Breaking News

ಸಮಾಜದ ಚಿಂತೆ ಮಾಡುವರರಿಂದ ಸಮಾಜ ಸುದಾರಣೆಯಾಗುತ್ತದೆ : ಅಶೋಕ ಲಗಮಪ್ಪಗೋಳ

Spread the love

ಗೋಕಾಕ : ತಮ್ಮ‌ಕುಟುಂಬವನ್ನು ತ್ಯಜಿಸಿ ತನ್ನ ಸಮಾಜಕ್ಕೆ ಎಲ್ಲ ಕ್ಷೇತ್ರದಲ್ಲು ಸೌಲಬ್ಯ ಸಿಗಬೇಕೆಂದು ಹಗಲಿರುಳು ಶಿಕ್ಷಣ ಕಲಿತು ಹೊರಾಡಿ ಕೇವಲ ತಮ್ಮ ಸಮಾಜಕ್ಕೆ ಅಷ್ಟೆ ಅಲ್ಲದೆ ಅರ್ಥಿಕವಾಗಿ ಕುಂಠಿತವಾಗಿರುವ ಎಲ್ಲ ಸಮಾಜದವರೆಗೂ ಸೌಲಬ್ಯ ಸಿಗುವ ಹಾಗೆ ಮಾಡಿದ್ದಾರೆಂದು ಗೋಕಾಕದಲ್ಲಿ ಬಹುಜನ ಹಿತ ರಕ್ಷಣಾ ವೇದಿಕೆ ಕರ್ನಾಟಕ ವತಿಯಿಂದ ಬಾಬಾ ಸಾಹೇಬ ಅಂಬೇಡ್ಕರ್ ಇವರ ಮಹಾ ಪರಿನಿರ್ವಾಣ ದಿನ ಆಚರಣೆ ಮಾಡಿ ಮಾತನಾಡಿದ ಸಂಸ್ಥಾಪಕ ಅಶೋಕ ಲಗಮಪ್ಪಗೋಳ ಇವರು
ನಾವು ಕೂಡ ಸಮಾಜ ಕಟ್ಟ ಕಡೆಯ ಮನುಷ್ಯನಿಗೆ ಸೌಲಬ್ಬ ಸಿಗುವ ಹಾಗೆ ಮಾಡಬೇಕಾಗಿದೆ.

ದೇವರನ್ನು ನಂಬಬೇಕು ಆದರೆ ಮೂಡನಂಬಿಕೆ ಅಲ್ಲ, ಅದಕ್ಕಾಗಿ ಬಹುಜನ ಹಿತ ರಕ್ಷಣಾ ವೇದಿಕೆ ಕರ್ನಾಟಕ ವತಿಯಿಂದ ಪ್ರತಿ ಗ್ರಾಮದಲ್ಲೂ ಸಂಘಟನೆಗಳನ್ನು ಮಾಡಲಾಗುತ್ತದೆ ಎಂದರು, ನಮ್ಮ ಸಂಘಟನೆಯಲ್ಲಿ ಪ್ರಚಾರ ಪ್ರಿಯರಿಗೆ ಅವಕಾಶವಿಲ್ಲ, ಸಮಾಜ ಸಲುವಾಗಿ ಸೇವೆ ಸಲ್ಲಿಸುವವರಿಗೆ ಇಲ್ಲಿ ಅವಕಾಶವಿದೆ ಹಾಗೂ ಇದರಿಂದ ಮಹಿಳೆಯರಲ್ಲೂ ಜಾಗೃತಿ ಮೂಡಿಸುವಂತ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಬಾಬಾಸಾಹೇಬ ಅಂಬೇಡ್ಕರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಎಸ್,ಎಮ್, ಪಿರಜಾದೆಯವರು ಜೀವಂತ ಇದ್ದರೂ ಸಹ ಸತ್ತಂತೆ ,ಕೆಲವರು ಸತ್ತರು ಇದ್ದಂತೆ ಅಂತವರ ಪಾಲಿಗೆ ಬಾಬಾಸಾಹೇಬರು ಬರುತ್ತಾರೆ. ಯಾಕೆಂದರೆ ಕಷ್ಟ ಕಾಲದಲ್ಲೂ ಬೆಳೆದು ಬಂದವರು, ಅದಕ್ಕಾಗಿ ಅವರ ದಿನವನ್ನು ಬದುಕಿದ್ದಾರೆಂದು ಇವತ್ತು ಆಚರಿಸುತಿದ್ದೇವೆ,

ಯಾವುದೆ ವ್ಯಕ್ತಿ ದೊಡ್ಡ ಹಂತಕ್ಕೆ ಹೊದಾಗ ಅವರು ಬಂದ ದಾರಿಯನ್ನು ಮರೆಯುತ್ತಾರೆ, ಆದರೆ ಬಹುಜನ ಹಿತರಕ್ಷಣಾ ವೇದಿಕೆ ಕರ್ನಾಟಕ ಎಲ್ಲರಿಗೂ ಸಹಕಾರ, ಶಿಕ್ಷಣದ ಜೊತೆಯಲ್ಲಿ ಸೌಲಬ್ಯ ಒದಗಿಸುವಲ್ಲಿ ಹೊರಾಟ ಮಾಡುತ್ತಲಿದೆ. ಕೇವಲ ಒಂದೆ ಜಾತಿಗೆ ಸಿಮಿತವಾಗದೆ ಎಲ್ಲರಿಗೂ ನೆಲೆ ನಿಡಲು ಬಹುಜನ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕರಾದ ಅಶೋಕ ಲಗಮಪ್ಪಗೋಳ ಅವರಿಗೆ ಎಲ್ಲರೂ ಬೆನ್ನೆಲುಬಾಗಿ ನಿಂತಿದ್ದಾರೆಂದರು.

ಅದಲ್ಲದೆ ಈ ವೇದಿಕೆ ಕೆವಲ ಒಬ್ಬ ವ್ಯಕ್ತಿಗೆ ಸಂಬಂದವಿಲ್ಲ, ಇದು ಎಲ್ಲರಿಗೂ ಇರುವುದರಿಂದ ತಮ್ಮಲ್ಲಿನ ಕುಂದು ಕೊರತೆಗಳನ್ನು ನಿಬಾಯಿಸಲು ಇದೆ ಎಂದರು.ಈ ಸಮಯದಲ್ಲಿ ಸಮಾಜ ಚಿಂತಕರಾದ,ಬಾಳೇಶ ಬನಹಟ್ಟಿ. ತಾಲೂಕಾ ಅದ್ಯಕ್ಷರಾದ ಪರಶುರಾಮ ಗೊಲ್ಲರ,ನ್ಯಾವಾದಿಗಳಾದ ಶ್ರೀನಿವಾಸ ಐಹೋಳೆ . ಶಿವಾನಂದ ಜೊಗನ್ನವರ ಮಹಿಳಾ ಘಟಕದ ತಾಲೂಕಾ ಅದ್ಯಕ್ಷರಾದ ವಿದ್ಯಾ ರೆಡ್ಡಿ, ಕು: ಜೆ,ಎಸ್,ಹಂದಿಗುಂದ್ ಹಾಗೂ ಇನ್ನುಳಿದ ಕಾರ್ಯಕರ್ತರು ಉಸ್ಥಿರಿದ್ದರು.


Spread the love

About Fast9 News

Check Also

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

Spread the love  ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು …

Leave a Reply

Your email address will not be published. Required fields are marked *