ವಿದ್ಯಾಬ್ಯಾಸ ಕಲಿಸುವುದಾಗಿ ಹೇಳಿ ತನ್ನ ಅಣ್ಣನ ಮಗಳನ್ನು ಸಂಬಂದಿಕರ ಹುಡುಗನ ಜೊತೆ ಮಾಡುತಿದ್ದ ಬಾಲ್ಯ ವಿವಾಹವನ್ನು ವಿವಾಹ ಆಗುತಿದ್ದ ಬಾಲಕಿಯ ಅಣ್ಣ ಬಂದು ಆಗುತಿದ್ದ ಬಾಲ್ಯ ವಿವಾಹವನ್ನು ತಡೆದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದ ರಾಧಿಕಾ ಮಲ್ಲೇಶ ಮಗೆನ್ನವರ (16) ಎಂಬ ಬಾಲಕಿಯನ್ನು ಘಟಪ್ರಭಾದ ರಮೇಶ ಕೆಂಪಣ್ಣ ಮೊದಗಿ (24) ಇತನ ಜೊತೆ ಕೊಣ್ಣೂರಲ್ಲಿನ ರಾದಿಕಾಳ ಅತ್ತೆಯ ಮನೆಯಲ್ಲಿ ಮದುವೆ ಮಾಡಲು ಸಿದ್ದತೆ ನಡೆಸಿದಾಗ ಸುದ್ದಿ ತಿಳಿದ ಬಾಲಕಿ ಅಣ್ಣ ಆಗುತಿದ್ದ ಬಾಲ್ಯ ವಿವಾಹವನ್ನು ತಡೆದಿದ್ದಾನೆ,
ಈ ಸಂದರ್ಬದಲ್ಲಿ ಎಲ್ಲರೂ ಸಂಬಂದಿಕರಾಗಿದ್ದರಿಂದ ಕೆಲವು ಕಾಲ ಮಾತಿನ ಚಕಮಕಿ ನಡೆದು ಬಾಲಕಿ ಅಣ್ಣ,ಪೋಲಿಸರಿಗೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಪೋಲಿಸ ಸಿಬ್ಬಂದಿಗಳು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಪೊಲೀಸರು ಈ ಮದುವೆಯನ್ನು ನಿಲ್ಲಿಸಿದ್ದಾರೆ. ಇನ್ನು ಪೊಲೀಸರು ಬರುತ್ತಿದ್ದಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಹುಡುಗಿ ಮತ್ತು ಹುಡುಗನನ್ನು ಅತ್ತೆ-ಮಾವ ಬೇರೆ ಕಡೆ ರವಾನಿಸಿದ್ದಾರೆ.
ಈ ಸಂಬಂಧ ಹುಡುಗಿಯ ಅಣ್ಣ ಮಾಹಿತಿ ನೀಡಿದ್ದು.
ಒಟ್ಟಾರೆ ಹುಡುಗಿ ಮತ್ತು ಹುಡುಗನ ಊರು ಬೇರೆ ಬೇರೆ ಇರುವಾಗ ತಂದೆ-ತಾಯಿಗೂ ಗೊತ್ತಾಗದೆ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದು ಸದ್ಯ ತೀವ್ರ ಟೀಕೆಗೆ ಗುರಿಯಾಗಿದೆ. ಪುಣ್ಯಕ್ಕೆ ಅಣ್ಣ ಬಂದು ಮದುವೆ ನಿಲ್ಲಿಸಿದ್ದಾನೆ.
ಈಗ ಈ ಪ್ರಕರಣ ಪೊಲಿಸ ಠಾಣೆ ಮೆಟ್ಟಿಲೆರಿದ್ದು ಮುಂದೇನು ಆಗುತ್ತದೆ ಅಂತಾ ಕಾದು ನೋಡಬೇಕಾಗಿದೆ.