Breaking News

ಕೊಣ್ಣೂರ ಪುರಸಭೆಗೆ ಅದ್ಯಕ್ಷರಾಗಿ ವಿನೋದ ಕರನಿಂಗ ,ಉಪಾದಕ್ಷರಾಗಿ ಯಲ್ಲವ್ವ ನಾಯಕ,ಅವಿರೋದ ಆಯ್ಕೆ.

Spread the love

ಕೊಣ್ಣೂರ ಪುರಸಭೆಗೆ ಅದ್ಯಕ್ಷರಾಗಿ ವಿನೋದ ಕರನಿಂಗ ,ಉಪಾದಕ್ಷರಾಗಿ ಯಲ್ಲವ್ವ ನಾಯಕ,ಅವಿರೋದ ಆಯ್ಕೆ.

ಗೋಕಾಕ: ತಾಲೂಕಿನ ಕೊಣ್ಣೂರ ಪುರಸಭೆಯ ನೂತನ ಅಧ್ಯಕ್ಷರಾಗಿ ವಿನೋದ ಕರನಿಂಗ ಮತ್ತು ಉಪಾಧ್ಯಕ್ಷರಾಗಿ ಯಲ್ಲವ್ವ ಲಗಮಣ್ಣ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುದವಾರದಂದು ಜರುಗಿದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ.

ಸಾಮಾನ್ಯ ಪುರುಷನಿಗೆ ಅದ್ಯಕ್ಷಸ್ಥಾನವು ಮೀಸಲಿದ್ದರೇ, ಉಪಾಧ್ಯಕ್ಷ ಸ್ಥಾನವು ಪರಿಶಿಷ್ಡ ಪಂಗಡ ಮಹಿಳೆಗೆ ಮೀಸಲಿತ್ತು. ಶಾಸಕ ಶಾಸಕ ರಮೇಶ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.
ಚುನಾವಣಾಧಿಕಾರಿಯಾಗಿ ಗೋಕಾಕ ತಹಶೀಲದಾರ ಡಾ|| ಮೊಹನ ಬಸ್ಮೆ ಕರ್ತವ್ಯ ನಿರ್ವಹಿಸಿದರು.
ಚುನಾವಣಾ ಪ್ರಕ್ರೀಯೆ ಮುಗಿದ ಬಳಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿನೋದ ಗೋವಿಂದ ಕರನಿಂಗ ಅವರು, ನಮ್ಮ ಜನಪ್ರೀಯ ಶಾಸಕರಾದ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ, ಹಾಗೂ ಪುರಸಭೆಯ ಸದಸ್ಯರು ಮತ್ತು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಣ್ಣೂರ,ನಾಯಿಕವಾಡಿ,ಮರಡಿಮಠ,ಮಾನಿಕವಾಡಿ ಮತ್ತು ಗೋಕಾಕ ಪಾಲ್ಸದ ಅಭಿವೃದ್ದಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇನೆಂದು ತಿಳಿಸಿದರು.

ನೂತನವಾಗಿ ಆಯ್ಕೆಯಾದ ಅದ್ಯಕ್ಷ ,ಉಪಾದಕ್ಷರಿಗೆ ಪುರಸಭೆಯ ಸಿಬ್ಬಂದಿಗಳು,ಸದಸ್ಯರುಗಳು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಶಿವಾನಂದ ಹಿರೆಮಠ, ಪುರಸಭೆಯ ಸರ್ವ ಸದಸ್ಯರು, ಶಾಸಕರ ಆಪ್ತ ಸಹಾಯಕರಾದ ಸುರೇಶ ಸನದಿ,ಗ್ರಾಮಲೆಕ್ಕಾಧಿಕಾರಿ ಟಿ,ಎಲ್,ಪಮ್ಮಾರ, ಗ್ರಾಮೀಣ ಪೋಲಿಸ್ ಠಾಣೆಯ ಎ,ಎಸ್,ಐ, ಟಿ,ಎಸ್,ದಳವಾಯಿ, ಸಿಬ್ಬಂದಿಗಳಾದ ಹಣಮಂತ ಗೌಡಿ,ನಾಗರಾಜ ದುರದುಂಡಿ ಮತ್ತು ಮುಖಂಡರುಗಳಾದ ಈರಪ್ಪ ಮಲ್ಲಪ್ಪ ಕಮತ,ಮಡಿವಾಳಪ್ಪ ಶಿಗಿಹಳ್ಳಿ,ಶ್ರೀಶೈಲ ಕಮತ್, ಉಪಸ್ಥಿತರಿದ್ದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *