ಗೋಕಾಕ : ಗೋಕಾಕ ಪಾಲ್ಸ್, ಗೂಡಚಿ ಮಲ್ಕಿ, ಹಿಡಕಲ್ ಡ್ಯಾಂ, ದುಪದಾಳ ಜಲಾಶಯ ಇವುಗಳನ್ನು ಅಭಿವೃದ್ಧಿ ಪಡಿಸಿ, ಅಂತರಾಷ್ಟ್ರೀಯ ತರಹ ಸುಂದರ ಪ್ರವಾಸಿ ತಾಣವನ್ನಾಗಿಸಲು ಗುರಿ ಹೊಂದಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಗೋಕಾಕದ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಅಟಲ್ ಜೀ ಜಯಂತಿ ಆಚರಿಸಿ ಮಾತನಾಡಿದ ಅವರು ಜಲಸಂಪನ್ಮೂಲ ಇಲಾಖೆಯಿಂದ ಗೋಕಾಕ ಬಾಗದಲ್ಲಿ 300 ರಿಂದ 350 ಕೋಟಿ ವೆಚ್ಚದ ಕೆಲಸ ಆರಂಭವಾಗಬೇಕಿತ್ತು. ಆದರೆ ಕೊರೊನಾದಿಂದ ವಿಳಂಬವಾಗಿದೆ. ಮುಂದಿನ ದಿನಮಾನಗಳಲ್ಲಿ ಗೋಕಾಕ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿ, ಪ್ರವಾಸಿ ತಾಣವನ್ನು ಮಾಡುವ ಗುರಿ ಎಂದರು
ಅಮೇರಿಕದಂತೆ ಮಾದರಿಯಲ್ಲಿಯೆ ಇಲ್ಲಿನ ಪ್ರವಾಸಿ ತಾಣಗಳಾದ ಘಟಪ್ರಭಾ ನದಿಯಲ್ಲಿ ಪೂಜಾ ಸ್ಥಳ, ಗೋಕಾಕ ಪಾಲ್ಸ್ ನಲ್ಲಿ ಜಲಪಾತ ಸ್ಥಳದಲ್ಲಿ 20 ಮೀಟರ್ ಅಂತರದಲ್ಲಿ ಗಾಜು ಅಳವಡಿಸುವ ಮೂಲಕ ಪ್ರವಾಸಿಗರನ್ನು ಗಮನ ಸೆಳೆಯುವ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ’ ಎಂದರು.
ಹಾಗೂ ಪ್ರವಾಸಿಗರು ಉಳಿದುಕೊಳ್ಳಲು ಲಾಡ್ಜ, ಮಂಗಲ ಕಾರ್ಯಾಲಯ, ಗೋಕಾಕ ಪಾಲ್ಸ್ ನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಪ್ಲ್ಯಾನ್ ಮಾಡಿಕೊಳ್ಳಲಾಗಿದ್ದು, ಈ ಭಾಗದಲ್ಲಿ 2 ದಿನ ಪ್ರವಾಸ ಕೈಗೊಳ್ಳುವ ರೀತಿ ಪ್ಯಾಕೇಜ್ ವ್ಯವಸ್ಥೆಯನ್ನು ಮಾಡುತ್ತದೆ’ ಎಂದು ಸಚಿವರಾದ ರಮೇಶ ಜಾರಕಿಹೋಳಿಯವರು ಮಾದ್ಯಮದವರಿಗೆ ತಿಳಿಸಿದರು.