ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡುವುದೆ ಅಂತರಜಾತಿಯ ಪ್ರೋತ್ಸಾಹ ಸಂಘದ ಉದ್ದೇಶ: ವಿಜಯಸಿದ್ದೇಶ್ವರ ಸ್ವಾಮಿಜಿ.
ಗೋಕಾಕ: ಗೋಕಾಕದಲ್ಲಿರುವ ಮಹಾಂತಲಿಂಗೇಶ್ವರ ಪ್ರೀಟಿಂಗ ಪ್ರೇಸನಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಮತ್ತು ಎಲ್ಲ ಜನರಿಗೂ ದಾರ್ಮಿಕ,ಆದ್ಯಾತ್ಮಿಕ ಸಮಾನತೆಯ ಸಲುವಾಗಿ ವಿಶ್ವ ಹಿಂದೂ ಅಂತರಜಾತಿ ವಿವಾಹ ಪ್ರೋತ್ಸಾಹ ಸಂಘದಿಂದ ಕರೆದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾದಕ್ಷರಾದ ಡಾ: ಆರೂಡಭಾರತಿ ಸ್ವಾಮಿಜಿಗಳು ಮಾತನಾಡಿ ಲವ್ ಜಿಹಾದ ಹೆಸರಿನಲ್ಲಿ ಮುಸ್ಲಿಮರು ಹಿಂದೂ ಕನ್ಯೆ,ವರಗಳನ್ನು ಮತಾಂದರ ಮಾಡಿ ಅನ್ಯಾಮಾಡಿತಿದ್ದಾರೆ, ಅದನ್ನು ತಡೆಯುವದಕ್ಕಾಗಿ ನಾವು ಕೂಡ ಲವ್ ಜಿಹಾದ ಮಾಡಿ ಹಿಂದೂಗಳು ಮುಸ್ಲಿಂರನ್ನು ಮದುವೆಯಾಗಿ ಹಿಂದೂಗಳಿಗೆ ಮತಾಂತರ ಮಾಡುವುದು ಕೂಡ ನಮ್ಮ ಸಂಘದ ಉದ್ದೇಶ ಎಂದರು.
ಅದಲ್ಲದೆ ಮುಸ್ಲಿಂರಿಗೆ ಪ್ರತಿತಂತ್ರವಾಗಿ ನಾವು ಮಾಡುತಿದ್ದೇವೆ, ಹಿಂದೂಗಳು ಅಹಿಂಸೆ,ಸತ್ಯ,ತ್ಯಾಗದ ಆದರ್ಶ ಹೇಳುತ್ತದೆ .ಆದರೆ ಗಂಡಸ್ತನ ಕಳೆದುಕೊಳ್ಳಲು ಹೇಳುವುದಿಲ್ಲ,, ಮಿಸೆ ಎಲ್ಲಾ ಜಾತಿಯವರಿಗೂ ಮಿಸೆ ಬರುತ್ತದೆ, ನಮ್ಮನ್ನು ನಾವು ರಕ್ಷಣೆ ಮಾಡಲಿಕ್ಕೆ ಇದನ್ನು ಮಾಡಬೇಕಾಗಿದೆ ಅಂದರು.
ಸಂಘದ ಸಂಸ್ಥಾಪಕ ಅದ್ಯಕ್ಷರಾದ ಮನ್ನಿಕೇರಿಯ ಶ್ರೀ ವಿಜಯಸಿದ್ದೇಶ್ವರ ಸ್ವಾಮಿಜಿಗಳು ಮಾತನಾಡಿ ದೇವರ ಹೆಸರಿನಲ್ಲಿ ಪ್ರಾಣಿಬಲಿ ಮೊದಲಾದವುಗಳನ್ನು,ನಡೆಯದಂತೆ,ಅಂತರಜಾತಿಯ ವಿವಾಹವಾದ ಹಿಂದೂ ದರ್ಮಕ್ಕೆ ಸೆರ್ಪಡೆಗೊಂಡವರಿಗೆ ಆರ್ಥಿಕ ಬಡಕುಟುಂಬಳಿಗೆ ನೆರವಾಗುವುದು ನಮ್ಮ ಉದ್ದೇಶ ಹಾಗೂ ಯಾವುದೆ ತರಹದ ಬಾಲ್ಯವಿಹಗಳಿಗೆ ಅನುಮತಿ ನಿಡೊದಿಲ್ಲ, ಜಗತ್ತು ಇವತ್ತು ಎಷ್ಟೆ ಮುಂದುವರೆದರೂ ಸಹ ಇನ್ನೂ ಕೂಡ ನಾನು ಮೇಲೂ ಅನ್ನು ಮೇಲು, ಕೀಳು ಬಾವನೆ ಹೊಗಿಲ್ಲ, ಅದು ಹೊಗಲಾಡಿಸಲು ಇವತ್ತು ನಾವು ಅಂತರಜಾತಿಯ ವಿವಾಹಕ್ಕೆ ಪ್ರೊತ್ಸಾಹ ನೀಡುತಿದ್ದೇವೆ,ಅದರೆ ಅದು ತಿಳುವಳಿಕೆ ನೀಡುವ ಮೂಲಕ ಎಂದರು, ಅಂತರಜಾತಿ ವಿವಾಹ ಮಾಡಿಕೊಳ್ಳವವರು ಮೊದಲು ಕಾನೂನಿನ ಪ್ರಕಾರ ನೊಂದಣಿ ಮಾಡಿಸಿಕೊಳ್ಳಬೇಕು, ಇವತ್ತು ನಾವು ಕೇವಲ ನಾಲ್ಕು ಜನ ಇದ್ದೇವೆ, ಮುಂದಿನ ದಿನಮಾನಗಳಲ್ಲಿ ಎಲ್ಲ ಮಠಾದೀಶರು ನಮ್ಮ ಜೊತೆಯಲ್ಲಿ ಇರುತ್ತಾರೆಂದರು, ಈ ಸಂದರ್ಭದಲ್ಲಿ ಜಗದಾತ್ಮಾನಂದ ಸ್ವಾಮಿಗಳು, ಶ್ರೀ ಭೀಮಾನಂದ ಸ್ವಾಮಿಗಳು,ಕಾರ್ಯದರ್ಶಿಗಳಾದ ಕಲ್ಲಯ್ಯ ಹೀರೆಮಠ,ಖಜಾಂಚಿ ಬ್ರಹ್ಮಾನಂದ ಪತ್ತಾರ, ಸದಸ್ಯರಾದ ಶಶಿಕಾಂತ, ತಳವಾರ, ಶಂಕರ ರಾಜಾಪುರೆ,ಗಣ್ಯರಾದ ಬಿ,ಎಚ್,ಗೌಡರ, ನ್ಯಾಯವಾದಿಗಳಾದ ವಾಯ್,ಕೆ,ಕೌಜಲಗಿ ಇನ್ನೂಳಿದ ಸದಸ್ಯರು ಉಪಸ್ಥಿತರಿದ್ದರು.
Fast9 Latest Kannada News