ಶಿಂದಿಕುರಬೇಟ ಗ್ರಾಮದಲ್ಲಿ ಅನಧಿಕೃತ ಆನ್‍ಲೈನ್ ಕೇಂದ್ರಕ್ಕೆ ಬೀಗ
- ಘಟಪ್ರಭಾ: ಅನಧಿಕೃತವಾಗಿ ಆನ್‍ಲೈನ್ ಕೇಂದ್ರ ತೆರೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಗ್ರಾಮೋದ್ಧಾರ ಕೇಂದ್ರ ನಾಗರೀಕ ಸೇವಾ ಕೇಂದ್ರ, ಸಿಎಸ್‍ಸಿ ಗ್ರಾಹಕರ ಸೇವಾ ಕೇಂದ್ರದ ಮೇಲೆ ಗೋಕಾಕ ತಹಶೀಲ್ದಾರ ಅವರ ಆದೇಶದ ಮೇರೆಗೆ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಸೇರಿ ಅನಧಿಕೃತ ಆನ್ ಲೈನ್ ಸೆಂಟರ್ ಗೆ ಬೀಗ ಹಾಕಿ ಬಂದ್ ಮಾಡಲಾಯಿತು.
ಅರಭಾವಿ ಗ್ರಾಮದ ಆನಂದ ಕಡ್ಡಿ ಎಂಬುವವರು ಶಿಂದಿಕುರಬೇಟ ಗ್ರಾಮದಲ್ಲಿ ಗ್ರಾಮೋದ್ಧಾರ ಕೇಂದ್ರವನ್ನು ತೆರೆದು ಕಳೆದ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಸರಕಾರದಿಂದ ಯಾವುದೇ ಅನುಮತಿ ಪಡೆಯದೇ ಅನಧಿಕೃತ ಕಾರ್ಯ ನಿರ್ವಹಿಸುತ್ತಾ ಆಧಾರ್ ಕಾರ್ಡ ತಿದ್ದುಪಡೆ, ಆಧಾರ ಹೊಸ ಅರ್ಜಿ, ಪಡಿತರ ಚೀಟಿ ಹೊಸ ಅರ್ಜಿ, ತಿದ್ದುಪಡಿ, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ ತಿದ್ದುಪಡಿ ಅಲ್ಲದೇ ಇನ್ನೂ ಹಲವಾರು ಅವಶ್ಯಕ ದಾಖಲೆಗಳನ್ನು ತಿದ್ದುಪಡಿಗಳನ್ನು ಮಾಡಿ ಸಾರ್ವಜನಿಕರಿಂದ ಮನಸ್ಸೋ ಇಚ್ಚೇ ಹಣ ವಸೂಲಿ ಮಾಡುತ್ತಿದ್ದು ಈ ಬಗ್ಗೆ ಸಾರ್ವಜನಿಕರು ತಹಶೀಲ್ದಾರ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಬಿ.ಎಲ್.ಕೆಂಚರಡ್ಡಿ, ಪಿಡಿಒ ಯಲ್ಲಪ್ಪ ಮೂಡಲಗಿ ಗ್ರಾಮೋದ್ಧಾರ ಕೇಂದ್ರಕ್ಕೆ ಬೀಗ ಹಾಕಿ ಮೇಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ.