*ಇನ್ಮುಂದೆ ಚಿಕನ್ , ಫಿಶ್ ಕಬಾಬಗೆ ಕೃತಕ ಬಣ್ಣ ಹಾಕಿದರೆ ಬೀಳುತ್ತದೆ ಭಾರಿ ದಂಡ ಅಥವಾ ಜೈಲು ಶಿಕ್ಷೆ*
ಬೆಂಗಳೂರು, ಜೂನ್ 24: ಬಾಂಬೆ ಮಿಠಾಯಿ ಬ್ಯಾನ್ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಕಬಾಬ್ ಗೆ ಹಾಕುವ ಕೃತಕ ಬಣ್ಣವನ್ನು ಸಹ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕದಲ್ಲಿ ಮಕ್ಕಳ ಜನಪ್ರಿಯ ಆಹಾರ ಪದಾರ್ಥಗಳ ಕಾಟನ್ ಕ್ಯಾಂಡಿ ಬ್ಯಾನ್ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರೋಡಮೈನ್-ಬಿ ಅಥವಾ ಆರ್‌ಎಚ್‌ಬಿ ಎಂಬ ರಾಸಾಯನಿಕವು ಆಹಾರದ ಮೂಲಕ ದೇಹ ಸೇರಿದರೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬಹುಜನರು ಇಷ್ಟ ಪಡುವ ಚಿಕನ್ ಕಬಾಬ್ , ಫಿಶ್ ಕಬಾಬಗೆ ಯಾವುದೇ ರೀತಿಯ ಕೃತಕ ಬಣ್ಣ ಬಳಸುವುದನ್ನ ನಿಷೇದಿಸಿ ಸುತ್ತೋಲೆ ಹೊರಡಿಸಲಾಗುವುದು. ಬೀದಿ ಬದಿಯ ತಳ್ಳ ಗಾಡಿ ವ್ಯಾಪಾರಿಗಳಿಂದ ಹಿಡಿದು ಪಂಚ ತಾರಾ ಹೋಟೋಲ್ ವರೆಗೂ ಆದೇಶ ಅನ್ವಯವಾಗುತ್ತದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಆಹಾರ ಪದಾರ್ಥಗಳನ್ನು ತಯಾರಿಸಿದರೆ ಜೈಲು ಅಥವಾ 10 ಲಕ್ಷ ರೂ, ದಂಡ ವಿಧಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ರಾಜ್ಯ ಸರಕಾರ ಆದೇಶಿಸಿದೆ.