ದುರದುಂಡಿ ಗ್ರಾಮದಲ್ಲಿ ಹರಾಜಿನ ಮೂಲಕ ಗ್ರಾಪಂ,ಗೆ ಆಯ್ಕೆ ಸಂಭವ !!
ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ ಎಂದು ಗೊತ್ತಿದ್ದರೂ ಸಹ ಯಾವುದಕ್ಕೂ ಲೆಕ್ಕಿಸದೆ ಹೇಗಾದರೂ ಮಾಡಿ ದುರದುಂಡಿ ಗ್ರಾಪಂ.ಗೆ ತಮ್ಮ ಹಣದ ಬಲದಿಂದ ಆಯ್ಕೆಯಾಗಲಿಕ್ಕೆ ಸಜ್ಜಾಗುತ್ತಿರುವುದು ತಿಳಿದು ಬಂದಿದೆ,
ನಿನ್ನೆ ದಿನವು ವಾರ್ಡಿಗೆ ಸಂಬಂದಿಸಿದಂತೆ ಸುಮಾರು 5ರಿಂದ 7 ಲಕ್ಷದವರೆಗೆ ಗ್ರಾಪಂ ಸ್ಥಾನದ ಹರಾಜಿಗೆ ಕೆಲವು ಮುಖಂಡರು ಕೂಡಿದ್ದರು.ಆದರೆ ಇವರಿಂದ ಗ್ರಾಮದಲ್ಲಿ ಅಭಿವೃದ್ದಿ ಆಗುವುದು ಸಂಶಯಾಸ್ಪದ ಮೇಲೆ ಕೆಲವರು ವಿರೋದ ವ್ಯಕ್ತಪಡಿಸಿದ್ದರಿಂದ ಚುನಾವಣೆ ಅಧಿಕಾರಿಗಳಿಗೆ ತಿಳಿದು ಬಂದಿದ್ದರಿಂದ ಹರಾಜು ಪ್ರಕ್ರಿಯೆ ನಿಂತಿದೆ.
ಆದರೆ ಮತ್ತೆ ದುರದುಂಡಿಯಲ್ಲಿರುವ ವಾರ್ಡ್ ನಂಬರ 3 ರ ಸ್ಥಾನಕ್ಕೆ ಹರಾಜು ಮಾಡುವ ಪ್ರಯತ್ನದಲ್ಲಿ ಇಲ್ಲಿನ ಮುಖಂಡರು ಪ್ರಯತ್ನಿಸುತಿದ್ದಾರೆಂದು ಮಾಹಿತಿ ಒದಗಿದೆ.ಇಷ್ಟೆಲ್ಲಾ ನಡೆಯುತಿದ್ದರು ಸಹ ಸಂಬಂದಪಟ್ಟ ಚುನಾವಣೆ ಅಧಿಕಾರಿಗಳು ಯಾವುದೆ ಕ್ರಮ ತೆಗೆದುಕೊಳ್ಳಲಿರುವುದು ಗ್ರಾಮಸ್ಥರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
Fast9 Latest Kannada News