Breaking News

ಹಾರೂಗೇರಿ ಎಸ್ ಎಮ್ ನಾರಗೊಂಡ ಶಾಲೆಯಲ್ಲಿ ವಿಶ್ವ ಫೂಲ್ ಡೇ ಬದಲು ವಿಶ್ವ ಕೂಲ ಡೇ

Spread the love

ಹಾರೂಗೇರಿ ಎಸ್ ಎಮ್ ನಾರಗೊಂಡ ಶಾಲೆಯಲ್ಲಿ ವಿಶ್ವ ಫೂಲ್ ಡೇ ಬದಲು ವಿಶ್ವ ಕೂಲ ಡೇ

ಆನಂದ ಕೋಳಿಗುಡ್ಡೆ :ವರದಿ.
ಹಾರೂಗೇರಿ: ಪರಿಸರ ಸಂರಕ್ಷ ಣೆ ಹಿಂದೆಂದಿಗಿಂತ ಈಗ ಹೆಚ್ಚು ಮಹತ್ವ ಪಡೆಯುತ್ತಿದೆ. ಪ್ರಕೃತಿ ವಿಕೋಪಗಳು ಈಗಾಗಲೇ ಮನುಕುಲಕ್ಕೆ ಪಾಠ ಹೇಳಿಕೊಡುತ್ತಿವೆ. ಪರಿಸರ ಸಂರಕ್ಷಣೆ ಈಗಿರುವ ಮಾರ್ಗವಾಗಿದೆ. ಈಗ ನೆಟ್ಟಿರುವ ಸಸಿಗಳನ್ನು ಗಿಡ, ಮರಗಳನ್ನಾಗಿ ಪೋಷಿಸುವುದು ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚು ಗಮನ ಹರಿಸಬೇಕೆಂದು ಡಾ. ಗೀರಿನ ನಾರಗೊಂಡ ಕರೆ ನೀಡಿದರು.

ಅವರು ಪಟ್ಟಣದ ಶ್ರೀ ಎಸ್ ಎಮ್ ನಾರಗೊಂಡ ಇಂಟರ್ ನ್ಯಾಶನಲ್ ಸಿ.ಬಿ.ಎಸ್. ಇ ಶಾಲೆಯ ಆವರಣದಲ್ಲಿ ವಿಶ್ವಫೂಲ್ ಡೇ ಬದಲಾಗಿ ವಿಶ್ವ ಕೂಲ್ ಡೇ ಎಂಬ ನೂತನ ಪರಿಕಲ್ಪನೆಯೊಂದಿಗೆ ಸಸಿ ನೆಟ್ಟು ಕಾರ್ಯಕ್ರಮದಲ್ಲಿ ಸಸಿ ನೆಡಸಿ ಮಾತನಾಡುತ್ತಾ “ವೃಕ್ಷೋ ರಕ್ಷತಿ ರಕ್ಷಿತಃ” ಮರಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಇದರಿಂದ ಶುದ್ಧಗಾಳಿಯೂ ದೊರೆಯುವುದು ಕೂಡ ಕಷ್ಟವಾಗುವ ಪರಿಸ್ಥಿತಿ ಎದುರಾಗಿದ್ದು, ಇನ್ನೂ ಮಳೆಬೆಳೆಯೂ ಕಡಿಮೆ ಆಗಿರುವುದನ್ನು ಗಮನಿಸಬಹುದು. ಇದಕ್ಕೆ ಮೂಲ ಕಾರಣ ಪರಿಸರ ಸಂರಕ್ಷಣೆಯನ್ನು ಮಾಡದಿರುವುದು ಹಾಗೂ ಪರಿಸರ ಸಂರಕ್ಷಣೆಯ ಮುಖೇನ ಗಿಡಗಳನ್ನು ಬೆಳೆಸಲು ಸಹಕರಿಸದೇ ಇರುವುದು ಹಾಗೂ ಪರಿಸರ ಸ್ನೇಹಿ ಜೀವನ ಕ್ರಮ ಅಳವಡಿಸಿಕೊಳ್ಳಿ, ಜಲಮಾಲಿನ್ಯ, ಶಬ್ದಮಾಲಿನ್ಯ, ವಾಯುಮಾಲಿನ್ಯಗಳಿಗೆ ಮನುಷ್ಯನೇ ಮೂಲ ಕಾರಣ. ಪರಿಸರ ಸ್ನೇಹಿ ಬಟ್ಟೆ ತೊಡುಗೆಗಳು, ಪ್ಲಾಸ್ಟಿಕ್ ಬಳಸದೇ ಎಲ್ಲೆಂದರಲ್ಲಿ ಬಿಸಾಕದೆ ಇರುವುದು ಆದಷ್ಟೂ ಕಡಿಮೆ ಕಸದ ಉತ್ಪತ್ತಿ, ನೀರಿನ ಮಿತವ್ಯಯ ಬಳಕೆ, ರಾಸಾಯನಿಕಗಳನ್ನು ಬಳಸದೇ ಇರುವುದು, ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಕೂಡ ಪರಿಸರ ಸ್ನೇಹಿ ಕಾರ್ಯಕ್ರಮಗಳೇ. ಈ ಎಲ್ಲಾ ಕೆಲಸಗಳನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವೆಂದು ಮಾಡಿದರೆ ಪರಿಸರ ಸಂರಕ್ಷಣೆಗೆ ಇದೇ ನಾವು ಕೊಡುವ ಉಡುಗೊರೆ ಹಾಗೂ ನಮ್ಮ ಮುಂದಿನ ಪೀಳಿಗೆ ನಾವು ಕೊಡುವ ಒಂದು ಅಮೂಲ್ಯ ಸಂಪತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಎಸ್ ಎಮ್ ನಾರಗೊಂಡ ಇಂಟರ್ ನ್ಯಾಶನಲ್ ಸಿ.ಬಿ.ಎಸ್.ಇ ಶಾಲೆಯ ಅಧ್ಯಕ್ಷ ವಿವೇಕ ನಾರಗೊಂಡ, ಮಹಂತೇಶ್ ಗು ಮುಗಳಖೋಡ. ಮುನೀರ್ ಖಾನಾಪುರ, ಸಿದ್ದು ಕಿರೆಸೂರ, ಮಹಾಂತೇಶ್ ಕಡಲಗಿ, ಮಂಜುನಾಥ್ ರೇವನ್ನವರ್, ಮಹಾದೇವ ಚೌಧರಿ, ಮೋತಿರಾಮ ಜೋಗದಂಡೆ, ಅಶ್ವಿನಿ ಚೌದರಿ, ಶಂಭುಲಿಂಗ ಜಕಾತಿ, ಮೇಘ ಜಕಾತಿ, ಸೀಮಾ ಚೌಹಾನ್, ರೆಹಮಾನ್ಬಿ ನದಾಫ್, ರಶ್ಮಿ ಬಾಗಡೆ, ಶ್ವೇತ ಚೌಗಲಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ಈ ಜಗತ್ತು ನಿಂತಿರುವುದೇ ದೇವರಿಂದ* *ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ* *ಈ ಜಗತ್ತು ನಿಂತಿರುವುದೇ …

Leave a Reply

Your email address will not be published. Required fields are marked *