ಕೊಣ್ಣೂರ ಪ್ರಾಥಮಿಕ ಕೇಂದ್ರದಲ್ಲಿ ಕೊರಾನಾ ಲಸಿಕೆ ಪಡೆಯುವ ಅಣುಕು ಪ್ರದರ್ಶನ
ಗೋಕಾಕ : ಕೊನೆಗೂ ಜಗತ್ತನ್ನೆ ಕಾಡಿರುವ ಮಹಾಮಾರಿ ಕೊರಾನಾದ ಲಸಿಕೆ ಬಂದು ಇನ್ನೇನು ಲಸಿಕೆ ನೀಡುವ ಕೆಲವು ದಿನಗಳ ಬಾಕಿ ಇರುವ ಮುಂಚೆ ಲಸಿಕೆಯನ್ನು ಯಾವ ರೀತಿ ಯಾರಿಗೆ ನೀಡಬೇಕೆಂದು ಗೋಕಾಕ ತಾಲೂಕಿನ ಕೊಣ್ಣೂರ ಸರಕಾರಿ ಆಸ್ಪತ್ರೆಯಲ್ಲಿ ಅಣುಕು ಪ್ರದರ್ಶನ ಮಾಡುವ ಮೂಲಕ ಲಸಿಕೆ ನೀಡುವದರ ಬಗ್ಗೆ ಇಲ್ಲಿನ ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ಮತ್ತು ಕೆಲವು ಅಂಗನವಾಡಿ ಕಾರ್ಯಕರ್ತರಿಂದ ಅಣುಕು ಪ್ರದರ್ಶನವನ್ನು ಮಾಡಸಿ ಲಸಿಕೆ ಪಡೆಯುವರು ಹೇಗೆ ಪಡೆಯಬೇಕು, ಅದರಿಂದ ಎನಾದರೂ ಸಮಸ್ಯೆ ಉಂಟಾದಲ್ಲಿ ಯಾವ ರೀತಿ ಆರೋಗ್ಯ ಕಾರ್ಯಕರ್ತರು ಚಿಕಿತ್ಸೆ ನೀಡಬೇಕೆಂದು ಇವತ್ತು ನಡೆಸಲಾದ ಅಣುಕು ಪ್ರದರ್ಶನ ಮುಖಾಂತರ ತಿಳಿಸಿದರು.
ಈ ಸಂದರ್ಬದಲ್ಲಿ ಬೆಳಗಾವಿ ಜಿಲ್ಲಾ ಆರೋಗ್ಯ ಸಂರಕ್ಷಣಾ ಅಧಿಕಾರಿ ಬಾಳಕೃಷ್ಣ ಮಾತನಾಡಿ ಗೋಕಾಕ ತಾಲೂಕಿನಾದ್ಯಾಂತ 19 ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಲಸಿಕೆ ಪಡೆಯುವದರ ಬಗ್ಗೆ ಮಾಹಿತಿ ಇರಲೆಂದು ರಾಜ್ಯ ಸರ್ಕಾರದ ಆದೇಶದಂತೆ ಕೊಣ್ಣೂರ ಸರಕಾರಿ ಆಸ್ಪತ್ರೆಯಲ್ಲಿ ಕೆಲವರಿಂದ ಅಣುಕು ಪ್ರದರ್ಶನ ಮಾಡಿಸಿದ್ದೇವೆ, ಇನ್ನು ಮೊದಲನೆ ಹಂತದಲ್ಲಿ ಗೋಕಾಕ ತಾಲೂಕಿನಲ್ಲಿ ಆರೋಗ್ಯ ಕಾರ್ಯಕರ್ತರಾದ 556,ಆಶಾ ಕಾರ್ಯಕರ್ತರು, 623- ಅಂಗನವಾಡಿ ಕಾರ್ಯಕರ್ತರು, 471 ಆರೋಗ್ಯ ಸಹಾಯಕರನ್ನು ಸೇರಿಸಿ ಒಟ್ಟು 1650 ಜನರಿಗೆ ಲಸಿಕೆ ನೀಡಲು ಎಲ್ಲ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದೇವೆಂದರು.
ಈ ಸಂದರ್ಭದಲ್ಲಿ ಗೋಕಾಕ ವೈದ್ಯಾಧಿಕಾರಿಗಳಾದ ಎಮ್,ಎಸ್,ಕೊಪ್ಪದ, ಸ್ಥಳಿಯ ಕೊಣ್ಣೂರ ಪ್ರಾಥಮಿಕ ವೈದ್ಯಾಧಿಕಾರಿಗಳಾದ ಜೆ,ವಿ, ಅಂಗಡಿ.ಹಿರಿಯ ಆರೋಗ್ಯ ಸಹಾಯಕಾರದ ಎ,ಎಸ್,ತಹಸಿಲ್ದಾರ,ಶ್ರೀಮತಿ ಬಿ,ಸಿ,ಚಂದರಗಿ, ಬಿಪಿಎಮ್,ಓ, ನೀತಿನ ಶಿಂದೆ,ಶ್ರೀಮತಿ ಎಮ್,ಎಸ್,ನಾಯಿಕ,ಎನ್,ಎಮ್,ಅತ್ತಾರ,ಹಾಗೂ ಲ್ಯಾಬ್ ಟೆಕ್ನಿಷಿಯನ್ ವಿನೋದಕುಮಾರ ಕೊರೋಸಿ, ಸಿಬ್ಬಂದಿಗಳು ಮತ್ತು ಆಶಾ ,ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.