ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಸುರೇಶ ಸನದಿ ಚಾಲನೆ
ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಎಲ್ಲ ಮನೆ ಗಳಿಗೆ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿಗೆ ಗೋಕಾಕ ಮತಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಸುರೇಶ ಸನದಿ ಅವರು ಬುಧವಾರ ದಂದು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಶಿಂದಿಕುರಬೇಟ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಶಾಸಕ ರಮೇಶ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ಗ್ರಾಮದ ಹಿರಿಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಸಹಕಾರ ಮುಖ್ಯವಾಗಿದೆ.
ಗ್ರಾಮದ ಅಭಿವೃದ್ಧಿ ಗೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರೇಣುಕಾ ಈರಪ್ಪ ಪಾಟೀಲ, ಉಪಾಧ್ಯಕ್ಷ ಭೀಮಪ್ಪ ಯಲ್ಲಪ್ಪ ಬಿರನಾಳಿ, ಜಿ.ಪಂ ಮಾಜಿ ಸದಸ್ಯ ಸುಧೀರ್ ಜೊಡಟ್ಟಿ, ಹಿರಿಯರಾದ ಗುರು ಕಡೇಲಿ, ಜೋತ್ತೆಪ್ಪ ಬಂತಿ,ಅಡಿವೆಪ್ಪ ಬೆಳಗಲಿ, ಗೋವಿಂದ ಗಾಡಿವಡ್ಡರ, ಸಿದ್ಧಾರೂಢ ಕಂಬಾರ,ದಯಾನಂದ ಬೆಳಗಾವಿ, ಹಾಲಪ್ಪ ಕರಿಗಾರ, ಜಿ.ಪಂ ಸಹಾಯಕ ಇಂಜಿನಿಯರ್ ಸುಮನ ಜಾಧವ್ ಮತ್ತು ಗ್ರಾಮ ಪಂಚಾಯತ್ ಪಿಡಿಒ ಸಾಯೀಶ್ವರಿ ಮೆಣಸಿನಕಾಯಿ, ಲೆಕ್ಕಾಧಿಕಾರಿ ವಿಠ್ಠಲ ಕುಳ್ಳೂರ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
Fast9 Latest Kannada News