ಮತ್ತೆ ಪ್ರೆಂಡ್ಸ್ ಆದ್ರಾ ಜಾರಕಿಹೋಳಿ ಮತ್ತು ಡಿಕೆಸಿ
ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ,ಶತ್ರುಗಳೂ ಅಲ್ಲ ಅನ್ನುವ ಮಾತಿದೆ. ಇದಕ್ಕೆ ತಕ್ಕಂತೆ ಡಿಕೆಶಿ, ರಮೇಶ್ ಜಾರಕಿಹೊಳಿ ನಡೆದುಕೊಂಡಿದ್ದಾರೆ.ವಿಧಾನಸಭೆ ಅಧಿವೇಶನದ ಮೊದಲ ದಿನ ಈ ಇಬ್ಬರು ನಾಯಕರು ವಿಧಾನಸೌಧದ ಮೊಗಸಾಲೆಯಲ್ಲಿ
ಪರಸ್ಪರ ಭೇಟಿಯಾಗಿದ್ದರು. ಈ ವೇಳೆ ಡಿಕೆಶಿ ರಮೇಶ್ ಜಾರಕಿಹೊಳಿಗೆ ಹ್ಯಾಂಡ್ ಶೇಕ್ ಮಾಡಿ ಹೇಗಿದ್ದೀರಿ ಎಂದು ಕೇಳಿದ್ದಾರೆ. ರಮೇಶ್ ಚೆನ್ನಾಗಿದ್ದೀನಿ ಎಂದಿದ್ದಾರೆ.ಇವರಿಬ್ಬರ ಫ್ರೆಂಡ್ಶಿಪ್ ನೋಡಿ ಉಳಿದ ನಾಯಕರು ಖುಷಿಪಟ್ಟಿದ್ದಾರೆ.