Breaking News

ನಮಗಾಗಿ ಹೋರಾಟ ಮಾಡಿದವರನ್ನು ನಾವು ಇವತ್ತು ಪೂಜಿಸುತ್ತಿಲ್ಲ: ಸತೀಶ ಜಾರಕಿಹೋಳಿ

Spread the love

ನಮಗಾಗಿ ಹೋರಾಟ ಮಾಡಿದವರನ್ನು ನಾವು ಇವತ್ತು ಪೂಜಿಸುತ್ತಿಲ್ಲ: ಸತೀಶ ಜಾರಕಿಹೋಳಿ

ಗೋಕಾಕದಲ್ಲಿನ ವಾಲ್ಮಿಕಿ ಕ್ರಿಡಾಂಗಣದಲ್ಲಿ
ತಾಯಿ ಸಾವಿತ್ರಿಬಾಯಿ ಪುಲೆ ಜಯಂತಿ ನಿಮಿತ್ಯವಾಗಿ ರಾಜ್ಯಮಟ್ಟದ ಪ್ರಬಂದ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರತಿಭಾ ಪ್ರಶಸ್ತಿ ಸಮಾರಂಬವನ್ನು ಕೆ,ಪಿ,ಸಿ,ಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿವರ ನೇತೃತ್ವದ ಮಾನವ ಬಂದುತ್ವ ವೇದಿಕೆಯು ಎರ್ಪಡಿಸಲಾಗಿತ್ತು

ಈ ಸಮಾರಂಭವನ್ನು‌ ಉದ್ದೇಶಿಸಿ ಮಾತನಾಡಿದ ಸತೀಶ ಜಾರಕಿಹೋಳಿಯವರು
ನಮಗೊಸ್ಕರ ಯಾರು ಹೋರಾಟ ಮಾಡಿ, ಒಳ್ಳೆಯ ವಿಚಾರಗಳನ್ನು ನೀಡಿದ್ದಾರೋ ಅಂತವರನ್ನು ನಾವು ಪೂಜೆ ಮಾಡದೆ ಯಾರು ಹೊರಾಡ ಮಾಡಿಲ್ಲವೋ ಅಂತವರನ್ನು ಇವತ್ತು ನಾವುಗಳು ಪೂಜಿಸುತಿದ್ದೇವೆ,

ಅದಲ್ಲದೆ ಸ್ವಾತಂತ್ರ್ಯದ ಸಮಯದಲ್ಲಿ ಜನರನ್ನು ಸೆರಿಸುವ ಸಲುವಾಗಿ ಬಾಲಗಂಗಾಧರ ತಿಲಕರವರು ಗಣಪತಿ ಸೇರಿದ್ದರು ನಾವು ಇಂದು ಹೆಲಿಕಾಪ್ಟರ್ ತಂದು ಜನರನ್ನು ಕೂಡಿಸಿದ್ದೇವೆಂದರು.

ಮಹಾನ ವ್ಯಕ್ತಿಗಳ ವಿಚಾರದಾರೆಯನ್ನು ಜನರಿಗೆ ತಿಳಿಸುಗೊಸ್ಕರ ಜಯಂತಿ ಮಾಡುವ ಮೂಲಕ ತಿಳಿಸುತಿದ್ದೇವೆ, ಹಾಗೂ ಮಹಾನ ವ್ಯಕ್ತಿಗಳು ಹೊರಾಟ ಮಾಡಿದ್ದೆ ಬೇರೆ ಆದರೆ ಇವತ್ತು ತೋರಿಸುವುದೆ ಬೇರೆಯಾಗಿದೆ ಎಂದು ವ್ಯಂಗವಾಡಿದರು.

ಅದಕ್ಕಾಗಿ ಅಂತಹ ಮಹಾನ ವ್ಯಕ್ತಿಗಳ ಪರಿಚಯ, ಅವರ ಮಾಡಿದ ಹೊರಾಟ, ವಿಚಾರಗಳನ್ನು ಪರಿಚಯಿಸುವ ಕೆಲಸಗಳನ್ನು ಮಾನವ ಬಂದುತ್ವ ವೇದಿಕೆ ಮಾಡುತ್ತಾ ಬಂದಿದೆ ಮುಂದೇಯೂ ಮಾಡುತ್ತದೆ, ಅದಕ್ಕಾಗಿ ತಾವೆಲ್ಲರೂ ಕಾರ್ಯಪ್ರವರ್ತರಾಗಬೇಕೆಂದು ಸತೀಶ ಜಾರಕಿಹೋಳಿಯವರು ಕರೆ ನೀಡಿದರು.

ಇನ್ನು ಪ್ರಭಂದದಲ್ಲಿ ವಿಜೇತರಾದವರಿಗೆ ವಿಶೇಷವಾಗಿ ಹೆಲಿಕಾಪ್ಟರ ಮೂಲಕ ಆಕಾಶದಲ್ಲಿ ಹಾರಾಡುವ ಅವಕಾಶ ಮಾಡಿಕೊಟ್ಟು ಎಲ್ಲ ವಿಜೇತರಿಗೆ ತಲಾ 5 ಸಾವಿರ ರೂ, ನಗದು ಹಣ ನೀಡಿ 17 ಜನ ಮಹಿಳಾ ಸತೀಶ ಜಾರಕಿಹೋಳಿ ಪುತ್ರಿ ಪ್ರಿಯಾಂಕಾ ಇವರು ಶಿಕ್ಷಕರಿಗೆ ಸತ್ಕರಿಸಿ ಸನ್ಮಾನಿಸಿದರು.ಹಾಗೂ ಪುತ್ರ ರಾಹುಲ ಜಾರಕಿಹೋಳಿಯವರು ಉಪಸ್ಥಿತರಿದ್ದರು.


Spread the love

About fast9admin

Check Also

ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗಬೇಕೆಂಬುದು ಶಾಸಕ ರಮೇಶ ಜಾರಕಿಹೋಳಿಯವರ ಕನಸು : ಜಿ,ಬಿ, ಬಳಿಗಾರ

Spread the loveವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗಬೇಕೆಂಬುದು ಶಾಸಕ ರಮೇಶ ಜಾರಕಿಹೋಳಿಯವರ ಕನಸು : ಜಿ,ಬಿ, ಬಳಿಗಾರ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳು …

Leave a Reply

Your email address will not be published. Required fields are marked *