ದೃಶ್ಯ ಮಾದ್ಯಮಗಳ ಹೆಸರಿನಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದರ್ಬಳಕೆ,ಹಪ್ತಾ ವಸೂಲಿಗೆ ಕಡಿವಾಣ ಹಾಕಲು ಮುಂದಾದ ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಷನ್ ಜಿಲ್ಲಾಧಿಕಾರಿ ಮತ್ತು ಎಸ್,ಪಿ,ಗೆ ಮನವಿ
ಬೆಳಗಾವಿ: ಆಡಳಿತ, ಶಾಸಕಾಂಗ ಹಾಗೂ ಕಾರ್ಯಾಂಗದ ಜೊತೆಗೆ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಾನ ಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಿಗೆ ಮಸಿ ಬಳಿಯುವ ಕೆಲಸಗಳು ನಡೆದಿರುವುದು ಬಹಳ ನೋವಿನ ಸಂಗತಿ. ಯಾವುದೇ ಸುದ್ದಿ ವಿಚಾರದಲ್ಲಿ ಅಧಿಕಾರಿಗಳಿಂದ ಮಾಹಿತಿ, ಸ್ಪಷ್ಟನೆ ಪಡೆಯುವುದು ಅನಿವಾರ್ಯ. ಆದರೆ ಇದರ ದುರಪಯೋಗಪಡಿಸಿಕೊಂಡು ಹಣ ವಸೂಲಿ ದಂಧೆ ನಡೆಸುತ್ತಿರುವುದು ದುರಂತ. ದೃಶ್ಯ ಮಾಧ್ಯಮದವರೆಂದು ಹೇಳಿಕೊಂಡು ಹಫ್ತಾ ವಸೂಲಿ ಮಾಡಿ ಇಡೀ ಮಾದ್ಯಮ ಸಮುದಾಯ ಹೆಸರು ಹಾಳುಗೆಡುವುತ್ತಿದ್ದಾರೆ. ಈ ಕಾರಣಕ್ಕೆ ಯಾವುದೆ ಇಲಾಖೆಗೆ ಹೋಗಿ ಯಾರಾದರೂ ವಿದ್ಯುನ್ಮಾನ ಮಾದ್ಯಮದ ಹೆಸರಿನಲ್ಲಿ ಕಿರುಕುಳ, ಹಣ ನೀಡುವಂತೆ ಕಿರಿಕಿರಿ ಕೊಟ್ಟರೆ ನೇರವಾಗಿ ದೂರು ನೀಡಲು ಸೂಚನೆ ನೀಡಬೇಕು. ವಿದ್ಯುನ್ಮಾನ ಮಾಧ್ಯಮಗಳ ಪತ್ರಕರ್ತರ ಸೋಗಿನಲ್ಲಿ ಹಣ ವಸೂಲಿಗೆ ಇಳಿದಿರುವಂಥವರಿಗೆ ಕಡಿವಾಣ ಹಾಕಬೇಕು. ಇದಲ್ಲದೆ ಅನೇಕ ಕಡೆಗಳಲ್ಲಿ ಹಣಕಾಸಿನ ವ್ಯವಹಾರವೂ ನಡೆದಿದ್ದು, ಪತ್ರಕರ್ತರ ಹೆಸರಿನಲ್ಲಿಯೂ ಯಾರಿಗೂ ಲಂಚ ಕೊಡದಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂಬುದು ಮನವಿಯಾಗಿದೆ.
ಅನೇಕ ಇಲಾಖೆಗಳ ಹಿರಿಯ ಅಧಿಕಾರಿಗಳು ಕಿರುಕುಳದ ಬಗ್ಗೆ ಈಗಾಗಲೇ ನಮ್ಮ ಸಂಘದ ಗಮನಕ್ಕೆ ತಂದಿದ್ದಾರೆ. ಅವರು ಕೆಲವೊಂದು ಸೂಕ್ಷ್ಮ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಹಾಗಾಗಿ ಈ ವಿಚಾರವನ್ನು ತಾವು ಗಂಭೀರವಾಗಿ ಪರಿಗಣಿಸಬೇಕು. ಅಷ್ಟೇ ಅಲ್ಲ ಸುಗಮ, ಪಾರದರ್ಶಕ ಆಡಳಿತಕ್ಕೆ ತಾವು ಮುನ್ನಡಿ ಬರೆಯಬೇಕು. ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪತ್ರಕರ್ತರಿಗೆ ಕಳಂಕ ತರುವಂತಹ ಕೆಲಸಕ್ಕೆ ಕಡಿವಾಣ ಹಾಕಬೇಕು ಎಂಬುದು ದೃಶ್ಯ ಮಾದ್ಯಮದ ವರದಿಗಾರರ ಮನವಿಯಾಗಿದೆ.