Breaking News

ಪರೀಕ್ಷೆ ಬರೆದ ಬಾವಿ ಶಿಕ್ಷಕರಲ್ಲಿ ಐವರಲ್ಲಿ ಒಬ್ಬರಿಗೆ ಸರ್ಕಾರಿ ಜಾಬ್ ಪಿಕ್ಸ್,,

Spread the love

ಪರೀಕ್ಷೆ ಬರೆದ ಬಾವಿ ಶಿಕ್ಷಕರಲ್ಲಿ ಐವರಲ್ಲಿ ಒಬ್ಬರಿಗೆ ಸರ್ಕಾರಿ ಜಾಬ್ ಪಿಕ್ಸ್,,

ಬೆಂಗಳೂರು,ಮೇ22: ಶಿಕ್ಷಕರಾಗಬೇಕು ಅನ್ನೋ ಹಂಬಲ, ಛಲವನ್ನು ಹೊಂದಿರುವ ಅಭ್ಯರ್ಥಿಗಳು ಈಗಾಗಲೇ ಸಂಪೂರ್ಣ ತಯಾರಿಯನ್ನು ಮುಗಿಸಿ ಶಿಕ್ಷಕರ ಹುದ್ದೆ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಈ ವೇಳೆ ಭಾವಿ ಶಿಕ್ಷಕರಿಗೊಂದು ಗುಡ್ ನ್ಯೂಸ್ ಸಿಕ್ಕಿದೆ.

ನೀವು ಶಿಕ್ಷಕರಾಗಬೇಕಾದರೇ ನಾಲ್ವರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಗೆದ್ದರೇ ಸಾಕು ಸರ್ಕಾರಿ ಶಿಕ್ಷಕ ಹುದ್ದೆ ಖಾತ್ರಿಯಾಗಲಿದೆ.

ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಶನಿವಾರ ಮತ್ತು ಮೇ22 ಭಾನುವಾರ ನಡೆಯುತ್ತಿದೆ.ಮೊದಲ ದಿನದ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ.

ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 106083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಈ ಪೈಕಿ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿದ್ದವರು 31967 ಅಭ್ಯರ್ಥಿಗಳು. ಶಿಕ್ಷಕ ಹುದ್ದೆಗೆ ಅರ್ಜಿಗಳ ಪರಿಗಣನೆ ಆಗಿರುವುದು 74116 ಮಂದಿ ಅಭ್ಯರ್ಥಿಗಳಾದಂತಾಯ್ತು. ಮೇ 21 ರಂದು ನಡೆದ ಪರೀಕ್ಷೆಗೆ ಹಾಜರಾದವರ ಸಂಖ್ಯೆ 69159 ಅಭ್ಯರ್ಥಿಗಳು.ಪರೀಕ್ಷೆಗೆ ಗೈರು ಹಾಜರಾದವರು 4957 ಅಭ್ಯರ್ಥಿಗಳು ಅಂದರೆ 93% ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ 7% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.

*ಐವರು ಅಭ್ಯರ್ಥಿಗಳಲ್ಲಿ ಒಬ್ಬರ ಆಯ್ಕೆ ಖಚಿತ*

ಭಾವಿ ಶಿಕ್ಷಕರು ಸ್ಪರ್ಥಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗಲು 69159 ಅಭ್ಯರ್ಥಿಗಳ ಜೊತೆ ನೀವು ಪೈಪೋಟಿ ನಡೆಸಬೇಕಿದೆ. ಅಂದರೆ ಐವರಲ್ಲಿ ಒಬ್ಬರಗಾಗಿ ಆಯ್ಕೆಯಾಗಬೇಕೆಂದರೆ 75000 ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆ ಬರೆದಿರುವುದು 69159 ಅಭ್ಯರ್ಥಿಗಳಾದ ಕಾರಣ ನಿಮಗೆ ಸ್ಪರ್ಧೆಯ ರೇಸ್ ನಲ್ಲಿ ಐದು ಜನಕ್ಕಿಂತ ಕಡಿಮೆಯಲ್ಲಿ ಒಬ್ಬಯಾಗಿ ಆಯ್ಕೆಯಾಗಲಿದ್ದೀರ ನಿರ್ಲಕ್ಷ್ಯವಿಲ್ಲದೇ ಪರೀಕ್ಷೆಯನ್ನು ಅತ್ಯುತ್ತಮವಾಗಿ ಬರೆದವರು ನಿಸ್ಸಂಶಯವಾಗಿ ಶಿಕ್ಷಕರಾಗಿ ಆಯ್ಕೆಯಾಗಬಹುದು.

*ಯಾವ ವೇಯ್ಟೇಜ್‌ನಲ್ಲಿ ಮೆರಿಟ್ ನಿರ್ಧಾರ*

6 ರಿಂದ 8 ನೇ ತರಗತಿಯ ಪದವೀಧರ ಶಿಕ್ಷಕರ ನೇಮಕಾತಿಗಾಗಿ ಆಯ್ಕೆ ಪ್ರಾಧಿಕಾರವು ವಿಷಯವಾರು ಮತ್ತು ಮಾಧ್ಯಮವಾರು ಪ್ರವರ್ಗವಾರು ಅಧಿಸೂಚನೆಯಂತೆ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ (TET), ಪದವಿ ಶಿಕ್ಷಣ (degree) ಮತ್ತು ಶಿಕ್ಷಕರರ ಶಿಕ್ಷಣ (B.ed) ಕೋರ್ಸ್ ಗಳಲ್ಲಿ ಪಡೆದಿರುವ ಶೇಕಡವಾರು ಅಂಕಗಳನ್ನು ಪರಿಗಣಿಸಿ ವೆಯ್ಟೇಜ್ (weightage) ಉಪಯೋಗಿಸಿ ಲೆಕ್ಕಹಾಗಿ divided percentage ಲೆಕ್ಕಹಾಕಿ ಅದರ ಆಧಾರದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.

4 ವರ್ಷದ ಕೋರ್ಸ್ ಮಾಡಿದವರ ಆಯ್ಕೆ ಮಾದರಿ ಹೇಗೆ?
ಶಿಕ್ಷಕರ ಕೋರ್ಸ್ ಎರಡು ವರ್ಷ ವ್ಯಾಸಂಗ ಮಾಡಿದ್ದಾರೇ ಅವರ ಆಯ್ಕೆಯ ಹೀಗೆ ಮಾಡುತ್ತಾರೆ.

*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%

*ಟಿಇಟಿಯಲ್ಲಿ ಪಡೆದ ಅಂಕ 20%

*ಪದವಿಯಲ್ಲಿ ಪಡೆದದ ಅಂಕ 20%

*ಶಿಕ್ಷಕರ ಕೋರ್ಸ್ ನಲ್ಲಿ ಪಡೆದ ಅಂಕ 10% ,

ಎಲ್ಲಾ ಶೇಕಡವಾರು ಅಂಕಗಳನ್ನು ಪರಿಗಣಿಸಿ 100% ಗೆ ಲೆಕ್ಕಹಾಕಿ ಆಯ್ಕೆ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಲಿದೆ.

ಇನ್ನು ವಿಶೇಷವಾಗಿ ನಾಲ್ಕು ವರ್ಷದ ಕೋರ್ಸ್ ಮಾಡಿರುವ ಅಭ್ಯರ್ಥಿಗಳು ಶಿಕ್ಷಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದರೇ ಅವರ ಆಯ್ಕೆ ಹೀಗೆ ನಿರ್ಧರಿಸುತ್ತಾರೆ.

*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%

*ಟಿಇಟಿಯಲ್ಲಿ ಪಡೆದ ಅಂಕ 20%

*ನಾಲ್ಕು ವರ್ಷದ ಶಿಕ್ಷಣ ಕೋರ್ಸ್ ಮಾಡಿದವರು 30%

ಹೀಗೆ ಅಭ್ಯರ್ಥಿಗಳ ಶೇಕಡಾವಾರು ಅಂಕಗಳನ್ನು ಲೆಕ್ಕಹಾಕಿ 100% ಆಗಿ ಪರಿಗಣಿಸಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.

ಟಿಇಟಿ( Teachers eligibility test) ನಲ್ಲೇ ಫಿಲ್ಟರ್

ರಾಜ್ಯದಲ್ಲಿ ಶಿಕ್ಷಕರ ಕೋರ್ಸ್‌ಗಳನ್ನು ಮಾಡುವ ಲಕ್ಷಾಂತರ ಅಭ್ಯರ್ಥಿಗಳಿದ್ದಾರೆ. ಆದರೆ ಶಿಕ್ಷಕರ ಹುದ್ದೆಗೆ ಗೈರು ಹಾಜರಾದವರು ಸೇರಿದಂತೆ 74000 ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಕೆಲವು ಅಭ್ಯರ್ಥಿಗಳು ಬೇರೆ-ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಅರ್ಜಿ ಹಾಕಿರುವುದರಿಂದ 1.06 ಲಕ್ಷ ಅರ್ಜಿಗಳು ಬಂದಿವೆ. ಇನ್ನುಳಿದ ಅಭ್ಯರ್ಥಿಳಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿರಲು ಟಿಇಟಿ (Teacher eligibility test) ನಲ್ಲಿ ಅನುತ್ತೀರ್ಣರಾಗಿರುವುದು ಕಾರಣವಾಗಿದೆ.

ಶಿಕ್ಷಕರ ಹುದ್ದೆ ನೇಮಕಾತಿ 2022ರ ಅಭ್ಯರ್ಥಿಗಳಿಗೆ ಇದೊಂದು ಚಿನ್ನದಂತ ಅವಕಾಶವಾಗಿದ್ದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಕೆ ಮೂಲಕ ಶೈಕ್ಷಣಿಕವಾಗಿ ಉತ್ತಮ ಅಂಕಗಳನ್ನು ಗಳಿಸಿದ್ದರೆ ಎಲ್ಲ ಶೇಕಡವಾರು ಕ್ರೋಢಿಕರಣದ ಮೂಲಕ ಆಯ್ಕೆ ಪಟ್ಟಿಯಲ್ಲಿ ಹೆಸರು ಬಂದು ಕರ್ನಾಟಕ ರಾಜ್ಯದಲ್ಲಿ ಭಾವಿ ಶಿಕ್ಷಕರಾಗುವ ಎಲ್ಲಾ ಅವಕಾಶಗಳಿವೆ.


Spread the love

About Fast9 News

Check Also

ಈ ಜಗತ್ತು ನಿಂತಿರುವುದೇ ದೇವರಿಂದ* *ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ* *ಈ ಜಗತ್ತು ನಿಂತಿರುವುದೇ …

Leave a Reply

Your email address will not be published. Required fields are marked *