*ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಇವರ ಮಾರ್ಗದರ್ಶನದಲ್ಲಿ ವಿವಿದ ಕಾಮಗಾರಿಗೆ ಚಾಲನೆ*
ಗೋಕಾಕ ತಾಲೂಕಿನ ಕೊಣ್ಣೂರಿನ ವಾಲ್ಮೀಕಿ ವೃತ್ತದಲ್ಲಿ ನಡೆದ ವಿವಿದ ಕಾಮಗಾರಿಗಳ ಶಂಕು ಸ್ಥಾಪನೆಯ ಕಾರ್ಯಕ್ರಮದಲ್ಲಿ
ಸನ್ 2019-20 ಸಾಲಿನಲ್ಲಿ ಕೊಣ್ಣೂರ ಪುರಸಭೆಗೆ ಬಿಡುಗಡೆಯಾದ ಎಸ್,ಎಪ್,ಸಿ,ವಿಶೇಷ ಅನುದಾನ ರೂ,10 ಕೋಟಿಗಳಲ್ಲಿ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿನ ವಾರ್ಡಗಳಲ್ಲಿ 10 ಕೋಟಿಯ ವಿವಿದ ಕಾಮಗಾರಿಗಳನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ನಿರ್ದೇಶನದಂತೆ ಕಾರ್ಮಿಕ ದುರೀಣರಾದ ಶ್ರೀ ಅಂಬಿರಾವ ಪಾಟೀಲ ಇವರು ಗುದ್ದಲ್ಲಿ ಪೂಜೆ ನೆರವೆರಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನಿಡಿದರು.
ಈ ಸಂದರ್ಭದಲ್ಲಿ ಸ್ಥಳಿಯ ಮುಖ್ಯಾಧಿಕಾರಿಯಾದ ಶಿವಾನಂದ ಹೀರೆಮಠ ಮಾತನಾಡಿ ಸಾರ್ವಜನಿಕರಿಗೆ ಅನೂಕೂಲವಾಗುವಂತಾ ಯಾವುದೆ ಕಾಮಗಾರಿ ಇರಲಿ ತಕ್ಷಣ ಮಾಡುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ,ಸದಸ್ಯರಿಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿಯವರು ಹೇಳಿದ್ದನ್ನು ಇವತ್ತಿನ ಸಮಾರಂಭದಲ್ಲಿ ನೆನಪಿಸಿದರು.
ಅದಲ್ಲದೆ ದುಪದಾಳ ಸೇತುವೆ ಮೇಲೆ ಬೀದಿ ದೀಪ ಅಳವಡಿಸಿ ರಾತ್ರಿ ಹೊತ್ತು ಹೆಣ್ಣು ಮಕ್ಕಳಿಗೆ ವಿಹಾರ ಮಾಡಲು ತೊಂದರೆಯಾಗದಂತೆ ಅಳವಡಿಸಿಲಾಗಿದೆ, ಹಾಗೂ ಹೆಣ್ಣುಮಕ್ಕಳಿಗೆ ಆದ್ಯತೆ ನೀಡಿ ಅವರಿಗೆ ಯಾವುದೆ ಸೌಲಬ್ಯದ ಕೊರತೆಯಾಗದಂತೆ ಶೌಚಾಲಯ,ನೀರಿನ ವ್ಯವಸ್ಥೆ ಜೊತೆ ಅವರಿಗೆ ಎಲ್ಲ ಮೂಲಭೂತ ಸೌಕರ್ಯಗಳು ಒದಗಿಸುವ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಮಿಕ ದುರೀಣ ಅಂಬಿರಾವ ಪಾಟೀಲರಿಗೆ ಪುರಸಭೆಯ ಸದಸ್ಯರು, ಸ್ಥಳಿಯ ವಿವಿದ ಸಮುದಾಯದವರು ಸತ್ಕರಿಸಿ ಸನ್ಮಾನಿಸಿದರೆ ವಡ್ಡರ ಸಮಾಜದ ಬಂದುಗಳಿಂದ 7 ಪೂಟ ಆ್ಯಪಲ್ ಹಾರದಿಂದ ವಿಶೇಷವಾಗಿ ಸತ್ಕರಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ಹಿರಿಯ ಸದಸ್ಯರಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ,ಕಿರಿಯ ಅಬಿಯಂಯತರ ಮುತ್ತಪ್ಪ ತೇಲಿ, ಮಲ್ಲಪ್ಪ ಪೆದನ್ನವರ, ರಮೇಶ ಭವಾನೆ, ಅದ್ಯಕ್ಷರಾದ ಕಿರಿಯ ಆರೋಗ್ಯ ನೀರಿಕ್ಷಕ ಬಾಳನಾಯಕ ಕುಮರೇಶಿ, ಅದ್ಯಕ್ಷರಾದ ರಜಿಯಾಬೇಗಂ ಹೊರಕೇರಿ, ಉಪಾದಕ್ಷರಾದ ಮಲ್ಲಪ್ಪ ಹುಕ್ಕೇರಿ,ಗೂಳಪ್ಪ ಅಸೂದೆ, ಅಶೋಕ ಕುಮಾರನಾಯಕ, ಸಾವಂತ ತಳವಾರ, ಅಟಲ್ ಕಡಲಗಿ, ರಾಮನಿಂಗ್ ಮಗದುಮ್,ಕಾಡು ನಾಯಕ, ಮಾರುತಿ ಪೂಜೇರಿ, ಯಲ್ಲಪ್ಪ ಗಾಡಿವಡ್ಡರ, ಕುಮಾರ ಕೊಣ್ಣೂರ,ಇಮ್ರಾನ ಜಮಾದಾರ ಹಾಗೂ ಇನ್ನುಳಿದ ಮಹಿಳಾ ಸದಸ್ಯರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು ಸಂಪತ್ತರಾವ ಕುರಣಿ ಮತ್ತು
ಸಂಜೀವ ಮಾಸ್ತಮರ್ಡಿ ನಿರೂಪಣೆ ಮಾಡಿದರು.