Breaking News

ಪುಟ್ಟ ಮಗುವಿನ ಜೊತೆ ತುದಿಯಲ್ಲಿ ನಿಂತು ಗೋಕಾಕ ಪಾಲ್ಸ್ ವೀಕ್ಷಣೆ, ಪ್ರವಾಸಿಗರ ಹುಚ್ಚಾಟ,,, ಘಟಪ್ರಭಾ ಪೊಲೀಸರು ಸೈಲೆಂಟ್ ,

Spread the love

ಪುಟ್ಟ ಮಗುವಿನ ಜೊತೆ ತುದಿಯಲ್ಲಿ ನಿಂತು ಗೋಕಾಕ ಪಾಲ್ಸ್ ವೀಕ್ಷಣೆ, ಪ್ರವಾಸಿಗರ ಹುಚ್ಚಾಟ,,, ಘಟಪ್ರಭಾ ಪೊಲೀಸರು ಸೈಲೆಂಟ್ ,

ಗೋಕಾಕ : ಕರ್ನಾಟಕದ ನಯಾಗರ ಪಾಲ್ಸ್ ಎಂದೇ ಕ್ಯಾತಿಯಾಯಾಗಿರುವ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗೋಕಾಕ ಪಾಲ್ಸಿನ ಘಟಪ್ರಭಾ ಪೊಲೀಸ್ ಠಾಣೆಯ ವ್ಯಾಪ್ತಿಯ ನವಿಲಮಾಳದಲ್ಲಿ ಪ್ರವಾಸಿಗರು ತಮ್ಮ ಹುಚ್ಚಾಟ ತೋರುತ್ತಿದ್ದಾರೆ.

ಗೋಕಾಕ ಫಾಲ್ಸನ ನವಿಲಾಮಾಳನ
ಫಾಲ್ಸಿನ ತುತ್ತ ತುದಿಗೆ ಚಿಕ್ಕ ಮಕ್ಕಳನ್ನ ಲೆಕ್ಕಿಸದೇ ಪುಟ್ಟ ಪುಟ್ಟ ಮಕ್ಕಳ ಜೊತೆಗೆ ಪಾಲ್ಸ್ ತುತ್ತ ತುದಿಗೆ ನಿಂತು ಪ್ರವಾಸಿಗರು ಸೆಲ್ಫಿಗೆ ಪೋಜ ಕೊಡುತ್ತಿದ್ದಾರೆ.

ಒಂದು ಹೆಜ್ಜೆ ಮುಂದಿಟ್ಟರೆ ಸಾಕು ಅಥವಾ ಜೋರಾಗಿ ಗಾಳಿ ಬೀಸಿದರೆ ಸಾಕು ಸಾವು ಖಚಿತ ಅಷ್ಟೇ ಅಲ್ಲ ನೇರವಾಗಿ ಹೋಗೋದೇ ಯಮನ ಹತ್ತಿರ.

ಇನ್ನು ನವಿಲಾಮಾಳದಲ್ಲಿ ಪ್ರವಾಸಿಗರು ಹುಚ್ಚಾಟ ಮರೆಯುತ್ತಿದ್ದರು ಸಹ ಇಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯೂ ಕೂಡ ಇಲ್ಲ,ಪ್ರವಾಸಿಗರು ಹುಚ್ಚಾಟ ಮೆರೆದರೂ ಘಟಪ್ರಭಾ ಪೊಲೀಸ್ ರು‌ ಕಣ್ಣು ಮುಚ್ಚಿ ಕುಳಿತಿದ್ದಾರೆ.

ಗೋಕಾಕ ಪೊಲೀಸ್ ಠಾಣೆ ಹಾಗೂ ಘಟಪ್ರಭಾ ಪೊಲೀಸ್ ಠಾಣೆ ಸರಹದ್ದಿನ ನಡುವೆ ಗೋಕಾಕ ಫಾಲ್ಸ್ ಇದ್ದು ಗೋಕಾಕ ಫಾಲ್ಸ್ ನಲ್ಲಿ ಗೋಕಾಕ ನಗರ ಪೊಲೀಸರು ಬ್ಯಾರಿಕೇಡ್ ಕೆಡ ಹ್ಯಾಕಿ ನದಿಯ ಹತ್ತಿರ ಪ್ರವಾಸಿಗರು ಹೋಗದಂತೆ ಎಚ್ಚರ ವಹಿಸಿದ್ದಾರೆ.ಆದರೆ ಆಕಡೆ ಇರುವ ಘಟಪ್ರಭಾ ಪೊಲೀಸರು ಮಾತ್ರ ನವಿಲಾಮಾಳಗೆ ಬಾರದೆ ನಿರ್ಲಕ್ಷ್ಯ ತೋರುತ್ತಿರುವದರಿಂದ ಇಲ್ಲಿ ಪ್ರವಾಸಿಗರು ತಮ್ಮ ಹುಚ್ಚಾಟ ಮೆರೆಯುತ್ತಿದ್ದಾರೆ.

ಇನ್ನಾದರೂ ಅವಘಡ ಸಂಭವಿಸುವ ಮುನ್ನ ಘಟಪ್ರಭಾ ಪೊಲೀಸರು ಎಚ್ಚೆತ್ತುಕೊಳ್ಳುತ್ತರಾ ಎಂದು ಕಾದು ನೋಡ ಬೇಕಾಗಿದೆ..


Spread the love

About Fast9 News

Check Also

ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಕ್ರಮ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಯಾದವಾಡದಲ್ಲಿ ಪಿ.ಎಚ್.ಸಿ ನೂತನ ಕಟ್ಟಡದ ಉದ್ಘಾಟನೆ.* *ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಕ್ರಮ- ಶಾಸಕ …

Leave a Reply

Your email address will not be published. Required fields are marked *