Breaking News

ಚಿಕ್ಕೋಡಿ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ವಿಜಯಮಾಲೆ ಇಲ್ಲಿದೆ ಡಿಟೆಲ್ಸ್,,,?

Spread the love

ಚಿಕ್ಕೋಡಿ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ವಿಜಯಮಾಲೆ ಇಲ್ಲಿದೆ ಡಿಟೆಲ್ಸ್,,,?

ಚಿಕ್ಕೋಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ fast9news ನಡೆಸಿದ ಸಮೀಕ್ಷೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ‌ ಈ ಬಾರಿ ಕಾಂಗ್ರೇಸ್ ಪರ ಜನರು ಒಲವು ತೋರಬಹುದು ಅಂತ ಕಾಣಿಸುತ್ತದೆ.

ಚಿಕ್ಕೋಡಿ ಲೊಕಸಭಾ ಕ್ಷೇತ್ರದಲ್ಲಿ ಬರುವ ವಿಧಾನ ಸಭಾ ಕ್ಷೇತ್ರಗಳಲ್ಲಿ fast9news ವರದಿಗಾರರು ಸುತ್ತಾಡಿ ಮತದಾರರ ಮನದಾಳದ ಮಾತನ್ನು ಸಂಗ್ರಹಿಸಿದ ಪ್ರಕಾರ ಈ ಬಾರಿ ಯುವ ಪ್ರತಿಭೆಗೆ ಮತ ಚಲಾಯಿಸುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಶೇ. 60 ರಷ್ಟು ಮಂದಿ ಕಾಂಗ್ರೇಸ್ಸಿಗೆ ನಮ್ಮ ಮತ ಎಂದು ತಿಳಿಸಿದರೆ ಶೇ.40 ರಷ್ಟು ಜನರು ಬಿಜೆಪಿ ಪರ ಒಲವು ತೋರಿದ್ದಾರೆ.

ಎರಡು ದಿನ ನಡೆಸಿದ ಈ ಸಮೀಕ್ಷೆಯಲ್ಲಿ ಕಾಂಗ್ರೇಸ್ ಜಯಭೇರಿ ಬಾರಿಸಲಿದೆ ಎಂದು ಮತದಾರರ ಮನದಾಳದ ಮಾತಾಗಿದೆ.ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೋದ ಬಾರಿ ಜಯಗಳಿಸಿದ ನಂತರ ಕ್ಷೇತ್ರಕ್ಕೆ ಬಾರದೆ ಇರೋದು ಹಿನ್ನಡೆಯಾದರೆ ಇತ್ತ ಸಚಿವ ಸತೀಶ ಜಾರಕಿಹೋಳಿಯವರ ಪುತ್ರಿ ಮೊದಲ ಬಾರಿ ಕಾಂಗ್ರೆಸ್‌ ಅಬ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೋಳಿಯವರಿಗೆ ತಂದೆಯ ಅಬಿವೃದ್ದಿ ಕಾರ್ಯ,ಅವರ ಕಾರ್ಯನಿಷ್ಟೆ ಕೈ ಹಿಡಿಯಬಹುದು ಅಂದರೂ ತಪ್ಪಿಲ್ಲ.

ಲಿಂಗಾಯತ ಪ್ರಾಬಲ್ಯ ಇರುವ ಚಿಕ್ಕೋಡಿ ಕ್ಷೇತ್ರದಲ್ಲಿ ಲಿಂಗಾಯತ ಸಮಜಾದ 4.10 ಲಕ್ಷ ಮತಗಳು, ಕುರುಬ ಸಮಾಜದ – 1.70 ಲಕ್ಷ ಮತಗಳು,ಎಸ್‌ಸಿ 1.65 ಲಕ್ಷ ಮತಗಳು, ಎಸ್.ಟಿ-90,000, ಸಾವಿರ ಮತಗಳು, ಮುಸ್ಲಿಂ ಸಮಾಜದ 1,80,000 ಸೇರಿ ಸೇರಿ ಒಟ್ಟು 17,41,758 ಲಕ್ಷ ಮತದಾರರು ಇದ್ದಾರೆ. ಆದರೂ ಬಿಜೆಪಿಗೆ ಲಿಂಗಾಯತ ಸಮಾಜ ಕೈ ಹಿಡಿದರೆ ಇತ್ತ ಅಹಿಂದ ಮತಗಳು ಸಚಿವ ಸತೀಶ ಜಾರಕಿಹೋಳಿ ಪುತ್ರಿ ಪ್ರಿಯಾಂಕಾ ಜಾರಕಿಹೋಳಿ ಇವರ ಕೈ ಬಲಪಡಿಸುವದರಲ್ಲಿ ಸಂಶಯವಿಲ್ಲ.ಯಾಕೆಂದರೆ ಇಲ್ಲಿ ಹಿಂದೂಳಿದ ಮತಗಳು ನಿರ್ಣಾಯಕವಾಗಿದ್ದು ಅದರ ಜೊತೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾದರೂ ಕಾಂಗ್ರೇಸ್ಸಪರ ನಿಲ್ಲಬೇಕಾಗುತ್ತದೆ.

ಅಷ್ಟೆ ಅಲ್ಲ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೋಳಿ,
ಶಾಸಕ ರಮೇಶ ಜಾರಕಿಹೋಳಿ ಮತ್ತು ಬಾಲಚಂದ್ರ ಜಾರಕಿಹೋಳಿ ತಮ್ಮ ಸಹೋದರನ ಪುತ್ರಿ ಪ್ರಿಯಾಂಕಾ ಜಾರಕಿಹೋಳಿ ಪರ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದು ಕೂಡ ಅಲ್ಲಗೆಳೆಯಲು ಸಾದ್ಯವಿಲ್ಲ ಹೀಗಿರುವಾಗ ಈ ಬಾರಿ ಚಿಕ್ಕೋಡಿ ಲೊಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಜಯಬೇರಿ ಬಾರಿಸುವುದು ಮೆಲ್ನೋಟಕ್ಕೆ ಕಾಣಿಸುತ್ತಲಿದೆ,,ಆದರೆ ಮತದಾರ ಕೊನೆಯಲ್ಲಿ ಯಾರ ಪರ ನಿಲ್ಲುತ್ತಾನೆ,,ಅದರ ಜೊತೆಯಲ್ಲಿ ಈ ಬಾರಿಯೂ ಕೂಡ ಮೋದಿಯವರ ಹೆಸರು ಬಿಜೆಪಿ ಗೆಲ್ಲಿಸುತ್ತಾ ಅಥವಾ ಕಾಂಗ್ರೇಸ್ ಗ್ಯಾರಂಟಿ ಕೈ ಹಿಡಿಯುತ್ತಾ ಅನ್ನೊದನ್ನ ಅಂತಿಮವಾಗಿ ಕಾದು ನೋಡೊಣ,,,,?

*ಚುನಾವಣೆಯ ವಿಶೇಷ ಸುದ್ದಿಗಳಿಗಾಗಿ fast9news,,ಯೂಟೂಬ್ ಚಾನಲ್ ,ಸಬ್ ಸ್ಕ್ರೈಬ್ ಮಾಡಿ,,,*


Spread the love

About Fast9 News

Check Also

ಈ ಜಗತ್ತು ನಿಂತಿರುವುದೇ ದೇವರಿಂದ* *ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ* *ಈ ಜಗತ್ತು ನಿಂತಿರುವುದೇ …

Leave a Reply

Your email address will not be published. Required fields are marked *