ಈ ಕಚೇರಿಯಲ್ಲಿ ಅಂಬೇಡ್ಕರ ಭಾವಚಿತ್ರ ಹಾಕಲಿಕ್ಕೆ ಸ್ಥಳವಿಲ್ಲವಂತೆ,,,
ನಮ್ಮ ದೇಶಕ್ಕೆ ಸಂವಿಧಾನ ನೀಡಿದ ಭಾಬಾ ಸಾಹೇಬ ಅಂಬೇಡ್ಕರ ಅವರನ್ನು ವಿಶ್ವದಾದ್ಯಂತ ಜ್ಞಾನಿಯೆಂದು ಹೊಗುಳಿ ಅವರಿಗೆ ಗೌರವ ನೀಡುತ್ತಲಿವೆ,
ಆದರೆ ಅಂತಹ ಮಹಾನ ವ್ಯಕ್ತಿಗೆ ನಮ್ಮ ದೇಶದಲ್ಲಿ ಅವರ ಭಾವ ಚಿತ್ರ ಹಾಕಲಿಕ್ಕೆ ಸ್ಥಳವಿಲ್ಲದೆ ಹಳೆಯ ದಾಖಲಾತಿಗಳ ಮದ್ಯೆ ಇಟ್ಟು ಅವಮಾನ ಮಾಡಿದ ಘಟನೆ ಗೋಕಾಕಿನ ತಹಸಿಲ್ದಾರ ಕಚೇರಿಯಲ್ಲಿರುವ ಹಿರಿಯ ನೊಂದಣಿ ಕಚೇರಿಯಲ್ಲಿ ಕಂಡು ಬಂದಿದೆ,
ಸಂವಿಧಾನದ ಆದಾರದ ಮೇಲೆ ಸರಕಾರಿ ಕೆಲಸ ಮಾಡುತ್ತಿರುವ ಗೋಕಾಕ ಹಿರಿಯ ನೊಂದಣಿ ಅಧಿಕಾರಿಗೆ ಅಂಬೇಡ್ಕರ ಭಾವ ಚಿತ್ರ ಕಾಣಲಿಲ್ಲವೋ ಅಥವಾ ಕಾಣಿದ್ದು ಕುರುಡರಂತೆ ನಡೆದುಕೊಂಡಿದ್ದಾರೋ ತಿಳಿಯುತ್ತಿಲ್ಲ, ದೇಶಕ್ಕೆ ಸಂವಿಧಾನ ಬರೆದುಕೊಟ್ಟ ಮಹಾನಾಯಕ ಭಾರತ ರತ್ನ, ಅಂಬೇಡ್ಕರ ಇವರ ಭಾವ ಚಿತ್ರದ ಎಲ್ಲಿ ಅನ್ನುವುದನ್ನೆ ಮರೆತಿದ್ದಾರೆ ಇಲ್ಲಿನ ಅಧಿಕಾರಿ,ಪಾಪ ದಿನಾಲು ನೂರಾರು ಜನ ಈ ಕಚೇರಿಗೆ ಬಂದು ನೊಂದಣಿ ಮಾಡಿಸಿ ಹೊಗುತ್ತಿರುವಾಗ ತಮ್ಮ ಆದಾಯದ ಮೇಲೆ ಇರುವ ಗಮನ ಬಾಬಾ ಸಾಹೇಬ ಅಂಬೇಡ್ಕರ ಭಾವ ಚಿತ್ರದ ಮೇಲೆ ಹೇಗಿರುತ್ತದೆ ಹೇಳಿ,,
ದಿನಾಲು ಒಂದಿಲ್ಲ ಒಂದು ಕೆಲಸಕ್ಕೆ ತಹಸಿಲ್ದಾರ ಕಚೇರಿಯಲ್ಲಿ ಇರುತ್ತಿರುವ ದಲಿತ ಸಂಘಟನೆಗಳಿಗೆ ಈ ಬಾವ ಚಿತ್ರ ಕಾಣಲಿಲ್ಲವೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.