ಸುಭಂ ಸೆಳಕೆಯನ್ನು ಬಂದಿಸಲು ದುಪದಾಳದಲ್ಲಿ ರಸ್ತೆ ತಡೆ
ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೆ ಗೌಡ್ರ ಬಣ) ದೂಪದಾಳ ಘಟಕದ ವತಿಯಿಂದ ಇವತ್ತು ದೂಪದಾಳ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿ ಬೆಳಗಾವಿಯಲ್ಲಿ ಹಳದಿ ಕೆಂಪು ಶಾಲು ಹಾಕಿಕೊಂಡವರನ್ನು ಹೊಡೆಯುತ್ತೇವೆಂದು ಉದ್ದಟತನ ಹೇಳಿಕೆ ನೀಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶುಭಂ ಸೆಳಕೆ ಎಂಬಾತನನ್ನು ಬೆಳಗಾವಿ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯವರು ತಕ್ಷಣ ಬಂದಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ರಸ್ತೆ ತಡೆ ನಡೆಸಿದರು.
ರಸ್ತೆ ತಡೆ ನಡೆಸಿದ ಪರಿಣಾಮದಿಂದ ವಾಹನ ಸವಾರರು ಕೆಲ ಕಾಲ ಪರದಾಡುವಂತಾಯಿತು.ಕಾರಣ ಕರ್ನಾಟಕದಲ್ಲಿಯೂ ಮರಾಠಿಗರು ವಾಸಮಾಡುತಿದ್ದಾರೆ,ನಮ್ಮವರಿಗೆ ನೀವು ತೊಂದರೆ ಕೊಟ್ಟರೆ ನಾವೇನು ಸುಮ್ಮನೆ ಕೂಡಲಿಕ್ಕೆ ಆಗುವುದಿಲ್ಲ,ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡಲೇ ಶುಭಂ ಸೆಳಕೆಯನ್ನು ಬಂದಿಸಿ ಅವನ ಮೇಲೆ ದೇಶದ್ರೊಹಿ ಪ್ರಕರಣ ದಾಖಲಿಸಬೇಕು ಇಲ್ಲದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿ ಹಳ್ಳಿಗಳಿಂದ ಬೆಳಗಾವಿಗೆ ಬಂದು ಮಹಾರಾಷ್ಟ್ರ ಏಕೀಕರಣ ಸಮಿತಿಯವರನ್ನು ಜೈಲಿಗೆ ಕಳಿಸುವ ತನಕ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಯಾಕೆಂದರೆ ಇಂತಹ ಹೇಳಿಕೆಗಳಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಆಗುತ್ತಲಿದೆ ಎಂದು ಆಗ್ರಹಿಸಿ ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ತಾಲ್ಲೂಕು ಅದ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ ಯುವ ಘಟಕದ ಅದ್ಯಕ್ಷ ಆಕಾಶ ಭಂಡಿ ದೂಪದಾಳ ಘಟಕದ ಅದ್ಯಕ್ಷ ರವಿ ನಾವಿ ಮಾನಿಂಗ ಸನದಿ ಅಮೀರ್ ಜಗದಾಳ ಗೋಪಾಲ ಮಲ್ಲಾಪುರ ಶಿಡ್ಲಪ್ಪಾ ತಳಗೇರಿ ಬಾಳು ದೇವರುಶಿ ರಮೇಶ್ ಶೆಬನ್ನವರ ಮೆಹಬೂಬ್ ಕೋತವಾಲ ವಸಂತ ಕೊಟಬಾಗಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.