ಗೊಕಾಕ ಪೋಲಿಸರಿಂದ ಪಂಪಸೇಟ್ ಕಳ್ಳರ ಬಂದನ,ಕೃತ್ಯಕ್ಕೆ ಬಳಸಿದ ವಾಹನಗಳು ವಶ
ಗೋಕಾಕ :ಗೋಕಾಕ ತಾಲೂಕಿನ ದುಂಡಾನಟ್ಟಿ ಗ್ರಾಮದಲ್ಲಿ ಹಳ್ಳದಿಂದ ಹೊಲಕ್ಕೆ ನೀರು ಹಾಯಿಸಲು ದಡದಲ್ಲಿ ರೈತರು ಅಳವಡಿಸಿದ್ದ ಪಂಪ ಸೆಟಗಳನ್ನು ಕದಿಯುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಗೋಕಾಕ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ.
ಗೋಕಾಕ ತಾಲೂಕಿನ ದುಂಡಾನಟ್ಟಿ ಗ್ರಾಮದ ಹಳ್ಳದ ದಡದಲ್ಲಿರುವ ರೈತರ ಜಮೀನಿನಲ್ಲಿರುವ ರೈತರ 3 ಪಂಪಸೆಟ್‌ಗಳನ್ನು ಕಳ್ಳತನ ಮಾಡಿದ್ದರು. ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಿ.30/11/2024 ರಂದು ಮಧ್ಯಾನ್ಹ ಪ್ರಕರಣ ದಾಖಲಾಗಿತ್ತು.
ಡಿ,ಎಸ್,ಪಿ ಯವರ ನಿರ್ದೇಶನದಂತೆ ತನಿಖೆ ಬೆನ್ನು ಹತ್ತಿದ ಗೋಕಾಕ ಸಿಪಿಐ ಆರ್,ಬಿ, ಸುರೇಶ ಬಾಬು ಪಿಎಸ್‌ಐಯಾದ ಕಿರಣ ಮೊಹಿತೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಿ,ವಿ,ನೇರ್ಲಿ,ಜಗದೀಶ ಗುಡ್ಲಿ,ಮಾರುತಿ ಪಡದಲ್ಲಿ,ದುಂಡೇಶ ಅಂತರಗಟ್ಟಿ,ಡಿ,ಜಿ,ಕೊಣ್ಣೂರ,ಎಚ್,ಡಿ,ಗೌಡಿ,ನಾಗರಾಜ ದುರದುಂಡಿ, ಹಾಗೂ ಬೆಳಗಾವಿ ಟೇಕ್ನಿಕಲ್ ಸೆಲನ ಸಚೀನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಅವರು ಕಳ್ಳರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 86500 ರೂ .ಮೌಲ್ಯದ 3 ಪಂಪಸೆಟ್‌ಗಳನ್ನು ಹಾಗೂ ಅಪಾರಧಕ್ಕೆ ಬಳಸಿದ್ದ 4 ಲಕ್ಷ ರೂ.ಮೌಲ್ಯದ ಗೂಡ್ಸ ಗಾಡಿ ಮತ್ತು 80 ಸಾವಿರ ರೂ ಕಿಮ್ಮತ್ತಿನ 2 ಮೊಟಾರ ಸೈಕಲ್ ಗಳನ್ನು ಜಪ್ತಿ ಮಾಡಿ ಸದರಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನು ಇವರ ಕಾರ್ಯವನ್ನು ಬೆಳಗಾವಿ ಎಸ್,ಪಿ,ಡಾ.ಬೀಮಾಶಂಕರ ಗುಳೇದ ಇವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.