Breaking News

ಸ್ಮಶಾನಕ್ಕಾಗಿ 2 ಎಕರೆ ನಿವೇಶನ ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ*

Spread the love

*ಸ್ಮಶಾನಕ್ಕಾಗಿ 2 ಎಕರೆ ನಿವೇಶನ ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ*

ಗೋಕಾಕ : ಸಾರ್ವಜನಿಕ ಅನುಕೂಲಕ್ಕಾಗಿ ಎಲ್ಲ ಸಮುದಾಯದವರ ಹಿತದೃಷ್ಟಿಯಿಂದ ಸ್ಮಶಾನಕ್ಕಾಗಿ 2 ಎಕರೆ ಜಮೀನನ್ನು ಸರ್ಕಾರದಿಂದ ಖರೀದಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾಧಿಕಾರಿಗಳನ್ನು ಕೋರಿದರು.
ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸಿ ಮಾತನಾಡಿದ ಅವರು, ಗ್ರಾಮಕ್ಕೆ ಅಗತ್ಯವಿರುವ ಸ್ಮಶಾನ ನಿವೇಶನವನ್ನು ದೊರಕಿಸಿಕೊಡುವುದಾಗಿ ತಿಳಿಸಿದರು.
ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಬೆಟಗೇರಿ ಗ್ರಾಮದ ಸಾರ್ವಜನಿಕರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಅದರಲ್ಲೂ ಸ್ಮಶಾನ ನಿವೇಶನದ ಸಮಸ್ಯೆಯಿದ್ದು ಕೂಡಲೇ ಸರ್ಕಾರದ ನಿಯಮಾನುಸಾರ ಸ್ಮಶಾನಕ್ಕಾಗಿ 2 ಎಕರೆ ಜಮೀನನ್ನು ಖರೀದಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಅವರು ಹೇಳಿದರು.
ಗ್ರಾಮದ ಅಭಿವೃದ್ಧಿಗೆ ಗ್ರಾಪಂ ಸದಸ್ಯರು ಸರ್ಕಾರದ ಯೋಜನೆಗಳನ್ನು ವಿನಿಯೋಗಿಸಿಕೊಳ್ಳಬೇಕು. ಗ್ರಾಮ ಪಂಚಾಯತ ಮಟ್ಟದಲ್ಲಿ ಬರುವ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಬೇಕು. ಸಾರ್ವಜನಿಕರಿಗೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರು, ಸೇರಿದಂತೆ ಮೂಲ ಸೌಲಭ್ಯಗಳನ್ನು ನೀಗಿಸಲು ಎಲ್ಲರೂ ಪ್ರಯತ್ನಿಸಬೇಕು. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಾಭಿವೃದ್ಧಿಗೆ ದುಡಿಯುವಂತೆ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿದರು. ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿದರು. ಮೆಳವಂಕಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು.
ಈ ಸಂದರ್ಭದಲ್ಲಿ ಡಾ.ರಾಜೇಂದ್ರ ಸಣ್ಣಕ್ಕಿ, ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ನೀಲನ್ನವರ, ಬಸವಂತ ಕೋಣಿ, ಲಕ್ಷ್ಮಣ ಚಂದರಗಿ, ಲಕ್ಷ್ಮಣ ನೀಲನ್ನವರ, ನ್ಯಾಯವಾದಿ ಎಂ.ಐ. ನೀಲನ್ನವರ, ಈರಯ್ಯ ಹಿರೇಮಠ, ಸುಭಾಸ ಜಂಬಗಿ, ಸುಭಾಸ ಕರೆನ್ನವರ, ಪ್ರಕಾಶ ಹಾಲನ್ನವರ, ಅಶೋಕ ಕೋಣಿ, ಶ್ರೀಧರ ದಯನ್ನವರ, ಈಶ್ವರ ಬಳಿಗಾರ, ಬಸಪ್ಪ ಮೇಳೆನ್ನವರ, ಬಸನಗೌಡ ದೇಯನ್ನವರ, ದುಂಡಪ್ಪ ಕಂಬಿ, ಬಸವರಾಜ ಸನದಿ, ಗ್ರಾಪಂ ಸದಸ್ಯರು, ಪಿಕೆಪಿಎಸ್ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 


Spread the love

About Fast9 News

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *