ರಾಮಗಿರಿ ಮಹಾರಾಜರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಸ್ಲಿಂ ಸಮುದಾಯದಿಂದ ಮನವಿ
ಘಟಪ್ರಭಾ: ಮೊಹಮ್ಮದ್ ಪೈಗಂಬರರ ವಿಚಾರದಲ್ಲಿ ಮಹಾರಾಷ್ಟ್ರದ ಮೂಲದ ರಾಮಗಿರಿ ಮಾಹಾರಾಜರ ಹೇಳಿಕೆಯನ್ನು ಖಂಡಿಸಿ ಪಟ್ಟಣದ ಮುಸ್ಲಿಂ ಸಮುದಾಯದ ಯುವಕರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಘಟಪ್ರಭಾ ಪೋಲಿಸ್ ಠಾಣೆಯ ಪಿ ಐ ಬಸವರಾಜ ಕಾಮನಬೈಲ ಅವರ ಮುಖಾಂತರ ಮಾನ್ಯ ಎಸ್ ಪಿ ಸಾಹೇಬರಿಗೆ ಮನವಿ ಪತ್ರ ಸಲ್ಲಿಸಿದರು.
ಠಾಣೆಯ ಎ ಎಸ್ ಐ ಫೋಲಿಸ್ ಅಧಿಕಾರಿಯಾದ ಎಸ್ ಯು ಕಿಲಾರಿ ಅವರು ಮನವಿ ಪತ್ರ ಸ್ವೀಕರಿಸಿದರು.
ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹರಿದಾಡುತ್ತಿದ್ದು ಸದರಿ ವಿಡಿಯೋದಲ್ಲಿ ಮುಸ್ಲಿಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್ ರ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ವಿಡಿಯೋದಲ್ಲಿ ಅವರ ವಿವಾಹಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಜನರಲ್ಲಿ ಇಸ್ಲಾಂ ಧರ್ಮ ಹಾಗೂ ಮೊಹಮ್ಮದ್ ಪೈಗಂಬರರ ಕುರಿತು ಅಪ ಪ್ರಚಾರ ಮಾಡಲಾಗಿದೆ. ವೀಡಿಯೋದಲ್ಲಿ ರಾಮಗಿರಿ ಮಹಾರಾಜರು ಮರಾಠಿಯಲ್ಲಿ ಮಾತನಾಡಿದ್ದು ಅವರ ಆಡಿರುವ ಮಾತುಗಳಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ದಕ್ಕೆ ಆಗುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಆಗಿದೆ.
ಈ ಕೂಡಲೇ ರಾಮಗಿರಿ ಮಹಾರಾಜರ ವಿರುದ್ಧ ಕೇಸ್ ದಾಖಲಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಯುವಕರು ಸೇರಿದ್ದರು.
ಈ ಸಂದರ್ಭದಲ್ಲಿ ಅಕ್ಯೂಬ ಸೈಯದ್, ಅಕೀಲ ಕಬ್ಬೂರ,ಇಮ್ರಾನ್ ಬಟಕುರ್ಕಿ, ಉಸ್ಮಾನ್ ಬಾಗವಾನ್,ಅಜರು ಅತ್ತಾರ,ಮೋಹಿನ್ ಜಾಮಯ,ಹಾರೂನ್ ಮಕಾನದಾರ,ಅಜರು ಜಮಾದಾರ,ಅಪ್ಪಾಸಾಬ ಮುಲ್ಲಾ, ಇನ್ನೂ ಅನೇಕ ನೂರಾರು ಯುವಕರು ಉಪಸ್ಥಿತರಿದ್ದರು.