ಎಸ್ ಬಿ ಘಾಟಗೆ ಇವರ ಬೆಂಬಲಿಗರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ
ಅವಿರೋಧವಾಗಿ ಆಯ್ಕೆ
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಗ್ರಾಮ ಪಂಚಾಯತ ನೂತನವಾಗಿ ಅಧ್ಯಕ್ಷರಾಗಿ ಶ್ರೀಮತಿ ಸುನಂದಾ
ಸದಾಶಿವ ಅಕ್ಕೇನ್ನವರ. ಹಾಗೂ ಉಪಾಧ್ಯಕ್ಷರಾಗಿ ಶಾಹಿನ ರೋಫ್ ಚಮ್ಮನ್ನಮಲಿಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಘೋಷಣೆ ಮಾಡಿದ ಬಳಿಕ ಬಳಿಕ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತ್ಕರಿಸಿದರು.
ಕುಡಚಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 41 ಸದಸ್ಯರಿದ್ದು ಅದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ 34 ಸದಸ್ಯರಿಂದು ಹೀಗಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗರ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋದವಾಗಿ ಆಯ್ಕೆಯಾದರು.
ಮಾದ್ಯಮಗಳೊಂದಿಗೆ ಮಾತನಾಡಿದ ನೂತನ ಅದ್ಯಕ್ಷೆ
ಶ್ರೀಮತಿ ಸುನಂದಾ ಸದಾಶಿವ ಅಕ್ಕೇನ್ನವರ ಅವರು ಗ್ರಾಮ ಪಂಚಾಯತಿ ಸದಸ್ಯರ ಮತ್ತು ಗ್ರಾಮಸ್ಥರ ಸಹಕಾರದಿಂದ ಗ್ರಾಮ ಅಭಿವೃದ್ಧಿ ಮಾಡಲಾಗುವದು ಹೆಚ್ಚು ಕುಡಿಯುವ ನೀರು ಸ್ವಚ್ಛತೆ, ಚಂರಡಿ ಅಭಿವೃದ್ಧಿ ಮಾಡಿ ಗ್ರಾಮವನ್ನು ಸ್ವಚ್ಛಗ್ರಾಮ ಮಾಡುವ ಗುರಿ ನಮ್ಮದ್ದಾಗಿದ್ದೆಂದರು,
ಉಪಾದ್ಯಕ್ಷ ಶಾಹಿನ ರೋಫ್ ಚಮ್ಮನ್ನಮಲಿಕ ಮಾತನಾಡಿ ನನಗೆ ಸಿಕ್ಕ ಅವಕಾಶದಲ್ಲಿ ಗ್ರಾಮದ ಮೂಲ ಭೂತ ಸೌಕರ್ಯಕ್ಕಾಗಿ ಶ್ರಮಿಸುವೆ ಎಂದರು
ಜನಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗಾಣಗೇರ ಮಾತನಾಡಿ ಗ್ರಾಮದ ಮುಖಂಡರ ಮಾರ್ಗದರ್ಶನದಲ್ಲಿ ಮತ್ತು ಸದಸ್ಯರ ಸಹಕಾರದಿಂದ ಗ್ರಾಮದ ಅಭಿವೃದ್ಧಿಗೆ ಮನ್ನಣೆ ನೀಡಲಾಗುವದು, ನಮ್ಮ ಗ್ರಾಮದ ಅಭಿವೃದ್ಧಿಯನ್ನು ಮಾಜಿ ಶಾಸಕ ಎಸ್ ಬಿ ಘಾಟಗೆ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರೊಂದಿಗೆ ಮಾತನಾಡಿ ಗ್ರಾಮದಲ್ಲಿ ಇನ್ನು ಸಾಕಷ್ಟು ಅಭಿವೃದ್ಧಿ ಮಾಡುವ ಗ್ರಾಮಸ್ಥರ ಹೆಚ್ಚಿನ ಜವಾಬ್ದಾರಿಯಾಗಿದ್ದು ನಾವುಗಳು ಸಹ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರಿಗೆ ಸಹಾಯ ಸಹಕಾರ ನೀಡುತ್ತೇವೆಂದು ವಿಶ್ವನಾಥ ಗಾಣಿಗೇರ ಹೇಳಿದರು.
ಈ ಸಂದರ್ಭದಲ್ಲಿ ಅನೀಲ ಗಾಣಿಗೇರ. ಹಣಮಂತ ಅಕ್ಕೇನ್ನವರ. ಕೃಷ್ಣಾ ಗಾಣಿಗೇರ. ಜರ್ವರ ಚಮ್ಮನ್ನಮಲಿಕ. ಸಂಜು ಅಕ್ಕೇನ್ನರ. ಪರಶುರಾಮ ಅಕ್ಕೇನ್ನವರ. ಲಕ್ಣ್ಮಣ ಮಚ್ಚನ್ನವರ. ಅಮೀನ ಜಾತಗಾರ. ಸಧಾಶಿವ ಅಕ್ಕೇನ್ನವರ. ಬೈಲುನ ರೆಡ್ಡಿ. ರಾಜು ಗಸ್ತಿ. ಉಪಸ್ಥಿತರಿದ್ದರು.