ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸಂಸ್ಥೆ ವತಿಯಿಂದ ಸಾರ್ವಜನಿಕ ಸೇವಾ ಸಿಂಧು ಕೇಂದ್ರ ಉದ್ಘಾಟಣೆ
ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಮೇಲ್ವಿಚಾರಕ ಕಛೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸಂಸ್ಥೆ ವತಿಯಿಂದ ಸಾರ್ವಜನಿಕ ಸೇವಾ ಸಿಂಧು ಕೇಂದ್ರ ಉದ್ಘಾಟಿಸಲಾಯಿತು.
ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಕೇಶವ್ ದೇವಾಂಗ ಅವರು
ಮಾತನಾಡಿ, ಕೇಂದ್ರ ಸರ್ಕಾರದ ಸೇವಾ ಸಿಂಧು ಕಾರ್ಯಕ್ರಮದಡಿ ಗೋಕಾಕ ತಾಲೂಕಿನಲ್ಲಿ 44 ಕಾಮನ್ ಸರ್ವಿಸ್ ಸೆಂಟರ್ ತೆರಯಲಾಗಿದೆ.
ಈ ಯೋಜನೆಯು ಜನರಿಗೆ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಜನನ, ಮರಣ, ಆಯುಶ್ಮಾನ, ಇ-ಶ್ರಮ್, ಆಧಾರ, ರೇಶನ್ ಕಾರ್ಡ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಒದಗಿಸಲಾಗುವುದು.
ಈ ಸೇವಾ ಕೇಂದ್ರಗಳಲ್ಲಿ ಆಧಾರ ಕಾರ್ಡ್, ಪಾನ ಕಾರ್ಡ್, ವೋಟರ್ ಐಡಿ, ಆದಾಯ ಪ್ರಮಾಣ ಪತ್ರ, ಜಾತಿ ಸರ್ಟಿಫಿಕೇಟ್, ರೈತರಿಗೆ ಸಂಬಂಧಿಸಿದ ಪಹಣಿ, ಕೃಷಿಗೆ ಸಂಬಂಧಿಸಿದ ಪಿಎಂ ಕಿಸಾನ ಯೋಜನೆಯ ನಾಡಕಾರ್ಯಾಲಯದಲ್ಲಿ ಸಿಗುವ ನಾಗರಿಕ ಸೇವಾ ಸೌಲಭ್ಯಗಳು, ರೈಲ್ವೆ ಟಿಕೆಟ್ ಬಸ್ ಟಿಕೇಟ್, ಎಪಿಪಿವಾಯ್, ಮೊಬೈಲ್ ರಿಚಾರ್ಜ್, ವಿದ್ಯುತ್ ಬಿಲ್ ಮುಂತಾದ ಸರಕಾರದ ಸೇವೆಗಳನ್ನು ಪಡೆಯಬಹುದು ಎಂದು ತಿಳಿಸಿದರು.
ಧರ್ಮ ಸ್ಥಳ ಸಂಘವು ಪರಿಸರ ಸಂರಕ್ಷಣೆ, ಸ್ವಚ್ಛತೆ, ಕೆರೆಗಳ ಹೂಳೆತ್ತುವ ಈ ಕಾರ್ಯಗಳ ಜತೆಗೆ ಮಹಿಳಾ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವಲ್ಲಿ ಧರ್ಮಸ್ಥಳ ಸಂಸ್ಥೆ ಅಗತ್ಯ ಸಹಕಾರ ನೀಡುತ್ತಿದೆ. ಈ ಯೋಜನೆಗಳಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳು ದರ್ಮೆಂದ್ರ ,ಪುರಸಭೆಯ ಸದಸ್ಯರಾದ ಪ್ರಕಾಶ ಕರನಿಂಗ, ವಲಯದ ಮೇಲ್ವಿಚಾರಕರಾದ ಸಂತೋಷ ಲೂಲ್ಲಿ ನಿರೂಪಿಸಿದರು, ಮಿನಾಕ್ಷಿ ವಂದಿಸಿದರು ಸುಜಾತಾ ಸ್ವಾಗತಿಸಿದರು, ಒಕ್ಕೂಟದ ಅದ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.