್ಎಫ್ ಹಲವು ರಿಯಾಯಿತಿಗಳನ್ನು ನೀಡುತ್ತಲಿದೆ ಎಂದು ಹೇಳಿದರು.
ಕಳೆದ 4ವರ್ಷಗಳಿಂದ ಸತತವಾಗಿ ನಮ್ಮ ಸಂಸ್ಥೆಯು ವರ್ಷದಲ್ಲಿ ಎರಡು ಬಾರಿ ನಂದಿನಿ ಸಿಹಿ ಉತ್ಸವವನ್ನು ಆಚರಿಸುತ್ತಿದೆ. ನಂದಿನಿ ಸಿಹಿ ಉತ್ಪನ್ನ್ಗಳ ಮಾರಾಟ ದರದ ಮೇಲೆ ನೇರವಾಗಿ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ಬರುತ್ತಿರುವುದರಿಂದ ಸಿಹಿ ಉತ್ಪನ್ನಗಳ ಮಾರಾಟ ಮತ್ತು ಪ್ರಚಾರ ವೃದ್ದಿಗೆ ಹೆಚ್ಚು ಅನುಕೂಲವಾಗಿದೆ. ಇಂದಿನಿoದ ಆರಂಭವಾಗಿರುವ ನಂದಿನಿ ಸಿಹಿ ಉತ್ಸವ ರಾಜ್ಯದಾದ್ಯಂತ ನಡೆಸಲು ಉದ್ದೇಶಿಸಿದ್ದು, ಒಟ್ಟು 15 ದಿನಗಳ ಕಾಲ ಈ ಉತ್ಸವ ಜರುಗಲಿದೆ ಎಂದು ತಿಳಿಸಿದರು.
ನಂದಿನಿ ಸಿಹಿ ಉತ್ಪನ್ನಗಳಾದ ಮೈಸೂರ್ಪಾಕ್, ಫೇಡೆ, ಏಲಕ್ಕಿ ಫೇಡಾ, ಬಾದಾಮ, ಕಾಜು, ಡ್ರೆöಫ್ರುಟ್ಸ್, ಕೋಕೋನಟ್ ಚಾಕಲೆಟ್, ಬರ್ಫಿ, ಕುಂದಾ, ಜಾಮೂನ್, ರಸಗುಲ್ಲಾ ಜೊತೆಗೆ ನೂತನ ಸಿಹಿ ಉತ್ಪನ್ನಗಳಾದ ಸಿರಿಧಾನ್ಯ ಲಡ್ಡು, ಸಿರಿಧಾನ್ಯ ಹಾಲಿನ ಪುಡಿ, ಚಕ್ಕಿ ಲಾಡು, ಸಿರಿಧಾನ್ಯ ಪಾಯಸ್, ಸಿರಿಧಾನ್ಯ ಸಿಹಿ ಪೊಂಗಲ್, ಶ್ರೀಖಂಡ, ಕುಕ್ಕೀಸ್ಗಳ ಮಾರಾಟ ದರದ ಮೇಲೆ ಶೇಕಡಾ 10ರಷ್ಟು ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲಿದೆ ಎಂದು ಹೇಳಿದರು.
45 ದಿನಗಳವರೆಗೆ ನಂದಿನಿ ಚೀಸ್ ಫೇಸ್ಟ್: ಕ್ರೀಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಸಿಹಿ ಉತ್ಸವದ ಜೊತೆಗೆ ಕೆಎಮ್ಎಫ್ನಿಂದ ಗ್ರಾಹಕರಿಗೆ ಬಂಪರ್ ಕೊಡುಗೆಯಾಗಿ ನಂದಿನಿ ಚೀಸ್ ಫೇಸ್ಟ್ ಆಚರಿಸಲಾಗುತ್ತಿದ್ದು, ಡಿ.24ರಿಂದ 45 ದಿನಗಳ ಅವಧಿಗೆ ನಂದಿನಿ ಎಲ್ಲ ಚೀಸ್ ಉತ್ಪನ್ಗಳ ಮಾರಾಟ ದರದ ಮೇಲೆ ಶೇಕಡಾ 5ರಿಂದ 10 ರಷ್ಟು ರಿಯಾಯಿತಿಯನ್ನು ಗ್ರಾಹಕರಿಗೆ ನೇರವಾಗಿ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ನಂದಿನಿ ಬ್ರೇಡ್ ಮತ್ತು ನಂದಿನಿ ಚಾಕಲೇಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ನಂದಿನಿ ಎಲ್ಲಾ ಪಾರ್ಲರ್ಗಳು, ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್ಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳು ಮತ್ತು ಚೀಸ್ಗಳನ್ನು ಗ್ರಾಹಕರು ರಿಯಾಯಿತಿ ದರದಲ್ಲಿ ಪಡೆಯುವಂತೆ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಭೀಮಾನಾಯಿಕ, ಕೆ.ವಾಯ್.ನಂಜೇಗೌಡ, ಕೆಎಮ್ಎಫ್ನ ಆಡಳಿತ ಮಂಡಳಿಯ ಸದಸ್ಯರುಗಳು, ಕೆಎಮ್ಎಫ್ನ ಎಲ್ಲ ಹಾಲು ಒಕ್ಕೂಟಗಳ ಅಧ್ಯಕ್ಷರುಗಳು, ವ್ಯವಸ್ಥಾಪಕ ನಿರ್ದೆಶಕ ಬಿ.ಸಿ.ಸತೀಶ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.