Breaking News

ಲಿಂಗಾಯತ ಸಂಸ್ಕೃತಿ, ಗುಣ ಉಳಿಸಿದವರು ಪಂಚಮಸಾಲಿ ಲಿಂಗಾಯತರು : ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳು

Spread the love

 


ಗೋಕಾಕ : ಎಲ್ಲರನ್ನು ಕಟ್ಟಿಕೊಂಡು ಹೊಗುತ್ತಿದ್ದ ಸಮಾಜ ಇವತ್ತು ಸೌಲಬ್ಯ ವಂಚಿರಾಗಿದ್ದೆವೆ, ಅದನ್ನು ಪಡೆಯುವಗೊಸ್ಕರ ನಾವೆಲ್ಲರೂ ಹಕ್ಕಿಗಾಗಿ ಹೊರಾಡಬೇಕಾಗಿದೆ, ಎಂದು ಗೋಕಾಕದ ಗಣಪತಿ ದೇವಸ್ಥಾನದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ತಾಲೂಕಾ ಘಟಕ, ಇದರ ಪದಾದಿಕಾರಿಗಳ ನೇಮಕ ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಬಟ್ಟೆ ವಿತರಿಸಿ ಮಾತನಾಡಿದ ಕೂಡಲಸಂಗಮದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ
ಸ್ವಾಮಿಜಿಯಿಂದ ಘಟಕಕ್ಕೆ ಹೆಸರು ಬರಬೇಕು, ಇತಿ ಮಿತಿಯಲ್ಲಿದ್ದರೆ ಮಾತ್ರ ಸಮಾಜಕ್ಕೆ ಒಳ್ಳೆಯದನ್ನು ಮಾಡಲಿಕ್ಕೆ ಸಾದ್ಯ, ಇವತ್ತು ನಮ್ಮ ಸಮಾಜದ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾದನೆ ಮಾಡಿದರು ಸಹ ಮಿಸಲಾತಿ ಕಾರಣದಿಂದ ಯಾರಿಗೂ ನೌಕರಿ ಸಿಗುತ್ತಿಲ್ಲ, ಹೊರಾಟದ ನಿಜವಾದ ಅರ್ಥಮಾಡಿಕೊಳ್ಳದ ಕಾರಣ ನಾವು ಸೌಲಬ್ಯ ವಂಚಿತರಾಗಿದೇವೆ, ನಮಗೆ 3ಬಿ ವರ್ಗದಲ್ಲಿ ಸೇರಿಸದೆ ನಮನ್ನು 2 ಎಗೆ ಸೇರಿದರೆ ಇನ್ನು ನಮ್ಮ ಸಮಾಜಕ್ಕೆ ಒಳ್ಳೆಯ ಸೌಲಭ್ಯಗಳು ಸಿಗುತ್ತವೆ ಎಂದರು.ಸರಕಾರಕ್ಕೆ ಒತ್ತಡ ಹಾಕದೆ ಇದ್ದರೆ ನಮಗೆ ಸೌಲಬ್ಬ ಸಿಗೊದಿಲ್ಲ.ಆದಕಾರಣ ಡಿ,23 ಕ್ಕೆ ಕೂಡಲಸಂಗಮದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಸಮಾಜದ ಎಲ್ಲ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿಕೊಂಡರು.

ದಿವ್ಯ ಸಾನಿದ್ಯ ವಹಿಸಿದ್ದ ಗೋಕಾಕ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೆಂದ್ರ ಸ್ವಾಮಿಗಳು ಮಾತನಾಡಿ ನೂತನಾವಾಗಿ ಆಯ್ಕೆಯಾದ ಪ್ರಕಾಶ ಬಾಗೋಜಿಯವರು ಹುಟ್ಟು ಹೊರಾಟಗಾರರು ಅವರು ಅದ್ಯಕ್ಷರಾಗಿದ್ದಕ್ಕೆ ನಮಗೆ ಹೆಮ್ಮೆಯಾಗಿದೆ ಹಾಗೂ ಅವರಿಂದ ಮುಂದಿನ‌ ದಿನಗಳಲ್ಲಿ ಗೋಕಾಕ ಮತ್ತು ಮೂಡಲಗಿಯಲ್ಲಿ ಪಂಚಮಸಾಲಿ ಲಿಂಗಾಯತ ಸಮಾಜ ಎಳಿಗೆಯಾಗುವುದರಲ್ಲಿ ಎರಡು ಮಾತಿಲ್ಲ ಎಂದರು.ಲಿಂಗಾಯತ ಅಂದರೆ ಮೊದಲು ಬರುವುದೆ ಪಂಚಮಸಾಲಿ ಲಿಂಗಾಯತ, ಎಲ್ಲರಿಗೂ ದಾನಮಾಡುವುದು ಹಲವಾರು ಮಠಾದಿಶರು ಪಂಚಮಸಾಲಿ ಸಮಾಜಕ್ಕೆ ಬಹಳ ಕೊಡುಗೆ ನೀಡಿದ್ದಾರೆ, ಆದರೆ ಇವತ್ತು ಆ ರೀತಿ ಕೊಡುಗೆ ಕೊಡುವವರು ಕಡಿಮೆ,ಸಮಾಜಕ್ಕಾಗಿ ಪರಿಪುರ್ಣವಾಗಿ ಅರ್ಪಣೆ ಮಾಡಿದವರೆಂದರೆ ಕೂಡಲಸಂಗಮದ ಶ್ರೀ ಶ್ರೀ ಜಯಮೃತ್ಯಂಜಯ ಸ್ವಾಮಿಗಳು ಮಾತ್ರ. ಈಗ ಅವರ ಬೇಡಿಕೆ ಪಂಚಮಸಾಲಿ ಲಿಂಗಾಯತ ಸಮಾಜವನ್ನು 2 ಎಗೆ ಸೇರಿಸಬೇಕು, ನಮ್ಮೆಲ್ಲರ ಮುಂದಿನ ಬವಿಷ್ಯಕ್ಕಾಗಿ ಅವರಿಗೆ ನಾವೆಲ್ಲರೂ ಬೆನ್ನಲುಬಾಗಿ ನಿಲ್ಲಬೇಕಾಗಿದೆ ಎಂದರು.

ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಸಮಾಜದ ಮಿಸಲಾತಿ ಹಕ್ಕೊತ್ತಾಯ ಸಮಿತಿಯ ಅಧ್ಯಕ್ಷರಾದ ಸಿದ್ದನಗೌಡರು ಮಾತನಾಡಿ ಪ್ರತಿ ಕ್ಷೇತ್ರದಲ್ಲೂ ಮಿಸಲಾತಿಯಿಂದ ವಂಚಿತರಾದವರೆಂದರೆ ಅದು ಪಂಚಮಸಾಲಿ ಸಮಾಜ
ಈಗ ಅದು ಮುಂದೆ ಬರಬೇಕಾದರೆ ಸಮಾಜದವರೆಲ್ಲರೂ ಒಂದಾಗಬೇಕು, ನಾವೆಲ್ಲರೂ ಒಗ್ಗಟ್ಟಾದರೆ ವಿದಾನಸೌದ ನಡುಗುತ್ತದೆ ಅದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಅದಕ್ಕಾಗಿ ನಾವೆಲ್ಲರೂ ಸಂಘಟಿತರಾಗಬೇಕಾಗಿದೆ.ಅದಕ್ಕಾಗಿ ಪ್ರತಿ ಹಳ್ಳಿಗಳಲ್ಲಿಯೂ ಪಂಚಮಸಾಲಿ ಯುವಕರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು,

ಇದೆ ಸಮಯದಲ್ಲಿ ಕೊರಾನಾ ಸಮಯದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೊರಾನಾ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸಿದ ಪೌರಕಾರ್ಮಿಕರಿಗೆ ಮುಖಂಡರಾದ ಪ್ರಕಾಶ ಬಾಗೋಜಿಯವರು 100ಕ್ಕಿಂತಲೂ ಹೆಚ್ಚು ಪೌಕಾರ್ಮಿಕರಿಗೆ ಬಟ್ಟೆ ವಿತರಿಸಿ
ನನಗೆ ನೀಡಿದ ಸ್ಥಾನಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತೇನೆ, ಸಮಾಜದ ಎಳಿಗೆಗಾಗಿ ಸಮಾಜದ ಸಲುವಾಗಿ,ಉದ್ದಾರಕ್ಕಾಗಿ ಹಿಂದೆ ಸರಿಯದೆ ಕೆಲಸ ಮಾಡುತ್ತೇನೆ, ಗೋಕಾಕದಲ್ಲಿ ಪಂಚಮಶಾಲಿ ಸಮಾಜ ರಾಜಕೀಯದಲ್ಲಿ ತುಳಿತಕ್ಕೆ ಒಳಗಾಗಿದ್ದರೆ ಯಾರ ಭಯಕ್ಕೆ ಒಳಗಾಗದೆ ಎಲ್ಲರೂ ನಮ್ಮ ಮುಂದಿನ ಪಿಳಿಗೆ ಬವಿಷ್ಯದ ಸಲುವಾಗಿ ಹೊರಬರಲು ವಿನಂತಿಸಿದರು.

ಈ ಸಮಾರಂಭದಲ್ಲಿ ಹಿರಿಯ ನ್ಯಾಯವಾದಿಗಳಾದ ಎಮ್,ಸಿ,ಮಾಸ್ತಿಹೋಳಿ,ಬಸವರಾಜ ರೊಟ್ಟಿ,ಡಾ: ರವಿ ಪಾಟೀಲ,ಸುರೇಶ ಪಾಟೀಲ,ಮಹಾಂತೇಶ ವಾಲಿ,ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು.


Spread the love

About Fast9 News

Check Also

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

Spread the love  ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು …

Leave a Reply

Your email address will not be published. Required fields are marked *