ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ ಶಾಲಾ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿ
ಸರ್ಕಾರ ಇಂದಿನಿಂದ 1ರಿಂದ 9 ರವರೆಗೆ ಪ್ರಾರಂಭಿಸಲು ಅನುಮತಿ ಕೊಟ್ಟಿದ್ದು ಕೊಣ್ಣೂರಲ್ಲಿನ ಆಚಾರ್ಯ ಶಾಂತಿ ಸಾಗರ ತಪೋವನ ಶಿಕ್ಷಣ ಸಂಸ್ಥೆಯ ಶಾಲೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಸರಕಾರದ ನಿಯಮದಂತೆ ವಿದ್ಯಾಗಮನದಲ್ಲಿ ಕಲಿಯಲು ಬರುತ್ತಿದ್ದಾರೆ.
ಗೋಕಾಕ ತಾಲೂಕಿನ ಕೊಣ್ಣೂರಿನಲ್ಲಿರುವ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಇಂದಿನಿಂದ ವಿದ್ಯಾಗಮನ ಪ್ರಾರಂಭವಾಗಿದ್ದು ಬಹುತೇಕ ಕೊಣ್ಣೂರ ಪಟ್ಟಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಶಾಲೆಗಳಲ್ಲಿ ನಡೆಯುತ್ತಿರುವ ವಿದ್ಯಾಗಮನಕ್ಕೆ ಬರುತ್ತಿದ್ದು ಕೆಲವು ವಿದ್ಯಾರ್ಥಿಗಳು ಮಾತ್ರ ಕೊರಾನಾ ಕಾರಣದಿಂದ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.
ಗೋಕಾಕ ಶಿಕ್ಷಣಾಧಿಕಾರಿ ಜಿ,ಬಿ,ಬಳಿಗಾರ ಆದೇಶದಂತೆ ಕೊಣ್ಣೂರಲ್ಲಿರುವ ಎಲ್ಲ ಶಾಲೆಯ ಕೊಠಡಿಗಳಿಗೆ ಅಂಗಳಕ್ಕೆ, ಪುರಸಭೆ ಕೊಣ್ಣೂರಿನಿಂದ ಕೊಠಡಿಗಳಿಗೆ ಶ್ಯಾನೀಟೈಸರ, ಸಿಂಪಡಿಸಿ ಸ್ವಚ್ಛ ಗೊಳಿಸಲಾಗಿದೆ.
ಇನ್ನು ವಿದ್ಯಾರ್ಥಿಗಳಿಗೆ ತರಗತಿಗೆ ಬರುವಾಗ ಸ್ಥಳಿಯ ಆಚಾರ್ಯ ಶ್ರೀ ಶಾಂತಿ ಸಾಗರ ತಪೋವನ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಾಲೆಯ ಚೆರಮ್ಮನ್ನರಾದ ಜಿನ್ನಪ್ಪ ಚೌಗಲಾ ಮತ್ತು ಮಾಹವೀರ ಬೂದಿಗೊಪ್ಪ ಹೂ ನೀಡಿ ಸ್ವಾಗತಿಸಿ ಶುಭ ಹಾರೈಸಿ ಎಲ್ಲರಿಗೂ ಕಡ್ಡಾಯವಾಗಿ ಮಾಸ್ಕ ದರಿಸಿಕೊಂಡು ಬರಲು ಸೂಚಿಸಿ ಶಾರದಾಂಬೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಭೋದನೆ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಸುಧಾ ಪೂಜೇರಿ,ರೋಹಿಣಿ ಮಿಶಾಳೆ, ಮಹೇಶ್ವರಿ ಸಿದ್ದನ್ನವರ,ಆರತಿ ಐಹೋಳೆ, ಗೀತಾ ಹಲಗಿ ಹಾಗೂ ಶಿಕ್ಷಕ ಲಕ್ಷ್ಮಣ ಬಜಂತ್ರಿ ಉಪಸ್ಥಿರಿದ್ದರು.