ಡಾ ll ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಡದೇ ಅಪಮಾನ ಮಾಡಿದ ಹಳ್ಳೂರಿನ ಕ್ರೆಡಿಟ್ ಸೊಸೈಟಿಗಳು ಕ್ರಮ ಕೈಗೊಳ್ಳದ ಅಧಿಕಾರಿಗಳು.
ಮೂಡಲಗಿ : ಜನವರಿ 26 ನೇ ದಿನಾಂಕದಂದು ರಾಜ್ಯದ ಸರಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಸಂವಿಧಾನ ಪಿತಾಮಹ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರ ಕಡ್ಡಾಯವಾಗಿ ಇಡುವಂತೆ ಆದೇಶ ಹೊರಡಿಸಲಾಗಿದೆ.
ಆದರೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಶ್ರೀ ಮಹಾವೀರ ಕೋ ಅಪ್ ಕ್ರೆಡಿಟ್ ಸೊಸೈಟಿ ನಿಯಮಿತ ಹಳ್ಳೂರ್ ಮತ್ತು ಬಾಪೂಜಿ ಸೌಹಾರ್ದ ಸೊಸೈಟಿ ಹಳ್ಳೂರ ಇವರು  ಡಾll ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಧ್ವಜಾರೋಹಣ ನೆರವೇರಿಸಿ ಅಪಮಾನ ಮಾಡಿರುವ ಘಟನೆ ನಡದಿದೇ ಗಣರಾಜ್ಯೋತ್ಸವ ದಂದು ಕಡ್ಡಾಯವಾಗಿ ಭಾರತ ರತ್ನ ಸಂವಿದಾನ ಪಿತಾಮಹ ಡಾ ll ಬಿ ಆರ್ ಅಂಬೇಡ್ಕರ ಅವರ ಭಾವಚಿತ್ರ ಇಟ್ಟು ಪೂಜೆಮಾಡಬೇಕು ಎಂದು ಸರಕಾರದ ಆದೇಶ ವಿದ್ದರೂ ಸಹ ಬಾವ ಚಿತ್ರ ಇಡದೆ ಅಪಮಾನ ಮಾಡಿದ್ದಾರೆ, ಶ್ರೀ ಮಹಾವೀರ ಕೋ ಅಪ್ ಕ್ರೆಡಿಟ್ ಸೊಸೈಟಿ ನಿಯಮಿತ ಹಳ್ಳೂರ್ ಆಡಳಿತ ಮಂಡಳಿ ಮತ್ತು ಸಿಬಂದಿಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು  ಕಾದು ನೋಡಬೇಕಾಗಿದೆ.
 Fast9 Latest Kannada News
Fast9 Latest Kannada News
				 
			 
			 
			 
		 
						
					 
						
					 
						
					 
					
				