ಪರಮಪೂಜ್ಯರ ಅಗಲಿಕೆಗೆ ಕಂಬನಿ ಮಿಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
*ಮೂಡಲಗಿ*- ಗೋಕಾವಿ ನೆಲದ ಪಂಚ- ಪೀಠಗಳಲ್ಲಿ ಒಂದಾಗಿರುವ ತಾಲ್ಲೂಕಿನ ಅರಭಾವಿ ದುರದುಂಡೀಶ್ವರ ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು (೭೫) ರವಿವಾರ ರಾತ್ರಿ ಲಿಂಗೈಕ್ಯೆರಾಗಿದ್ದಾರೆ. ಪರಮ ಪೂಜ್ಯರ ಅಗಲಿಕೆಗೆ ಶಾಸಕರೂ ಆಗಿರುವ ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ.
ಅರಭಾವಿ ಭಾಗದಲ್ಲಿ ಭಕ್ತರ ಪಾಲಿನ ದೇವರು ಆಗಿದ್ದ ಸದಾ ಸೌಮ್ಯ ಹಾಗೂ ಶಾಂತ ಸ್ವಭಾವದ ಸಾಕಾರ ಮೂರ್ತಿಯಾಗಿದ್ದ ಪೂಜ್ಯರ ಅಗಲಿಕೆಯಿಂದ ನಮ್ಮ ನಾಡಿಗೆ ಅಪಾರ ಹಾನಿಯಾಗಿದೆ. ಅಸಂಖ್ಯಾತ ಭಕ್ತ ಸಮೂಹಕ್ಕೆ ದುಃಖವನ್ನು ತಂದಿದೆ. ಅಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇಯಾದ ವಿಶಿಷ್ಟ ಸೇವೆ ಸಲ್ಲಿಸಿದ್ದ ಪರಮಪೂಜ್ಯರ ಅಗಲಿಕೆ ತುಂಬಾ ನೋವಾಗಿದೆ. ಶಿವಯೋಗಿ ಪರಂಪರೆಯ ಹಿನ್ನೆಲೆಯುಳ್ಳ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀ ಮಠದ ಪರಂಪರೆಗೆ ಮುನ್ನುಡಿ ಬರೆದು ಹಲವು ಐತಿಹಾಸಿಕಕ್ಕೆ ಸಾಕ್ಷಿಯಾಗಿದ್ದರೆಂದು ಅವರ ಅನುಪಮ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ.
ತಮ್ಮ ಕುಟುಂಬ ಹಾಗೂ ಅರಭಾವಿ
ಪರಮ ಪೂಜ್ಯರ ಸಂಬಂಧಗಳನ್ನು ಮೇಲುಕು ಹಾಕಿರುವ ಬಾಲಚಂದ್ರ ಜಾರಕಿಹೊಳಿ ಅವರು, ತಮ್ಮ ದಿವಂಗತ ತಾಯಿ ಹಾಗೂ ತಂದೆಯವರು ಅರಭಾವಿ ಮಠದ ಪರಮ ಭಕ್ತರಾಗಿದ್ದರು. ಪೂಜ್ಯರ ಆಶಯದಂತೆ ಶ್ರೀ ಮಠದಲ್ಲಿ ತಾಯಿ- ತಂದೆಯವರ ಸ್ಮರಣಾರ್ಥವಾಗಿ ಸಭಾ ಭವನವನ್ನು ನಿರ್ಮಿಸುತ್ತಿರುವುದಾಗಿ ಹೇಳಿದರು. ಕಾಮಗಾರಿಯು ಮುಗಿದು ಇನ್ನೇನೂ ಲೋಕಾರ್ಪಣೆ ಮಾಡುವುದು ಮಾತ್ರ ಬಾಕಿ ಇದೆ. ಶ್ರೀ ಗಳ ಸಂಕಲ್ಪದಂತೆ ಇದು ಭಕ್ತರಿಗಾಗಿಯೇ ನಿರ್ಮಿಸಿರುವ ಭವನವೆಂದು ಅವರು ಹೇಳಿದರು.
ದಸರಾ ಹಬ್ಬದ ಹೊಸ್ತಿಲಿನಲ್ಲಿರುವಾಗಲೇ ಅರಭಾವಿ ಮಠದ ಜಗದ್ಗುರುಗಳು ಶಿನವ ಪಾದ ಸೇರಿರುವುದು ಸಕಲ ಭಕ್ತರಿಗೆ ಅತೀವ ದುಃಖವನ್ನು ತಂದಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಲಿಂಗೈಕ್ಯೆ ಪೂಜ್ಯರ ಅಗಲಿಕೆಗೆ ಭಕ್ತಿ ಪೂರ್ವಕ ನಮನಗಳನ್ನು ಅರ್ಪಿಸಿದ್ದಾರೆ.