ಉತ್ತಮ ಫಲಿತಾಂಶ ಹೊಂದಿದ ಘಟಪ್ರಭಾ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್
ಗೋಕಾಕ: ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಮಲ್ಲಿಕಾರ್ಜುನ ನಗರದಲ್ಲಿರುವ ವಾಸವಿರುವ ಜ್ಯೋತಿ ರಾಮಚಂದ್ರನ ನೇಸರ್ಗಿ ಚಿಕ್ಕವಯಸ್ಸಿನಿಂದಲೂ ಓದುವುದರಲ್ಲಿ ತುಂಬಾ ಆಸಕ್ತಿ ಹೊಂದಿದ ವಿದ್ಯಾರ್ಥಿನಿ sslc ಪರೀಕ್ಷೆಯಲ್ಲಿ 95.36% ಪಲಿತಾಂಶ ಹೊಂದಿ ಪಿಯುಸಿಯಲ್ಲಿ 93.33% ಉತ್ತಮ ಫಲಿತಾಂಶ ಹೊಂದಿ ಎಂಬಿಬಿಎಸ್ ಮೆಡಿಕಲ್ ರ್ಯಾಂಕಿಂಗ್ ನಲ್ಲಿ 670720 ಪೈಕಿ ಸರ್ಕಾರಿ ಈಎಸ್ಐಸಿ ಮೆಡಿಕಲ್ ಕಾಲೇಜ ಗುಲ್ಬರ್ಗನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಓದಲು ಆಯ್ಕೆಯಾಗಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ವಿದ್ಯಾರ್ಥಿ ಚಿಕ್ಕವಯಸ್ಸಿನಿಂದ ಎಂ.ಡಿ.ಐ ಸರ್ಕಾರಿ ಹಿರಿಯ ಪ್ರಾಥಮಿಕ ಮಲ್ಲಾಪುರ (ಪಿ.ಜಿ) ಶಾಲೆ ಎಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿಸಿ ಮುಂದಿನ ಕಾಲೇಜ್ ವಿದ್ಯಾಭ್ಯಾಸವನ್ನು ಎಸ್.ಕೆ ಹುಕ್ಕೇರಿ ಪಿಯು ಕಾಲೇಜು ಮಲ್ಲಾಪುರ(ಪಿ.ಜಿ) ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಉತ್ತಮ ಫಲಿತಾಂಶದದಿಂದ ಗುಲ್ಬರ್ಗ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಎಂ.ಬಿ.ಬಿ.ಎಸ್ ಓದಲು ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿ ಬಡ ಕುಟುಂಬದಲ್ಲಿ ಹುಟ್ಟಿದ್ದ ಇವರ ಕುಟುಂಬದಲ್ಲಿ ತಂದೆ ತಾಯಿ ಒಬ್ಬ ಸೋದರಿ ಹೊಂದಿದ್ದು, ತಂದೆ ರಾಮಚಂದ್ರನ್ ಬಿ. ನೇಸರ್ಗಿ ಗೋಕಾಕ ಫಾಲ್ಸ್ ಮಿಲ್ಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಈ ವಿದ್ಯಾರ್ಥಿಯ ಹೆಚ್ಚಿನ ಒಂದು ವಿದ್ಯಾಭ್ಯಾಸಕ್ಕಾಗಿ ಮಿಲ್ ಎಲ್ಐಸಿ ಇನ್ಸೂರೆನ್ಸ್ ಹಣದಿಂದ ತಮ್ಮ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸ ನೀಡುತ್ತಿರುವುದು ಕಂಡುಬಂದಿದೆ.