ಗೋಕಾಕ: ತಾಲೂಕಿನ ಧೂಪದಾಳ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಭೀಮ ಆರ್ಮಿ ಇವರ ಸಂಯುಕ್ತ ಆಶ್ರಯದಲ್ಲಿ ದಾಸ ಸಾಹಿತ್ಯದ ,ರೂವಾರಿ ಮಹಾನ್ ಸಂತ, ದಾಶ೯ನಿಕ, ಕನಕದಾಸರ ೫೩೩ ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತ್ತು. ಈ ಸಂದರ್ಭದಲ್ಲಿ ಕಾಯ೯ಕ್ರಮದಲ್ಲಿ ಭೀಮ ಆಮಿ೯ ಜಿಲ್ಲಾಧ್ಯಕ್ಷರಾದ ಸುನೀಲ ಕೊಟಬಾಗಿ ಮತ್ತು ರೆಹಮಾನ್ ಮೊಕಾಶಿ ಕ ರ ವೆ ತಾಲೂಕ ಸಂಚಾಲಕರು ಗೋಕಾಕ ತಾಲೂಕ ಪ್ರಧಾನ ಕಾಯ೯ದಶಿ೯ಯಾದ ಸುನೀಲ ಈರಗಾರ ಮತ್ತು ಧೂಪದಾಳ ಗ್ರಾಮ ಘಟಕದ ಅಧ್ಯಕ್ಷರಾದ ಅನಿಲ ಇನಾಮದಾರ ಯುವ ಮಿತ್ರರಾದ ಸದ್ದಾಮ್ ನಾಗರಾಜ ರಮೇಶ ಪ್ರಜ್ವಲ್ ಕಿರಣ ರಮಜಾನ ಆಸೀಪ ಮತ್ತಿತರರು ಭಾಗಿಯಾಗಿದರು.
