ಗೋಕಾಕ: ದೇಶದಾಧ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಸಾರಥ್ಯದಲ್ಲಿ ಬಿಜೆಪಿಯ ಕಮಲ ಅರಳಿದ್ದು, ರಾಷ್ಟ್ರದ ಪ್ರಗತಿಯ ಹಿತದೃಷ್ಟಿಯಿಂದ ಹಾಗೂ ಬೆಳಗಾವಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸಿ ಕೇಂದ್ರ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಧರ್ಮಪತ್ನಿ ಮಂಗಳಾ ಅಂಗಡಿಯವರಿಗೆ ಆಶೀರ್ವಾದ ಮಾಡುವಂತೆ ಕೆಎಮ್ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಕೋರಿದರು.
ಮಂಗಳವಾರದಂದು ಸಂಜೆ ಇಲ್ಲಿಗೆ ಸಮೀಪದ ಮೆಳವಂಕಿ ಗೌಡನ ಕ್ರಾಸ್) ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿಯೊಂದೇ ಅಭಿವೃದ್ದಿಗಾಗಿ ಕಟಿಬದ್ಧವಾಗಿರುವ ಏಕೈಕ ಪಕ್ಷವಾಗಿದೆ ಎಂದು ಹೇಳಿದರು.
ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರು ತಮ್ಮ ಅತ್ಯಲ್ಪ ಅವಧಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿದಂತೆ ಇಡೀ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಿದ್ದರು. ಇವರ ಅವಧಿಯಲ್ಲಿ ಸಾಕಷ್ಟು ಜನೋಪಯೋಗಿ ಕಾರ್ಯಗಳು ನಡೆದಿವೆ. ರೈಲ್ವೆ ಸಚಿವರಾಗಿ ಕರ್ನಾಟಕಕ್ಕೆ ಮಹತ್ತರ ಕೊಡುಗೆ ನೀಡಿದ್ದರು. ಅದರಲ್ಲೂ ಬೆಳಗಾವಿಯಿಂದ ನೇರವಾಗಿ ಬೆಂಗಳೂರಿಗೆ ತಲುಪಲು ಪ್ರಯಾಣ ಕರಿಗಾಗಿ ಹೊಸ ರೈಲ್ವೆ ಪ್ರಾರಂಭಿಸಿದರು. ಈಗಲೂ ಇದಕ್ಕೆ ಸುರೇಶ ಅಂಗಡಿ ರೈಲು ಎಂದೇ ಪ್ರಯಾಣ ಕರು ಮಾತನಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ ಎಂದು ಹೇಳಿದರು.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಕೇಂದ್ರದಿಂದ ನೆರವು ತಂದಿರುವ ಖ್ಯಾತಿ ಅಂಗಡಿ ಅವರಿಗೆ ಸಲ್ಲುತ್ತದೆ. ಇನ್ನೂ ಹಲವಾರು ಪ್ರಗತಿಪರ ಕನಸುಗಳನ್ನು ಕಟ್ಟಿಕೊಂಡು ಜನರ ಸೇವೆ ಮಾಡಬೇಕೆನ್ನುವ ಹಂಬಲ ಇರುವಾಗಲೇ ವಿಧಿಯಾಟದ ಪರಿಣಾಮ ಕೋವಿಡ್ಗೆ ತುತ್ತಾಗಿ ಮರಣ ಹೊಂದಿದರು. ಬಿಜೆಪಿ ಕೇಂದ್ರ ವರಿಷ್ಠರು ದಿ. ಅಂಗಡಿ ಅವರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅವರ ಪತ್ನಿಗೆ ಅವಕಾಶ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ನೋಡಿ ಬಿಜೆಪಿಗೆ ಅಮೂಲ್ಯ ಮತ ನೀಡುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸಗೌಡ ಪಾಟೀಲ, ಸಿದ್ದಪ್ಪ ಹಂಜಿ, ಮಹಾದೇವಪ್ಪ ಪತ್ತಾರ, ನ್ಯಾಯವಾದಿ ಎಲ್.ಎನ್.ಬೂದಿಗೊಪ್ಪ, ಜಿ.ಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ತಾ.ಪಂ ಮಾಜಿ ಸದಸ್ಯರಾದ ನಾಗಪ್ಪ ಮಂಗಿ, ಭೀಮಪ್ಪ ಗೌಡಪ್ಪನವರ, ಬಸವರಾಜ ಕಾಪಸಿ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ, ಮೆಳವಂಕಿ ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಶಿಂತ್ರಿ, ಅಲ್ಲಪ್ಪ ಕಂಕಣವಾಡಿ, ಬಸಪ್ಪ ಕಪರಟ್ಟಿ, ಶಿವಲಿಂಗ ಬಳಿಗಾರ, ಮುತ್ತೆಪ್ಪ ತಳವಾರ, ಮುತ್ತೆಪ್ಪ ಮನ್ನಾಪೂರ, ರಾಮಣ್ಣ ಕಾಪಸಿ, ಈರಪ್ಪ ಬೀರನಗಡ್ಡಿ, ಬಸು ನಾಯಿಕ, ಅಡಿವೆಪ್ಪ ಕಂಕಾಳಿ ಬಿಜೆಪಿ ಪದಾಧಿಕಾರಿಗಳು, ಮುಖಂಡರುಗಳು ಉಪಸ್ಥಿತರಿದ್ದರು.
Check Also
ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ
Spread the love ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು …